Udayavni Special

ಐಸಿಸಿ ಟೆಸ್ಟ್‌ ಫೈನಲ್‌ಗೆ ಕಾದಿದೆ ಪೇಸ್‌ ಆ್ಯಂಡ್‌ ಬೌನ್ಸಿ ಪಿಚ್‌

Team Udayavani, Jun 15, 2021, 7:00 AM IST

ಐಸಿಸಿ ಟೆಸ್ಟ್‌ ಫೈನಲ್‌ಗೆ ಕಾದಿದೆ ಪೇಸ್‌ ಆ್ಯಂಡ್‌ ಬೌನ್ಸಿ ಪಿಚ್‌

ಸೌತಾಂಪ್ಟನ್‌ : ಭಾರತ- ನ್ಯೂಜಿಲ್ಯಾಂಡ್‌ ನಡುವೆ ಸೌತಾಂಪ್ಟನ್‌ನ “ಏಜಸ್‌ ಬೌಲ್‌’ ಕ್ರೀಡಾಂಗಣ ದಲ್ಲಿ ನಡೆಯುವ ಐಸಿಸಿ ಟೆಸ್ಟ್‌ ಫೈನಲ್‌ಗೆ ನಿರೀಕ್ಷೆಯಂತೆ ಪೇಸ್‌ ಮತ್ತು ಬೌನ್ಸಿ ಪಿಚ್‌ ರೂಪುಗೊಳ್ಳಲಿದೆ. ಪಂದ್ಯದ ಕೊನೆಯ ಹಂತದಲ್ಲಿ ಇದು ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂದು ಕ್ಯುರೇಟರ್‌ ಸೈಮನ್‌ ಲೀ ಹೇಳಿದ್ದಾರೆ.

“ಇದೊಂದು ತಟಸ್ಥ ತಾಣವಾದ್ದ ರಿಂದ ಪಿಚ್‌ ನಿರ್ಮಿಸುವುದು ಬಹಳ ಸರಳ. ಐಸಿಸಿ ಮಾರ್ಗದರ್ಶನದಂತೆ ಪಿಚ್‌ ರೂಪುಗೊಳ್ಳಲಿದೆ. ಎರಡೂ ತಂಡಗಳು ಉತ್ತಮ ಪೈಪೋಟಿ ನೀಡಲು ಅನುಕೂಲವಾಗುವ ರೀತಿಯಲ್ಲಿ ನಾವಿದನ್ನು ತಯಾರಿಸುತ್ತಿದ್ದೇವೆ. ಆರಂಭದಲ್ಲಿ ಇದು ಪೇಸ್‌ ಮತ್ತು ಬೌನ್ಸ್‌ ಎಸೆತಗಳಿಗೆ ನೆರವು ನೀಡಲಿದೆ. ಮೂರನೇ ದಿನದ ಬಳಿಕ ಸ್ಪಿನ್ನರ್‌ಗಳಿಗೆ ಸಹಾಯ ಒದಗಿಸಲಿದೆ’ ಎಂದು ಸೈಮನ್‌ ಲೀ ಹೇಳಿದರು.

ಪಂದ್ಯ ಹೆಚ್ಚು ರೋಚಕ
“ಪೇಸ್‌ ಇದ್ದಾಗಲೇ ಟೆಸ್ಟ್‌ ಕ್ರಿಕೆಟ್‌ ಹೆಚ್ಚು ರೋಚಕಗೊಳ್ಳುತ್ತದೆ. ನಾನು ಕೂಡ ಓರ್ವ ಕ್ರಿಕೆಟ್‌ ಅಭಿಮಾನಿ. ಎಲ್ಲ ಕ್ರಿಕೆಟ್‌ ಪ್ರೇಮಿಗಳು ಪ್ರತಿಯೊಂದು ಎಸೆತ ವನ್ನೂ ಗಮನಿಸುವ ರೀತಿಯಲ್ಲಿ ಪಿಚ್‌ ರಚನೆಗೊಳ್ಳಲಿದೆ. ಕ್ಲಾಸ್‌ ಬ್ಯಾಟಿಂಗ್‌ ಹಾಗೂ ಅಮೋಘ ಬೌಲಿಂಗ್‌ ಸ್ಪೆಲ್‌- ಎರಡಕ್ಕೂ ಇಲ್ಲಿ ನೆರವು ಲಭಿಸಬೇಕಿದೆ. ಎರಡೂ ತಂಡಗಳಲ್ಲಿ ಉತ್ತಮ ಕ್ವಾಲಿಟಿಯ ಪೇಸ್‌ ಬೌಲರ್ ಇದ್ದಾರೆ. ಪಂದ್ಯ ಹೆಚ್ಚು ರೋಚಕವಾಗಿ ಸಾಗಲಿದೆ’ ಎಂದು ಲೀ ಆಶಿಸಿದರು.

ವಿಜೇತರಿಗೆ 12 ಕೋ.ರೂ.
ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆದ್ದವರಿಗೆ 12 ಕೋಟಿ ರೂ.ಗಳ (1.6 ಮಿಲಿಯನ್‌ ಡಾಲರ್‌) ದೊಡ್ಡ ಮೊತ್ತದ ಬಹುಮಾನ ಲಭಿಸಲಿದೆ. ಜತೆಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ “ಗದೆ’ ಹಾಗೂ ಟ್ರೋಫಿಯನ್ನು ನೀಡಲಾಗುವುದು. ಪರಾ ಜಿತ ತಂಡಕ್ಕೆ ಇದರ ಅರ್ಧ ಮೊತ್ತ ಸಿಗಲಿದೆ. ಎಂದು ಐಸಿಸಿ ಸೋಮವಾರ ತಿಳಿಸಿದೆ.

ಕೂಟದ ತೃತೀಯ ಸ್ಥಾನಿ ತಂಡಕ್ಕೆ 450,000 ಡಾಲರ್‌, 4ನೇ ಸ್ಥಾನ ಪಡೆದ ತಂಡಕ್ಕೆ 350,000 ಡಾಲರ್‌ ಹಾಗೂ 5ನೇ ಸ್ಥಾನ ಪಡೆದ ತಂಡಕ್ಕೆ 200,000 ಡಾಲರ್‌ ಮೊತ್ತ ಲಭಿಸಲಿದೆ. ಅನಂತರದ 4 ತಂಡಗಳಿಗೆ ತಲಾ 100,000 ಡಾಲರ್‌ ನೀಡಲಾಗುವುದು.
ಫೈನಲ್‌ ಪಂದ್ಯ ಡ್ರಾ ಅಥವಾ ಟೈ ಆದರೆ ಮೊದಲೆರಡು ಬಹುಮಾನಗಳ ಒಟ್ಟು ಮೊತ್ತವನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.

ಟಾಪ್ ನ್ಯೂಸ್

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

iiu

ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಲು ಆಫರ್

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

ಕಾಸರಗೋಡಿಗೆ ಸರ್ಕಾರಿ,  ಖಾಸಗಿ ಬಸ್ ಸಂಚಾರವಿಲ್ಲ:  ನಳೀನ್ ಕುಮಾರ್ ಕಟೀಲು

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖ

uiyuiyi

ಅತಿವೃಷ್ಠಿಯಿಂದ ರೈತ ಕಂಗಾಲು: ಮೊಳಕೆ ಮಣ್ಣಾಗಿಸಿದ ಮಳೆ

erte’

ಪ್ರತಿಪಕ್ಷದವರು ರೌಡಿಗಳಂತೆ ವರ್ತಿಸಿದ್ದಾರೆ : ಸಿಎಂ ಪ್ರಮೋದ್ ಸಾವಂತ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

Novak Djokovic’s singles campaign ends without medal

ಪದಕವಿಲ್ಲದೆ ಟೋಕಿಯೊ ಒಲಿಂಪಿಕ್ಸ್ ಪಯಣ ಅಂತ್ಯಗೊಳಿಸಿದ ನೊವಾಕ್ ಜೊಕೊವಿಕ್

isuru udana

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಲಂಕಾ ವೇಗಿ ಇಸುರು ಉದಾನ

ಟೋಕಿಯೊ ಒಲಿಂಪಿಕ್ಸ್: ದ.ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆದ್ದ ಭಾರತ ವನಿತೆಯರ ತಂಡ

ಟೋಕಿಯೊ ಒಲಿಂಪಿಕ್ಸ್: ದ.ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆದ್ದ ಭಾರತ ವನಿತೆಯರ ತಂಡ

ben stokes

ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್‌!

MUST WATCH

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

udayavani youtube

IT ಬದುಕಿಗಿಂತ ಕೃಷಿ ತೃಪ್ತಿ ನೀಡುತ್ತೆ??

udayavani youtube

ಚಿಕ್ಕಮಗಳೂರಿನಲ್ಲಿ ದನಗಳ್ಳರ ಹಾವಳಿ ?: ಮಲಗಿದ್ದ ದನವನ್ನೇ ಕಾರಿಗೆ ತುಂಬಿಸಿ ಕದ್ದೊಯ್ದರು

ಹೊಸ ಸೇರ್ಪಡೆ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

iiu

ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಲು ಆಫರ್

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

ಕಾಸರಗೋಡಿಗೆ ಸರ್ಕಾರಿ,  ಖಾಸಗಿ ಬಸ್ ಸಂಚಾರವಿಲ್ಲ:  ನಳೀನ್ ಕುಮಾರ್ ಕಟೀಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.