Udayavni Special

ಟ್ರೋಲ್‌ಗ‌ಳು ಸಾಮಾನ್ಯವೇ ತಾನೆ?…ಐ ಲವ್‌ ಮೇಕಪ್‌

ನೀವು ಹುಡುಗೀರು, ಯಾರನ್ನು ಮೆಚ್ಚಿಸೋಕೆ ಅಂತ ಇಷ್ಟೆಲ್ಲಾ ಬಣ್ಣ ಬಳ್ಕೊತೀರಿ?

Team Udayavani, Nov 30, 2020, 9:40 AM IST

n-9

ಮೇಕಪ್‌ ಮಾಡಿಕೊಳ್ಳಲು ಕನ್ನಡಿಯ ಮುಂದೆ ನಿಂತಾಗ, ಹೆಣ್ಣು ತನ್ನನ್ನು ತಾನು ಮರೆಯುತ್ತಾಳೆ. ಆ ಕ್ಷಣಕ್ಕೆ ಅವಳು ಶಿಲ್ಪಿಯಾಗುತ್ತಾಳೆ. ಕನ್ನಡಿಯಲ್ಲಿ ಕಾಣುವ ತನ್ನ ಬಿಂಬವನ್ನೇ ಶಿಲ್ಪ ಅಂದುಕೊಂಡು, ಅದನ್ನು ಮುದ್ದಾಗಿ ರೂಪಿಸಲು ನಿಂತು ಬಿಡುತ್ತಾಳೆ. ನಿಜ ಹೇಳಬೇಕೆಂದರೆ, ಹೆಣ್ಣು ತನ್ನನ್ನು ತಾನು ಸೂಕ್ಷ್ಮವಾಗಿ ಗಮನಿಸುವುದೇ ಮೇಕಪ್‌ ಮಾಡಿಕೊಳ್ಳುವ ಹೊತ್ತಿನಲ್ಲಿ…

“ಅಲ್ಲಿ ನೋಡು, ಆ ಹುಡುಗಿ ತುಟಿಗೆ ಪೇಯಿಂಟ್‌ ಮಾಡ್ಕೊಂಡು ಬಂದಂಗೆ ಕಾಣ್ತಿಲ್ವಾ?’ ಅಂತ ಗೆಳೆಯ, ಹುಡುಗಿಯೊಬ್ಬಳತ್ತ ಬೆರಳು ಮಾಡಿ ತೋರಿದ್ದ. ತುಟಿಯ ಬಣ್ಣ ಸ್ವಲ್ಪ ಹೆಚ್ಚಾಗಿದ್ದರೂ ಹುಡುಗಿ ಮುದ್ದಾಗಿಯೇ ಕಾಣುತ್ತಿದ್ದಳು. ಹುಡುಗಿಯರ ಮೇಕಪ್‌ ಎಷ್ಟೇ ನವಿರಾಗಿದ್ದರೂ, ಅದರ ಬಗ್ಗೆ ವ್ಯಂಗ್ಯ, ಕಮೆಂಟ್‌, ಟ್ರೋಲ್‌ಗ‌ಳು ಸಾಮಾನ್ಯವೇ ತಾನೆ?.

“ಒಂದೊಳ್ಳೆ ಮನೆ ಕಟ್ಟಿಸಿ, ಅದಕ್ಕೆ ಸರಿ ಹೊಂದುವ ಬಣ್ಣ ಹೊಡೆಸದೇ ಇದ್ದರೆ ಆ ಮನೆಗೊಂದು ಕಳೆ ಇರುತ್ತಾ ನೀನೇ ಹೇಳು? ಅಷ್ಟೇ ಯಾಕೆ, ದೇವರಂಥ ದೇವರ ಮೂರ್ತಿಗೂ ಬಣ್ಣ, ಅಲಂಕಾರವಿಲ್ಲದೆ ಪೂಜಿಸೋದಿಲ್ಲ ನಾವು. ಈ ಬಣ್ಣ, ಅಲಂಕಾರ ಅನ್ನೋದೆಲ್ಲಾ ಒಂದು ಕಲೆ. ಹೆಣ್ಮಕ್ಕಳು ಮೂಲತಃ ಕಲಾವಿದರು. ಅದಕ್ಕೇ ನಾವು ಮೇಕಪ್‌ ಮಾಡಿಕೊಳ್ಳೋದು’ ಅಂದು ಗೆಳೆಯನ ಬಾಯಿ ಮುಚ್ಚಿಸಿದ್ದೆ ಅವತ್ತು.

ನಮ್ಮ ಮೇಕಪ್‌ ಬಗ್ಗೆ ಹುಡುಗರು ಯಾಕೆ ಅಷ್ಟೊಂದು ಜೋಕು ಮಾಡ್ತಾರೆ ಅನ್ನೋದು ನಂಗೆ ಅರ್ಥವಾಗದ ವಿಷಯ. ಮೇಕಪ್‌ ಮಾಡುವುದರಲ್ಲಿ ತಪ್ಪೇನಿದೆ ಹೇಳಿ? ಕುಂಚದಿಂದ ಬಣ್ಣ ತೆಗೆದು, ಬಿಳಿ ಹಾಳೆಯನ್ನ ಅದ್ಭುತವಾದ ಚಿತ್ರವಾಗಿ ಪರಿವರ್ತಿಸುವ ಹಾಗೆ, ಮೇಕಪ್‌ ಅನ್ನೋದು ಹೆಣ್ಣಿನ ಸೌಂದರ್ಯವನ್ನು ತಿದ್ದಿ-ತೀಡಿ ಒಂದು ಲಕ್ಷಣ ಕೊಡುತ್ತದೆ ಅಷ್ಟೇ.

“ನೀವು ಹುಡುಗೀರು, ಯಾರನ್ನು ಮೆಚ್ಚಿಸೋಕೆ ಅಂತ ಇಷ್ಟೆಲ್ಲಾ ಬಣ್ಣ ಬಳ್ಕೊತೀರಿ?’ ಅಂತ ಹಲವರು ಮೂಗು ಮುರಿಯೋದನ್ನು ಕೇಳಿದ್ದೀನಿ. ಮೇಕಪ್‌ನ ಬಣ್ಣಗಳು ನಮ್ಮ ಜೀವನಪ್ರೀತಿ, ತಾಳ್ಮೆಯ ಸಂಕೇತವೇ ಹೊರತು, ಬೇರೆಯವರನ್ನು ಮೆಚ್ಚಿಸುವ ಪ್ರಯತ್ನವಲ್ಲ. ಎಷ್ಟು ಬೇಕೋ ಅಷ್ಟು ಕ್ರೀಮ್‌ ಅಥವಾ ಪೌಡರ್‌ ಹಚ್ಚಿ, ಕಣ್ಣ ಗಡಿಯ ಸುತ್ತ ನಾಜೂಕಾಗಿ ಕಪ್ಪು ಗೆರೆ ಎಳೆಯುತ್ತ, ಅಚ್ಚುಕಟ್ಟಾದ ಹುಬ್ಬಿನ ಮೇಲೆ ತೀಡಿ, ನಗುವ ಅಧರಕ್ಕೆ ಹೊಂದುವ ಬಣ್ಣವ ಹದವಾಗಿ ಲೇಪಿಸಿ, ಹಣೆಯ ಮಧ್ಯ ಮಿನುಗುವ ಚುಕ್ಕಿಯನ್ನಿಡುವಾಗ ನಮ್ಮೊಳಗಿನ ಕಲಾವಿದೆಗೆ ಜೀವ ಬಂದಿರುತ್ತದೆ. ಕನ್ನಡಿ ಮುಂದೆ ನಿಂತ ಆ ಐದು ನಿಮಿಷಗಳಲ್ಲಿ, ಹೆಣ್ಣು ಜಗತ್ತನ್ನೇ ಮರೆಯುತ್ತಾಳೆ. ಮಗಳು, ಅಕ್ಕ, ತಂಗಿ, ತಾಯಿ, ಗೆಳತಿ, ಮಡದಿಯಾಗಿ ಜಂಜಡದಲ್ಲಿ ಮುಳುಗಿ ಹೋಗಿರುವ ಹೆಣ್ಣು, ತನ್ನನ್ನು ತಾನು ಸರಿಯಾಗಿ ಗಮನಿಸುವುದೇ ಮೇಕಪ್‌ ಮಾಡುವ ಹೊತ್ತಲ್ಲಿ.

ನಾನೂ ಮೊದಮೊದಲು ಮೇಕಪ್‌ ಎಂದರೆ ಮಾರು ದೂರ ಓಡುತ್ತಿದ್ದೆ. “ಸಹಜವೇ ಸುಂದರ’ ಅಂತ ನಂಬಿದ್ದವಳನ್ನು ಬದಲಿಸಿದ್ದು ಮೇಕಪ್‌ ಆರ್ಟಿಸ್ಟ್‌ ಆಗಿರುವ ಗೆಳತಿ. ತನ್ನ ಮದುವೆಗೆ ತಾನೇ ಸಿಂಗರಿಸಿಕೊಂಡು, ಅಪ್ಸರೆಯಂತೆ ನನ್ನ ಮುಂದೆ ಬಂದು ನಿಂತಾಗ, ಇವಳೇನಾ ಅವಳು?! ಅನ್ನುವಷ್ಟು ಚಂದ ಕಾಣುತ್ತಿದ್ದಳು. ಲಿಪ್‌ಸ್ಟಿಕ್‌, ಮಸ್ಕಾರ, ಫೌಂಡೇಶನ್‌…ಯಾವುದೂ ಅತಿಯಾಗದಿದ್ದರೂ, ನವಿರಾದ ಮೇಕಪ್‌ ಅವಳ ಅಂದವನ್ನು ಇಮ್ಮಡಿಗೊಳಿಸಿತ್ತು. “ಮೇಕಪ್‌ ಅಂದ್ರೆ ಬಣ್ಣ ಬಳಿಯುವುದಲ್ಲ, ಅದೊಂದು ಕಲೆ’ ಅಂತ ಅವತ್ತು ಅವಳು ತೋರಿಸಿ ಕೊಟ್ಟಿದ್ದಳು.

ಮೇಕಪ್‌ ಅಂದ್ರೆ ಸುಮ್ನೆಯಾ?
ಹಿಂದೊಮ್ಮೆ ಅವಳನ್ನು ಕೇಳಿದ್ದೆ- “ನಿಂಗೆ ತುಂಬ ಬೇಜಾರಾದಾಗ, ತಾಳ್ಮೆ ಮೀರಿದಾಗ, ಆತ್ಮವಿಶ್ವಾಸ ಕುಂದಿದಾಗ ಏನ್‌ ಮಾಡ್ತೀಯಾ?’ ಅಂತ. ಅದಕ್ಕವಳು ಮೇಕಪ್‌ ಮಾಡ್ತೀನಿ ಅಂದಿದ್ಲು! “ಭಾವನೆಯಲ್ಲಿ ಕಳೆಗುಂದಿದ ಮುಖಕ್ಕೆ ತಿಳಿನೀರು ಚಿಮುಕಿಸಿ, ಹಳೆಯ ಚಿಂತೆಗಳನ್ನೆಲ್ಲ ಒರೆಸಿ ಹಾಕ್ತೀನಿ. ತಂಪಾದ ತ್ವಚೆಗೆ ಭರವಸೆ ಎಂಬ ಫೌಂಡೇಶನ್‌ ಕ್ರೀಮ್‌ ಹಾಕಿ, ಬೇಡದ ಕಲೆಗಳನ್ನೆಲ್ಲ ಮುಚ್ಚಿ, ಮೇಲೆ ಪೌಡರ್‌ನ ಹೊದಿಕೆ ಹೊದಿಸಿ, ಹೊಸ ಬಣ್ಣ ಕೊಡ್ತೀನಿ. ನಾಚದಿದ್ದರೂ ಕೆನ್ನೆಯನ್ನು ಗುಲಾಬಿ ಬಣ್ಣಕ್ಕೆ ಕೊಂಡು ಹೋಗಿ, “ಹೀಗೇ ಇರು’ ಅಂತ ಪೂಸಿ ಹೊಡೆದು, ಕೆಲಸ ಮಾಡಿ ಮಾಡಿ ಸುಸ್ತಾಗಿ ಕಪ್ಪಾದ ಕಂಗಳ ಸುತ್ತ ಬಣ್ಣ ಬಳಿದು, ಕಪ್ಪು ತೊಲಗಿಸಿ, “ಫ್ರೆಷ್‌ ಕಾಣಿಸ್ಬೇಕು’ ಅಂತ ಬುದ್ಧಿ ಹೇಳ್ತೀನಿ. ಆಮೇಲೆ ನಿರಾಸೆಯ ಕಣ್ಣೀರು ಒರೆಸುತ್ತಾ, ಕಣ್ಕಪ್ಪಲ್ಲಿ ಅದನ್ನು ಮರೆಮಾಚಿ, ಕಣ್ರೆಪ್ಪೆಗೆ “ಕನಸು ಕಂಗಳ ಜೋಪಾನ ಮಾಡು’ ಅಂತ ಮಸ್ಕಾರದಿಂದ ಮಸ್ಕಾ ಹೊಡಿತೀನಿ. ನಂತರ ನನಗೆ, ಅಂತ ಕರೆವ ಹುಬ್ಬಿಗೂ ನಿರ್ದಿಷ್ಟ ರೂಪ ಕೊಡುತ್ತಾ, ಒಂದು ಕ್ಷಣ ನನ್ನನ್ನೇ ನಾನು ಕನ್ನಡಿಯಲ್ಲಿ ದಿಟ್ಟಿಸುತ್ತೇನೆ. ಆಗ ನನಗೇ ಅರಿವಿಲ್ಲದೆ ಮೂಡುವ ಮುಗುಳ್ನಗೆಗೆ ಸೋತು, ತುಟಿಗೆ ಬಣ್ಣದ ಉಡುಗೊರೆ ನೀಡುವೆ. ನನಗಾಗಿ ನಾನು ಇಷ್ಟೆಲ್ಲಾ ಮಾಡುವಾಗ ಏನೋ ಒಂಥರಾ ಆತ್ಮವಿಶ್ವಾಸ ಬರುತ್ತೆ. ನನ್ನ ಬಗ್ಗೆ ನನಗೇ ಹೆಮ್ಮೆ ಮೂಡುತ್ತೆ ಕಣೇ’ ಎಂದಿದ್ದಳು!

ಅಬ್ಬಬ್ಟಾ, ಇಷ್ಟೆಲ್ಲಾ ವಿಷಯ ಅಡಗಿದೆಯಾ ಈ ಮೇಕಪ್‌ನಲ್ಲಿ? ನಾನೂ ಯಾಕೆ, ಇವನ್ನೆಲ್ಲ ಟ್ರೈ ಮಾಡಬಾರದು ಅನ್ನಿಸಿತು. ಮೊದಲ ಸಂಬಳದಲ್ಲಿ ಕೆಲವು ಅಲಂಕಾರಿಕ ವಸ್ತುಗಳನ್ನು ಖರೀದಿಸಿದೆ. ಸದ್ಯ, ನನ್ನ ಪುಟ್ಟ ಮೇಕಪ್‌ ಕಿಟ್‌ನಲ್ಲಿ ಫೌಂಡೇಶನ್‌ ಕ್ರೀಮ್‌, ನನ್ನ ತ್ವಚೆಗೆ ಹೊಂದುವ ಪೌಡರ್‌, ನಸುಗೆಂಪು ಲಿಪ್‌ಸ್ಟಿಕ್‌, ವಾಟರ್‌ಪ್ರೂಫ್ ಐ ಲೈನರ್‌, ಕಾಡಿಗೆ ಬೆಚ್ಚಗೆ ಕುಳಿತಿವೆ. ದಿನವೂ ಆಫೀಸಿಗೆ ಹೊರಡುವ ಮುನ್ನ, ಅವುಗಳೆಲ್ಲ ಒಂದೊಂದಾಗಿ ಹೊರಗೆ ಬಂದು, ನನ್ನ ಮುಖವನ್ನು ಮುದ್ದಿಸಿ, ಮತ್ತೆ ಒಳ ಸೇರುತ್ತವೆ. ಕೆನ್ನೆ ಕೊಂಚ ಕೆಂಪಾಯಿತೇ, ತುಟಿಯ ರಂಗು ಹೆಚ್ಚೇ ಅಂತ ಗುನುಗುತ್ತಾ, ನನ್ನ ಬಗ್ಗೆ ನಾನೇ ತುಸು ಹೆಚ್ಚು ಕಾಳಜಿ ತೋರಿಸುತ್ತಿದ್ದೇನೆ. ರೆಪ್ಪೆ ಮಿಟುಕಿಸದೆ, ಕೈ ನಡುಗಿಸದೆ ಐ ಲೈನರ್‌ ಹಚ್ಚುವಾಗಿನ ಧ್ಯಾನಸ್ಥ ಸ್ಥಿತಿ, ಮೊದಲಿಗಿಂತ ಹೆಚ್ಚು ತಾಳ್ಮೆಯನ್ನು ಕಲಿಸಿದೆ.

ನಾನಂದ್ರೆ ನಂಗಿಷ್ಟ
ಅಲಂಕಾರ ಮಾಡದೆ ಪೂಜಿಸುವ ದೇವರೇ ಇಲ್ಲ ಅಂದಮೇಲೆ, ನಮ್ಮನ್ನು ನಾವು ಅಲಂಕರಿಸಿಕೊಳ್ಳಲು ಸಂಕೋಚ ಯಾಕೆ? ಮೇಕಪ್‌ನ ಬಣ್ಣ ಚರ್ಮಕ್ಕೆ ಹೊಳಪು ನೀಡಿದರೆ, ಅದು ಕೊಡುವ ಆತ್ಮವಿಶ್ವಾಸ ನಿಮ್ಮ ಕೀಳರಿಮೆಗಳನ್ನು ತೊಲಗಿಸಿ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುತ್ತೆ. ಇನ್ಮುಂದೆ ಯಾರಾದರೂ ನಿಮ್ಮ ಮೇಕಪ್‌ ಬಗ್ಗೆ ಹಾಸ್ಯ ಮಾಡಿದರೆ- “ನಾನಂದ್ರೆ ನನಗೆ ತುಂಬಾ ಇಷ್ಟ. ಹಾಗಾಗಿ, ನಾನು ಚಂದ ಕಾಣಿಸಬೇಕು ಅಂತ ಸ್ವಲ್ಪ ಜಾಸ್ತಿಯೇ ಅಲಂಕರಿಸಿಕೊಂಡೆ’ ಅನ್ನಿ.

ಮುಖವಾಡ ಬೇಡ
ಹಾಗಂತ ಮುಖವಾಡ ಧರಿಸಿ ಅಂತ ಹೇಳ್ತಾ ಇಲ್ಲ. ನಿಮ್ಮ ನಿಜ ಬಣ್ಣ, ಆಕಾರವನ್ನು, ನಿಮ್ಮತನವನ್ನು ಮರೆಮಾಚಲು ಮೇಕಪ್‌ ಮಾಡುವುದರಲ್ಲಿ ಅರ್ಥವಿಲ್ಲ. ಸೌಂದರ್ಯದ ಬಗ್ಗೆ ಕೀಳರಿಮೆ ಪಟ್ಟು, ಅದನ್ನು ಮರೆಮಾಚಲು ಪ್ರಯತ್ನಪಟ್ಟಾಗ ಅಲಂಕಾರ ಹೋಗಿ ಅವಾಂತರ ಆಗುತ್ತೆ. ಸಹಜ ಸೌಂದರ್ಯಕ್ಕೆ ಚೂರು ಮೆರುಗು ಕೊಡುವುದು ಅಲಂಕಾರವೇ ಹೊರತು, ನೈಜ ಬಣ್ಣವನ್ನು ಹುದುಗಿಸಲು ಕೃತಕತೆಯನ್ನು ಲೇಪಿಸಿಕೊಳ್ಳುವುದಲ್ಲ. ಕ್ರೀಂ ಹಚ್ಚಿದ್ದು ಜಾಸ್ತಿ ಆಯ್ತಾ, ಮುಖ ಬೂದಿ ಬೂದಿ ಥರ ಕಾಣಿಸ್ತಿದೆಯಾ, ತುಟಿಯ ಬಣ್ಣ ಮುಖಕ್ಕೆ ಹೊಂದುತ್ತಿದೆಯಾ, ಅಂತೆಲ್ಲಾ ಪ್ರಶ್ನೆಗಳು ಮೂಡುವಷ್ಟು ಮೇಕಪ್‌ ಮಾಡಿಕೊಂಡರೆ, ಕೀಳರಿಮೆ ಮತ್ತಷ್ಟು ಹೆಚ್ಚಬಹುದು. ಮೇಕಪ್‌ ನಮ್ಮ ಬಲವೇ ಹೊರತು, ದೌರ್ಬಲ್ಯವಲ್ಲ ಅನ್ನೋದನ್ನು ಮರೆಯಬೇಡಿ.

ಮೇಕಪ್‌ ಹೊಸತಲ್ಲ
ಅಲಂಕಾರಗೊಂಡ ತನ್ನ ಅಂದ-ಚಂದವನ್ನು ನೋಡುತ್ತಾ ಮೈಮರೆತಿರುವ ಶಿಲಾಬಾಲಿಕೆಯನ್ನು ಬೇಲೂರಿನಲ್ಲಿ ನೋಡಬಹುದು. ಆ ಶಿಲಾಬಾಲಿಕೆಗೆ “ದರ್ಪಣ ಸುಂದರಿ’ ಎಂದೇ ಹೆಸರಿಟ್ಟಿದ್ದಾರೆ. ಮಹಿಳೆಯರಿಗೆ ಅಲಂಕಾರದ ಮೇಲಿರುವ ಮೋಹ ಇಂದು ನಿನ್ನೆಯ ವಿಷಯವಲ್ಲ ಎಂಬುದನ್ನು ಹನ್ನೆರಡನೆ ಶತಮಾನದ ಆ ಶಿಲ್ಪವೇ ಸಾರಿ ಹೇಳುತ್ತದೆ. ಹಿಂದಿನ ಕಾಲದ ಮಹಾರಾಣಿಯರೇನು ಕಡಿಮೆಯೇ? ಅವರನ್ನು ಅಲಂಕರಿಸಲೆಂದೇ ಅಂತಃಪುರದಲ್ಲಿ ಪ್ರತ್ಯೇಕ ದಾಸಿಯರು ಇರುತ್ತಿದ್ದುದು ನಿಮಗೂ ಗೊತ್ತೇ ಇದೆ.

– ಸಹನಾ ಕಾರಂತ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

Untitled-1

ಕ್ರಿಕೆಟ್ :‌ ದೀಪಕ್‌ ಹೂಡಾ ಒಂದು ವರ್ಷ ಅಮಾನತು

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

Deepika Padukone says Ranveer Singh keeps on asking why she manages home herself, even orders groceries

ಮನೆಗೆಲಸ ಮಾಡುವುದರಲ್ಲಿ ನನಗೆ ಹೆಮ್ಮೆ ಇದೆ: ದೀಪಿಕಾ ಪಡುಕೋಣೆ

beeper

ಒಂದೇ ಆ್ಯಪ್ ನೊಳಗೆ 13 ಅಪ್ಲಿಕೇಶನ್ ಗಳ ಬಳಕೆ: ಇಲ್ಲಿದೆ ವಿವರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ

ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ

ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಉಗುರಿಗೆ ಮೆರುಗು ತುಂಬಿ!

ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಉಗುರಿಗೆ ಮೆರುಗು ತುಂಬಿ!

ಟ್ರೆಂಡಿ ಜಾಕೆಟ್ಟುಗಳ ಲೋಕ

ಟ್ರೆಂಡಿ ಜಾಕೆಟ್ಟುಗಳ ಲೋಕ

ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ

ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ…

ಸುಂದರ ಕಂಗಳಿಗೆ ಬಗೆಬಗೆ ಕಾಡಿಗೆ

ಸುಂದರ ಕಂಗಳಿಗೆ ಬಗೆಬಗೆ ಕಾಡಿಗೆ

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

Untitled-1

ಹದಗೆಟ್ಟ ಸಬ್ಲಾಡಿ ರಸ್ತೆ ಅಭಿವೃದ್ಧಿಗೆ ಕೂಡಿ ಬಾರದ ಕಾಲ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌  ಗಾರ್ಡ್‌ ಸದಾ ಸಿದ್ಧ’

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌ ಗಾರ್ಡ್‌ ಸದಾ ಸಿದ್ಧ’

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.