Hiroshima Day 2022; ಮಾಗದ ಅಣು ಗಾಯ- ಮತ್ತೆಂದೂ ಮರುಕಳಿಸದಿರಲಿ

ಹಿರೋಶಿಮಾದ 4.7 ಚದರ ಮೈಲಿ ವಿಸ್ತೀರ್ಣದಷ್ಟು ಸ್ಥಳ ನಾಶವಾಯಿತು.

Team Udayavani, Aug 6, 2022, 1:58 PM IST

Hiroshima Day 2022; ಮಾಗದ ಅಣು ಗಾಯ- ಮತ್ತೆಂದೂ ಮರುಕಳಿಸದಿರಲಿ

ಅದು ಎರಡನೆಯ ಮಹಾಯುದ್ಧವು ಕೊನೆಗೊಳ್ಳುವ ಕಾಲ. 1945 ಆಗಸ್ಟ್‌ 6 ಇಡೀ ಮನುಕುಲವೇ ಬೆಚ್ಚಿ ಬಿದ್ದ ದಿನ. ಅದುವರೆಗೂ ಸಾಂಪ್ರದಾಯಿಕ ಬಾಂಬ್‌ಗಳ ಸದ್ದು ಕೇಳಿದ್ದ ಜನರು, “ಅಣು ಬಾಂಬ್‌’ ಎಂಬ ಆಧುನಿಕ ರಕ್ಕಸನ ಅಟ್ಟಹಾಸಕ್ಕೆ ಅಂದು ಸಾಕ್ಷಿಯಾಗಿತ್ತು. ಬಲಿಷ್ಠ ದೇಶಗಳಲ್ಲೊಂದಾಗಬೇಕೆಂದು ಹಪಹಪಿ ಸುತ್ತಿದ್ದ ಜಪಾನ್‌ನ ಪ್ರಮುಖ ನಗರಗಳ ಲ್ಲೊಂದಾದ ಹಿರೋಶಿಮಾದ ಮೇಲೆ ಬೆಳ್ಳಂ ಬೆಳಗ್ಗೆ ಧುತ್ತನೆ ಎರಗಿದ ಪರಮಾಣು ಬಾಂಬ್‌, ಆ ದೇಶದ ಕನಸನ್ನೇ ನುಚ್ಚುನೂರಾಗಿಸಿತು.

ಎರಡನೆಯ ಮಹಾಯುದ್ಧದಲ್ಲಿ ಅಮೆ ರಿಕ ಮತ್ತು ಬ್ರಿಟನ್‌ ನೇತೃತ್ವದ ಮಿತ್ರ ರಾಷ್ಟ್ರಗಳಿಗೆ ಜರ್ಮನಿ ಸೋತು ಶರಣಾಗಿತ್ತು. ಆದರೆ ಏಷ್ಯಾ ಖಂಡದ ಪ್ರಬಲ ರಾಷ್ಟ್ರವಾ ಗಬೇಕೆಂಬ ಧಾವಂತದಲ್ಲಿದ್ದ ಜಪಾನ್‌ನ ಅಂದಿನ ರಾಜ ಹಿರೋಹಿಟೋ ಮಾತ್ರ ಮಿತ್ರ ರಾಷ್ಟ್ರಗಳ ಮುಂದೆ ಶರಣಾಗತಿಗೆ ಮುಂದಾಗಲಿಲ್ಲ. ಬದಲಾಗಿ ಅಮೆರಿಕದ ಪರ್ಲ್ ಹಾರ್ಬರ್‌ ಮೇಲೆ ವೈಮಾನಿಕ ದಾಳಿ ನಡೆಸಿ ಅಲ್ಲಿದ್ದ ಕೈದಿಗಳೂ ಸೇರಿದಂತೆ ಸಾವಿರಾರು ಜನರನ್ನು ಬಲಿ ಪಡೆದರು. ಈ ದಾಳಿಯು ಸರ್ವಶಕ್ತ ರಾಷ್ಟ್ರಗಳಲ್ಲೊಂದಾಗಿದ್ದ ಅಮೆರಿಕವನ್ನು ಕ್ರೌರ್ಯತೆಯ ಕೂಪಕ್ಕೆ ತಳ್ಳಲು ಕಾರಣವಾಯಿತು. ತನ್ನ ಹಿಂದಿನ ಅಧ್ಯಕ್ಷ ಫ್ರ್ಯಾಂಕ್ಲಿನ್‌ ಡಿ. ರೂಸ್ವೆಲ್ಟ್ ನಲ್ಲಿ ಅಧಿಕಾರಾವಧಿ ಯಲ್ಲಿಯೇ ತಯಾರಾಗಿದ್ದ ಅಣುಬಾಂಬ್‌ಗಳ ಪ್ರಯೋಗಕ್ಕೆ ಜಪಾನಿನ ಈ ದಾರ್ಷ್ಟ್ಯತನ ಅಮೆರಿಕಕ್ಕೆ ಒಂದು ಬಗೆಯ “ವರ’ವೆಂಬಂತೆ ಪರಿಣಮಿಸಿತು. ಇದರಿಂದಾಗಿಯೇ ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರಾಮನ್‌, ಜಪಾನ್‌ನ ಮೇಲೆ ಅಣು ಬಾಂಬ್‌ ಪ್ರಯೋಗಿಸುವ ನಿರ್ಧಾರಕ್ಕೆ ಬಂದರು.

ಎರಡನೆಯ ಮಹಾಯುದ್ಧವು ಮುಕ್ತಾ ಯದ ಹಂತಕ್ಕೆ ತಲುಪಿದ್ದರೂ ಮಿತ್ರ ರಾಷ್ಟ್ರಗಳಿಗೆ ಜಪಾನ್‌ ಶರಣಾಗದೆಯೇ ತನ್ನ ಉದ್ಧಟತನವನ್ನು ಮುಂದುವರಿಸಿತ್ತು. ಇತ್ತ ಬಿಲಿಯನ್‌ ಡಾಲರ್‌ಗಳ ವೆಚ್ಚದಲ್ಲಿ ತಯಾರು ಮಾಡಿದ್ದ ಅಣುಬಾಂಬ್‌ಗಳನ್ನು ಯಾರ ಮೇಲೆ ಪ್ರಯೋಗಿಸಬೇಕೆಂಬ ಪ್ರಶ್ನೆಗೆ ಅಮೆರಿಕ ಉತ್ತರ ಹುಡುಕುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಪರಮ ವೈರಿ ರಾಷ್ಟ್ರವಾದಂತಹ ರಷ್ಯಾಕ್ಕೆ ತನ್ನ ಬಳಿ ಇರುವ ಅಣು ಬಾಂಬ್‌ಗಳ ವಿಕೃತ ದರ್ಶನವನ್ನು ಮಾಡಿಸುವ ಹೆಬ್ಬಯಕೆ ಅಮೆರಿಕಕ್ಕೆ ಇತ್ತು. ಆದರೆ ದುರಾದೃಷ್ಟವಶಾತ್‌ ಅಮೆರಿಕದ ರೊಚ್ಚಿಗೆ ಬಲಿಯಾಗಿದ್ದು ಮಾತ್ರ ಜಪಾನ್‌ನ ಲಕ್ಷಾಂತರ ಮುಗ್ಧ ನಾಗರಿಕರು. ಜಪಾನ್‌ನ ಎರಡನೆಯ ಸೇನಾ ಕೇಂದ್ರ ಕಾರ್ಯಾಲಯವನ್ನು ಹೊಂದಿದ್ದ ಹಿರೋಶಿಮಾ ನಗರ ಸಂವಹನಗಳ ಕೇಂದ್ರ ಮತ್ತು ಶೇಖರಣ ಉಗ್ರಾಣವಾಗಿತ್ತು. ಹೀಗೆ ಸೇನಾ ಪ್ರಾಮುಖ್ಯವನ್ನು ಹೊಂದಿದ್ದ ಹಿರೋಶಿಮಾ ನಗರವನ್ನೇ ಅಮೆರಿಕ ಅಣು ಬಾಂಬ್‌ ದಾಳಿಗೆ ಆಯ್ಕೆಮಾಡಿಕೊಂಡಿತು.

1945ರ ಆಗಸ್ಟ್‌ 6ರಂದು ಹಿರೋಶಿಮಾದ ಮೇಲೆ ಅಣು ಬಾಂಬ್‌ ಅನ್ನು 600 ಮೀಟರ್‌ (1,800 ಅಡಿ) ಎತ್ತರದಿಂದ ಎಸೆಯಲಾಯಿತು. “ಲಿಟ್ಲ್ ಬಾಯ್’ ಅಣು ಬಾಂಬ್‌ ಸಾಂಪ್ರದಾಯಿಕ ಬಾಂಬ್‌ಗಿಂತಲೂ 2,000 ಪಟ್ಟು ಶಕ್ತಿಶಾಲಿಯಾಗಿತ್ತು. ಲಭ್ಯ ಮಾಹಿತಿಯ ಪ್ರಕಾರ ಅಣುಬಾಂಬ್‌ ದಾಳಿಗೂ ಮೊದಲು ಹಿರೋಶಿಮಾ ನಗರದಲ್ಲಿ ಸರಿಸುಮಾರು 90,000 ಕಟ್ಟಡಗಳಿದ್ದವು. ಆದರೆ ಸ್ಫೋಟದ ಬಳಿಕ 62,000 ಕಟ್ಟಡಗಳು ನೆಲಸಮವಾಗಿ ಕೇವಲ 28,000 ಕಟ್ಟಡಗಳಷ್ಟೇ ಇವತ್ತೋ ನಾಳೆಯೋ ಎಂಬ ಸ್ಥಿತಿಯಲ್ಲಿ ಉಳಿದಿದ್ದವು!. ಅಣು ಬಾಂಬ್‌ ಭುವಿಗೆ ಬಿದ್ದ ಕ್ಷಣಕ್ಕೆ 80,000 ಜನರು ಮೃತಪಟ್ಟರೆ, 35,000 ಜನರು ಸಾವು-ಬದುಕಿನ ನಡುವೆ ಹೋರಾಟವನ್ನು ನಡೆಸುವಂತಾಯಿತು. ಇನ್ನು 60,000 ಜನರು ಬಾಂಬ್‌ ಸ್ಫೋಟ ನಡೆದ ವರ್ಷದೊಳಗಡೆ ಅಸುನೀಗಿದರು. ಅಮೆರಿಕದ ಹೇಳಿಕೆಯಂತೆಯೇ ಹಿರೋಶಿಮಾದ 4.7 ಚದರ ಮೈಲಿ ವಿಸ್ತೀರ್ಣದಷ್ಟು ಸ್ಥಳ ನಾಶವಾಯಿತು. ಒಟ್ಟಾರೆ ಅಣುಬಾಂಬ್‌ ನ್ಪೋಟದಿಂದಾದ ಹಾನಿ-ನಷ್ಟವನ್ನು ಊಹಿಸಲೂ ಕೂಡ ಅಸಾಧ್ಯ.

ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಹಿರೋ ಶಿಮಾ ನಗರದ ಮೇಲೆ ಅಣುಬಾಂಬ್‌ ಪ್ರಯೋಗಿಸಿದ 3 ದಿನಗಳ ಅಅನಂತರ ಅಂದರೆ ಆಗಸ್ಟ್‌ 9 ರಂದು ಜಪಾನ್‌ನ ಇನ್ನೊಂದು ಪಟ್ಟಣವಾದ ನಾಗಸಾಕಿಯ ಮೇಲೆ “ಫ್ಯಾಟ್‌ ಮ್ಯಾನ್‌’ ಅಣುಬಾಂಬ್‌ನ್ನು ಅಮೆರಿಕ ಪ್ರಯೋಗಿಸಿತು. ಅಮೆರಿಕವು ಯುದೊœàನ್ಮಾದಕ್ಕೆಂದು ಸಿದ್ಧಪಡಿ ಸಿಟ್ಟುಕೊಂಡ ಅಣುಬಾಂಬ್‌ಗಳ ಪ್ರಯೋಗ ಕ್ಕಾಗಿ ಜಪಾನ್‌ ಒಂದು ರೀತಿಯಲ್ಲಿ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿತ್ತು. ಅಮೆರಿಕದ ಕ್ರೌರ್ಯಕ್ಕೋ ಅಥವಾ ಜಪಾನ್‌ನ ಉದ್ಧಟತ ನಕ್ಕೋ ಇಡೀ ಹಿರೋಶಿಮಾ ಮತ್ತು ನಾಗಸಾಕಿ ನಗರಗಳು ಶ್ಮಶಾನವಾದದ್ದಂತೂ ದಿಟ. ಇದರ ದುಷ್ಪರಿಣಾಮಗಳನ್ನು ಜಪಾನ್‌ನ ಈ ಎರಡು ನಗರಗಳ ಜನ ಇಂದಿಗೂ ಅನುಭವಿಸುತ್ತಿದ್ದಾರೆ.

ಇವೆಲ್ಲದರ ಹೊರತಾಗಿಯೂ ಜಪಾನ್‌ ಪುಟಿದೆದ್ದ ರೀತಿ ನಿಜಕ್ಕೂ ಅಚ್ಚರಿ ಉಂಟುಮಾ ಡುತ್ತದೆ. ವಿಶ್ವದ ಭೂಪಟದಿಂದ ಜಪಾನ್‌ ಅಳಿಸಿಹೋಯಿತು ಎಂದು ವಿಶ್ವ ರಾಷ್ಟ್ರಗಳು ಭಾವಿಸಿದರೆ ಜಪಾನ್‌ ಮಾತ್ರ ತನಗೆದುರಾದ ಆಪತ್ತಿನಿಂದ “ಫೀನಿಕ್ಸ್‌’ನಂತೆ ಎದ್ದು ನಿಂತಿದೆ. ಅಮೆರಿಕದ ಮುಂದೆ ತಲೆತಗ್ಗಿಸಿ ನಿಲ್ಲಲಾಗದು ಎಂದು ಪಣತೊಟ್ಟ ಜಪಾನ್‌ ಇಂದು ವಿಶ್ವದ ದೊಡ್ಡಣ್ಣನಿಗೆ ಸವಾಲೊಡ್ಡುತ್ತಿದೆ. ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ, ಆರೋಗ್ಯ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಜಪಾನ್‌ ವಿಶ್ವದ ಮುಂದೆ ತಲೆ ಎತ್ತಿ ನಿಂತಿದೆ. ಆ ದೇಶದ ಆರ್ಥಿಕತೆಯು ಪುಟಿದೆದ್ದ ಬಗೆಯನ್ನು ಜಗತ್ತಿನ ಇತರ ರಾಷ್ಟ್ರಗಳು ಕೊಂಡಾಡುತ್ತಿದೆ ಮಾತ್ರವಲ್ಲದೆ ಇದನ್ನು ಅನುಸರಿಸುವ ಪ್ರಯತ್ನದಲ್ಲಿವೆ. ಶತ್ರುವಿನ ಎದುರಲ್ಲಿಯೇ ಎದೆಯುಬ್ಬಿಸಿ ಅತೀ ದೊಡ್ಡ ಶಕ್ತಿಯಾಗಿ ಬೆಳೆದ ಜಪಾನ್‌ ಕೇವಲ 76 ವರ್ಷಗಳ ಚಿಕ್ಕ ಅವಧಿಯಲ್ಲಿ ಮರುನಿರ್ಮಾಣವಾಗಿದ್ದು, ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಜಿ.ಡಿ.ಪಿ. ಹೊಂದಿರುವ ಎರಡನೆಯ ದೇಶ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿದೆ.

ಮನುಕುಲಕ್ಕೆ ಎಂದೂ ಮಾಗದ ಗಾಯ ದಂತಿರುವ ಅಮೆರಿಕದ ಈ ಕ್ರೌರ್ಯ, ವಿಜ್ಞಾನ-ತಂತ್ರಜ್ಞಾನದ ಔಚಿತ್ಯ ರಹಿತ ಬಳಕೆಯ ದುಷ್ಪರಿಣಾಮಗಳ ಬಗೆಗೆ  ಇಡೀ ವಿಶ್ವಕ್ಕೇ ಸಾರಿಹೇಳುತ್ತಿದೆ. ನಮ್ಮ ಸಂಶೋಧನೆ, ಪ್ರಯೋಗಗಳು ಜೀವ ಸಂಕುಲ ಮತ್ತು ಪರಿಸರದ ಔನ್ನತ್ಯಕ್ಕೆ ಪೂರಕವಾಗಿರಬೇಕೇ ಹೊರತು ನಾಶ, ನಿರ್ನಾಮಕ್ಕಲ್ಲ ಎಂಬುದನ್ನು ಈ ಘಟನೆಯು ಸಾದರಪಡಿಸಿದೆ. ಪ್ರತೀ ವರ್ಷ ಈ ಎರಡು ಘಟನೆಗಳಲ್ಲಿ ಅಮಾಯಕವಾಗಿ ಪ್ರಾಣ ತೆತ್ತವರ ಗೌರವಾರ್ಥವಾಗಿ ಆಗಸ್ಟ್‌ 6ರಂದು ಹಿರೋಶಿಮಾ ದಿನ ಮತ್ತು ಆ.9ರಂದು ನಾಗಸಾಕಿ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸದ ಪುಟಗಳಲ್ಲಿ ಕಹಿಯಾಗಿ ಉಳಿದ ಈ ಘಟನೆಗಳು ಮುಂದೆಂದೂ ಭೂಮಂಡಲದಲ್ಲಿ ಮರುಕಳಿಸದಿರಲಿ ಎಂಬುದು ಸರ್ವರ ಮನದಿಂಗಿತವಾಗಿದೆ.

-ಅನೀಶ್‌ ಬಿ., ಕೊಪ್ಪ

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.