Udayavni Special

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!

Team Udayavani, Aug 3, 2021, 6:22 PM IST

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು! ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೆ ಕ್ಷಮೆ ಕೇಳಿಬಿಡಿ. ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!

ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆ ಬೇಡವಾಗಿ ಹೋಗಬಹುದು! ನೀವು ಯಾರಿಗಾದರೂ ಅಲ್ ದ ಬೆಸ್ಟ್ ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಹಭಾಷ್ ಹೇಳಲು ಕಾಯುತ್ತಿರಬಹುದು!

ನೀವು ಯಾರಿಗಾದರೂ ನಿಮ್ಮ ಪ್ರೀತಿ ಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ನೋವಾಗಬಹುದು!

ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಟಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!

ನಿಮಗೆ ಯಾರಿಗಾದರೂ ಸಾರಿ ಹೇಳಲು ಬಾಕಿ ಇದ್ದರೆ ಇಂದೆ ಹೇಳಿಬಿಡಿ, ಯಾಕೆಂದರೆ ಆ ನಾಳೆ ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!

ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!

ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!

ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಇನ್ನಷ್ಟು ಮೋಹವು ಹೆಚ್ಚಾಗಬಹುದು!

ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಬೆಸ್ಟ್ ಫ್ರೆಂಡ್ ಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!

ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!

ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ ಎಂದು ಹೇಳಬಹುದು!

ರಾಜೇಂದ್ರ ಭಟ್ ಕೆ,
ಜೇಸಿಐ ರಾಷ್ಟ್ರಮಟ್ಟದ ತರಬೇತಿದಾರರು.

ಟಾಪ್ ನ್ಯೂಸ್

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

cgdfg

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ

ಪುತ್ತೂರು ನಗರ ಪೊಲೀಸ್ ಠಾಣೆ

ಪುತ್ತೂರು:ಹೋಟೆಲ್ ನಲ್ಲಿ ಭಿನ್ನಕೋಮಿನ ಯವಕ-ಯುವತಿಗೆ ಹಲ್ಲೆ ಆರೋಪ:ಹಿಂದೂಸಂಘಟನೆಯ ಇಬ್ಬರ ಬಂಧನ

ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ನಾಯಕಿ

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಸದ್ಯಕ್ಕಿಲ್ಲ ಬೂಸ್ಟರ್‌ ಡೋಸ್‌: ಕೇಂದ್ರ ಸರ್ಕಾರ

ಸದ್ಯಕ್ಕಿಲ್ಲ ಬೂಸ್ಟರ್‌ ಡೋಸ್‌: ಕೇಂದ್ರ ಸರ್ಕಾರ

ಕೊರೊನಾಗೆ  ಅಂತ್ಯವೇ ಇಲ್ಲ!

ಕೊರೊನಾಗೆ ಅಂತ್ಯವೇ ಇಲ್ಲ!

ಹೊಸ ಔಷಧ ಕಾಯ್ದೆ ರಚನೆಗೆ ಸಿದ್ಧತೆ

ಹೊಸ ಔಷಧ ಕಾಯ್ದೆ ರಚನೆಗೆ ಸಿದ್ಧತೆ

“3ನೇ ಅಲೆ ಬರುತ್ತಿಲ್ಲ, ಈಗಾಗಲೇ ಬಂದಿದೆ’

“3ನೇ ಅಲೆ ಬರುತ್ತಿಲ್ಲ, ಈಗಾಗಲೇ ಬಂದಿದೆ’

MUST WATCH

udayavani youtube

ನೂತನ ಬಾರ್ ಓಪನ್ ಹಿನ್ನೆಲೆ ಗ್ರಾಮಸ್ಥರಿಂದ ಆಕ್ರೋಶ

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

ಹೊಸ ಸೇರ್ಪಡೆ

ಸಭೆ ನಡೆಸಿದ ಸಂಸದರ ನಡೆಗೆ ಎಚ್‌ಡಿಕೆ ಸಿಡಿಮಿಡಿ

ಸಭೆ ನಡೆಸಿದ ಸಂಸದರ ನಡೆಗೆ ಎಚ್‌ಡಿಕೆ ಸಿಡಿಮಿಡಿ

ಬಳಿಘಟ್ಟ ಏತ ನೀರಾವರಿ ಯೋಜನೆ: ಮುಕ್ತಾಯ ಹಂತದಲ್ಲಿ ಪ್ರಥಮ ಹಂತದ ಕಾಮಗಾರಿ

ಬಳಿಘಟ್ಟ ಏತ ನೀರಾವರಿ ಯೋಜನೆ: ಮುಕ್ತಾಯ ಹಂತದಲ್ಲಿ ಪ್ರಥಮ ಹಂತದ ಕಾಮಗಾರಿ

ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.