
ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ
Team Udayavani, Feb 1, 2023, 8:26 PM IST

ತೀರ್ಥಹಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೂಲಮಂತ್ರವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ರಾಜ್ಯದ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿರುವ ಬಜೆಟ್ ನಲ್ಲಿ ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸುಮಾರು 5300 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದು ಅತ್ಯಂತ ಸ್ವಾಗತಾರ್ಹ ಸಮಾಜದ ಎಲ್ಲಾ ವರ್ಗದ ಸರ್ವೊತೋಮುಖ ಬೆಳವಣಿಗೆಯನ್ನು ಗಮನ ದಲ್ಲಿಟ್ಟು ಮಂಡಿಸಿದ ಬಜೆಟ್ ನಲ್ಲಿ ಸಾಮಾಜಿಕ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೋವಿಡ್ ಮಹಾಮಾರಿಯಿಂದ ಬಾಧಿತವಾದ ಸಣ್ಣ ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಆರ್ಥಿಕ ಚೈತನ್ಯ ನೀಡುವ ಪ್ರಸ್ತಾವನೆ ಹೊಸ ಭರವಸೆ ಮೂಡಿಸಲಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ದೇಶದ ರೈಲ್ವೇ ವಲಯಕ್ಕೆ ಅತ್ಯಂತ ದೊಡ್ಡ ಮೊತ್ತ ವಾದ 2.41 ಲಕ್ಷ ಕೋಟಿ ರೂಪಾಯಿಗಳ ಅನುದಾನ ದೇಶದ ಸಂಪರ್ಕ ವ್ಯವಸ್ಥೆ ಇನ್ನಷ್ಟು ಬಲ ಪಡೆಯಲು ಸಹಾಯ ವಾಗುತ್ತದೆ.
ದೇಶದ ಬಡ ಹಾಗೂ ದಲಿತ ವರ್ಗದ ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದ ಉಚಿತ ವಾಗಿ ವಿತರಿಸಲಾಗುವ ಆಹಾರಧಾನ್ಯ ಪೂರೈಕೆ ಯನ್ನು ಮುಂದಿನ ಎರಡು ವರ್ಷಗಳ ವರೆಗೆ ವಿಸ್ತರಿಸುವ ನಿರ್ಧಾರ ಅತ್ಯಂತ ಸಕಾಲಿಕ ವಾಗಿದೆ.
ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ರೈತ ಸಮುದಾಯದ ಅಭಿವೃದ್ದಿಗೆ ಸಹಾಯಕ ವಾಗಲಿದೆ. ಗ್ರಾಮೀಣ ಪ್ರದೇಶದ ಹಾಗೂ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಗೆ ವಿಶೇಷ ಗಮನ ನೀಡಲಾಗಿದ್ದು ದೇಶದ ಸರ್ವೋತೋಮುಖ ಅಭಿವೃದ್ದಿಗೆ ಕೇಂದ್ರ ಬಜೆಟ್ ಪೂರಕವಾಗಿ ನೆರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ
MUST WATCH
ಹೊಸ ಸೇರ್ಪಡೆ

ದೊಡ್ಡಣಗುಡ್ಡೆ ‘ಭವಾನಿ ರೆಸಿಡೆನ್ಸಿ’ ವಸತಿ ಸಮುಚ್ಚಯ ಮಾ. 31ರಂದು ಉದ್ಘಾಟನೆ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ