Hunasuru: ಸಾಕು ಪ್ರಾಣಿಗಳ ಕೊಲ್ಲುತ್ತಿದ್ದ ಚಿರತೆ ಕೂಡ್ಲೂರಲ್ಲಿ ಸೆರೆ
Team Udayavani, Aug 4, 2024, 8:42 PM IST
ಹುಣಸೂರು(ಮೈಸೂರು ಜಿಲ್ಲೆ) : ಸಾಕು ಪ್ರಾಣಿಗಳ ಹೊಂಚು ಹಾಕಿ ಕೊಂದು ಹಾಕುತ್ತಿದ್ದ ಸುಮಾರು 6 ವರ್ಷದ ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಾಯಿ, ಆಡು ಸೇರಿ ಸಾಕು ಪ್ರಾಣಿಗಳ ಕೊಂದು ಹೊತ್ತೊಯ್ಯುತ್ತಿತ್ತು. ಶನಿವಾರ ಗ್ರಾಮದ ವಿನ್ಸೆಂಟ್‌ರಿಗೆ ಸೇರಿದ ಜಮೀನಿನಲ್ಲಿ ಕರುವನ್ನು ಕೊಂದು ಹಾಕಿತ್ತು. ವಿನ್ಸೆಂಟ್ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಆರ್.ಎಫ್ ಒ. ನಂದಕುಮಾರ್, ಡಿ.ಆರ್.ಎಫ್.ಒ. ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನ್ ಇರಿಸಿದ್ದರು. ಶನಿವಾರ ರಾತ್ರಿ ಬೋನಿನಲ್ಲಿರಿಸಿದ್ದ ನಾಯಿಯ ತಿನ್ನುವ ಆಸೆಯಿಂದ ಒಳಹೊಕ್ಕಿದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಸೆರೆ ಸಿಕ್ಕ ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯ ಡಿ.ಆರ್.ಎಫ್.ಓ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಿಬ್ಬಂದಿಗಳು ನಾಗರಹೊಳೆ ಉದ್ಯಾನದಲ್ಲಿ ಬಂಧಮುಕ್ತಗೊಳಿಸಲಾಗಿದೆ ಎಂದು ಆರ್.ಎಫ್.ಓ. ನಂದಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru Dasara: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವ 5.2 ಟನ್
Hunsur: ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಇನ್ಸ್ಪೆಕ್ಟರ್ ಮುನಿಯಪ್ಪ
Report on Corruption: ಕೋವಿಡ್ ಅಕ್ರಮ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ: ಸಿಎಂ
Mysuru: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಅಕ್ರಮ: ಸಂಸದ ಯದುವೀರ್
Mysore: ಚಾಮುಂಡೇಶ್ವರಿ ದೇಗುಲ ಸಂಪ್ರದಾಯ, ಘನತೆ ಕಾಪಾಡಿ ಉನ್ನತೀಕರಿಸಿ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.