ಜನಸಂಕಲ್ಪ ಯಾತ್ರೆಯಿಂದ ದೂರ ಉಳಿದಿಲ್ಲ: ಬಿಎಸ್ ವೈ ಸ್ಪಷ್ಟನೆ
Team Udayavani, Dec 10, 2022, 12:16 PM IST
ಬೆಂಗಳೂರು: ಜನಸಂಕಲ್ಪ ಯಾತ್ರೆಯಿಂದ ನಾನು ದೂರ ಉಳಿದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯನಿಮಿತ್ತ ತುಮಕೂರಿಗೆ ಹೋಗಲು ಆಗಲಿಲ್ಲ. ಗುಜರಾತ್ ಮುಖ್ಯಮಂತ್ರಿ ಆಯ್ಕೆಗೆ ಹೋಗುತ್ತಿರುವುದರಿಂದ ಇವತ್ತೂ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಿಲ್ಲ. ಗುಜರಾತ್ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಮಿತಿ ಮಾಡಿದ್ದಾರೆ, ನೀವೂ ಬರಬೇಕು ಅಂತ ನನಗೆ ಕರೆ ಬಂತು. ಹೀಗಾಗಿ ಅಹಮದಾಬಾದ್ ಗೆ ಹೊರಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:“ನಾನು ದೊಡ್ಡ ತಪ್ಪು ಮಾಡಿದೆ.. ಆಪ್ ಸೇರಿದ ಕೆಲವೇ ಗಂಟೆಗಳಲ್ಲಿ ʼಘರ್ ವಾಪಸ್ಸಿʼ ಆದ ಕಾಂಗ್ರೆಸ್ ಸದಸ್ಯರು
ಗುಜರಾತ್ ಆಯ್ಕೆ ಸಮಿತಿಯಲ್ಲಿ ನಾನಿದ್ದೇನೆ. ಗುಜರಾತ್ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಿ ಬೆಂಗಳೂರಿಗೆ ಬರುವೆ, ಗುಜರಾತ್ ನಿಂದ ಬಂದ್ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವೆ ಎಂದು ಹೇಳಿದ್ದಾರೆ.