
ಫ್ರಾನ್ಸ್‌ನಲ್ಲೂ ಹಿಜಾಬ್, ಹಲಾಲ್ ನಿಷೇಧದ ಕೂಗು!
Team Udayavani, Apr 21, 2022, 8:25 AM IST

ಪ್ಯಾರಿಸ್: ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಉಲ್ಪಣಿಸಿದ್ದ ಹಿಜಾಬ್ ಹಾಗೂ ಹಲಾಲ್ ಕಟ್ ನಿಷೇಧದ ಕೂಗು ದೂರದ ಫ್ರಾನ್ಸ್‌ನಲ್ಲಿಯೂ ಪ್ರತಿ ಧ್ವನಿಸಿದೆ. ಅಲ್ಲೀಗ ಅಧ್ಯಕ್ಷೀಯ ಚುನಾವಣೆಯ ಕಾವು ಹೆಚ್ಚಾಗಿದ್ದು, ಮತದಾನದ ಮೊದಲ ಹಂತ ಎ. 10ರಂದು ಮುಗಿದಿದೆ. ಎ. 24ರಂದು 2ನೇ ಹಂತದ ಮತದಾನ ನಡೆಯಲಿದೆ.
ಕುತೂಹಲಕಾರಿ ವಿಚಾರವೇನೆಂದರೆ, ಭಾರತದಲ್ಲಿನ ಪ್ರತೀ ಚುನಾವಣೆಗಳಲ್ಲಿ ವ್ಯಕ್ತವಾಗುವಂತೆ ರಾಷ್ಟ್ರೀಯವಾದ ಹಾಗೂ ಜಾತ್ಯತೀತತೆ ಅಲ್ಲಿಯ ಚುನಾವಣ ಪ್ರಚಾರಗಳಲ್ಲಿಯೂ ಮೇಳೈಸಿವೆ.
2020ರಲ್ಲಿ ಇಸ್ಲಾಂ ಧರ್ಮ ಸಂಸ್ಥಾಪಕರ ವಿರುದ್ಧ ಅವಹೇಳನಕಾರಿ ಕಾರ್ಟೂನ್ ನನ್ನು ತರಗತಿಯಲ್ಲಿ ಪ್ರದರ್ಶಿಸಿದ ಆರೋಪ ಹೊತ್ತಿದ್ದ ಶಿಕ್ಷಕನೊಬ್ಬನನ್ನು ದುಷ್ಕರ್ಮಿಗಳು ಶಿರಚ್ಛೇದ ಮಾಡಿದ ಘಟನೆ ಅನಂತರ ಅಲ್ಲಿ ಮುಸ್ಲಿಮರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಹಾಗಾಗಿ ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಹಿಜಾಬ್, ಹಲಾಲ್ ವಿಚಾರಗಳು ಅಲ್ಲಿ ಪ್ರಸ್ತಾವವಾಗಿವೆ. ಹಾಗಾಗಿ ಕೆಲವು ಕಾಯ್ದೆ ಗಳು ಅಲ್ಲಿ ಜಾರಿಯಾಗಿವೆ. ದಶಕದ ಹಿಂದೆಯೇ ಅಲ್ಲಿ ಬುರ್ಖಾ ಅಥವಾ ಮುಖವನ್ನು ಧಾರ್ಮಿಕ ಕಾರಣಗಳಿಗಾಗಿ ಮರೆ ಮಾಚುವಂಥ ವಸ್ತ್ರಗಳಿಗೆ ನಿಷೇಧ ಹೇರಲಾಗಿದೆ. ಇದೇ ಫೆಬ್ರವರಿಯಲ್ಲಿ ಕ್ರೀಡೆಗಳಲ್ಲಿ ಹಿಜಾಬ್ ನಿಷೇಧಿಸಲಾಗಿದೆ.
ಇದನ್ನೂ ಓದಿ:ನಿಯೋಜನೆಗೆ ಒತ್ತಡ ಹೇರಿದವರ ವಿರುದ್ಧ ಶಿಸ್ತುಕ್ರಮ: ಪ್ರಭು ಚವ್ಹಾಣ್ ಎಚ್ಚರಿಕೆ
ಮರಿನ್ ಮತ್ತು ಹಿಜಾಬ್ ನಡುವೆ ಸ್ಪರ್ಧೆ: ಇನ್ನು, ಮರಿನ್ ಲೆ ಪೆನ್ ಅವರು ತಮ್ಮ ಚುನಾ ವಣ ಪ್ರಚಾರದಲ್ಲಿ ತಾವು ಅಧಿಕಾರಕ್ಕೆ ಬಂದರೆ, ಸಾರ್ವ ಜನಿಕ ಸ್ಥಳಗಳಲ್ಲಿ ಹಿಜಾಬ್ ಅನ್ನು ಧರಿಸುವುದಕ್ಕೆ ನಿಷೇಧ ಹೇರುವುದಾಗಿ ಹೇಳಿ ದ್ದಾರೆ. ಇದಲ್ಲದೆ ಕ್ರಮವಾಗಿ ಮುಸ್ಲಿಮರ ಹಾಗೂ ಯೆಹೂದಿಗಳ ಸಾಂಪ್ರದಾಯಿಕ ಪ್ರಾಣಿವಧೆಯ ಮಾರ್ಗಗಳಾದ ಹಲಾಲ್, ಕೋಶರ್ ಮಾಂಸವನ್ನು ನಿಷೇಧಿಸುವುದಾಗಿ ಹೇಳಿದ್ದಾರೆ. ಇವರೆಡರ ಬಗ್ಗೆ ಮ್ಯಾಕ್ರನ್ ನೇರ ಪ್ರಸ್ತಾವಿಸಿಲ್ಲ. ಆದರೂ ಶಾಲೆಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ಹಿಜಾಬ್ ನಿಷೇಧಿಸುವ ತಮ್ಮ ಸರಕಾರದ ಕಾನೂನು ಮುಂದುವರಿಸಿರುವುದಾಗಿ ಹೇಳಿದ್ದಾರೆ. ಇವರಿಬ್ಬರಿಗೆ ಶೇ. 9ರಷ್ಟಿರುವ ಮುಸ್ಲಿಂ ಸಮುದಾಯ ಚುನಾವಣೆಯಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದು ಕುತೂಹಲ ಕಾರಿಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್