ಬೆಂಗಳೂರಿನಲ್ಲಿ ಇಂದೂ ವರುಣನ ಆರ್ಭಟ; ಹಲವೆಡೆ ಆಲಿಕಲ್ಲು
Team Udayavani, May 17, 2019, 2:25 PM IST
ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನವೂ ಭಾರೀ ಮಳೆಯಾಗಿದೆ. ಹಲವೆಡೆ ಆಲಿಕಲ್ಲು ಬಿದ್ದಿದೆ.
ಜೋರಾದ ಗಾಳಿಯೊಂದಿಗೆ ಮಧ್ಯಾಹ್ನಮಳೆ ಸುರಿದ ಪರಿಣಾಮ ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ.
ಕೋರಮಂಗಲ, ವಿಧಾನಸೌಧ, ವಿಲ್ಸನ್ ಗಾರ್ಡನ್, ಶಾಂತಿನಗರ ರಿಚ್‌ಮಂಡ್ ಟೌನ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲುಸಹಿತ ಮಳೆ ಬಿದ್ದಿದೆ.
ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು ಸಂಚಾರಕ್ಕೆ ತೊಡಕಾಗಿದೆ.