
ಇಫಿ ಗೋವಾ ಚಿತ್ರೋತ್ಸವ-2022: ಏನಿದು ಇಂಟಿಗ್ರೇಡ್ ಸಿನಿಮಾ ವಿಭಾಗ, ವಿಶೇಷತೆ ಏನು?
ಈ ಬಾರಿಯ ಉತ್ಸವದಲ್ಲಿ [ಇಫಿ 53 ನೇ ಉತ್ಸವ] ಹತ್ತು ಅಂಥ ವಿಶಿಷ್ಟ ಪ್ರಯತ್ನಗಳನ್ನು ಬಿತ್ತರಿಸಲಾಗುತ್ತಿದೆ.
Team Udayavani, Nov 18, 2022, 5:56 PM IST

ಇಫಿಯ ಈ ಬಾರಿಯ ವಿಶೇಷ ವಿಭಾಗ ’ಇಂಟಿಗ್ರೇಡ್’. ಹೆಚ್ಚು ಪ್ರಯೋಗಾತ್ಮಕ ಗುಣವನ್ನು ಹೊಂದಿರುವ ಸಾಕ್ಷ್ಯಚಿತ್ರ ಹಾಗೂ ಚಲನಚಿತ್ರಗಳನ್ನು ಹೆಕ್ಕಿ ಪೋಣಿಸಿಟ್ಟ ಹಾರವಿದು.
*
ಅರವಿಂದ ನಾವಡ
ಈ ಬಾರಿಯ ಗೋವಾ [ಇಫಿ] ಚಿತ್ರೋತ್ಸವದಲ್ಲಿ ಆರಂಭಿಸಿರುವ ಮತ್ತೊಂದು ಹೊಸತೆಂದರೆ ’ಇಂಟಿಗ್ರೇಡ್‘ [Integrade]. ಈ ವಿಭಾಗದಲ್ಲಿ ಜಗತ್ತಿನ ಅತ್ಯಂತ ಪ್ರಯೋಗಾತ್ಮಕ ಶೈಲಿಯ ಸಾಕ್ಷ್ಯಚಿತ್ರ ಹಾಗೂ ಪ್ರಯೋಗಾತ್ಮಕ ಚಲನಚಿತ್ರಗಳನ್ನು ಹೆಕ್ಕಿ ಕೊಡಲಾಗಿದೆ.
ಪ್ರಸ್ತುತ ಯಾವುದನ್ನು ಸಿನಿಮಾವೆಂದು ಕರೆಯುತ್ತೇವೆಯೋ, ಆ ಚೌಕಟ್ಟನ್ನು ಮೀರಿ ಪ್ರಯೋಗಾತ್ಮಕವಾಗಿ ಸಿನಿಮಾ ಎಂಬುದಕ್ಕೆ ಹೊಸ ವ್ಯಾಖ್ಯೆಯನ್ನು ಕೊಡಲು ಪ್ರಯತ್ನಿಸುತ್ತಿರುವಂಥ ಪ್ರಯತ್ನಗಳಿಗಷ್ಟೇ ಇಲ್ಲಿ ಆದ್ಯತೆ. ಈ ಬಾರಿಯ ಉತ್ಸವದಲ್ಲಿ [ಇಫಿ 53 ನೇ ಉತ್ಸವ] ಹತ್ತು ಅಂಥ ವಿಶಿಷ್ಟ ಪ್ರಯತ್ನಗಳನ್ನು ಬಿತ್ತರಿಸಲಾಗುತ್ತಿದೆ.
ಈ ಕೆಳಗಿನ ಹತ್ತು ಚಿತ್ರಗಳು ಹಲವು ದೇಶಗಳ ವರ್ತಮಾನದ ಚಿತ್ರ ಜಗತ್ತನ್ನು ಹಾಗೂ ಅಲ್ಲಿಯ ಪ್ರಯೋಗಾತ್ಮಕತೆಯನ್ನು ಹೇಳಬಲ್ಲವು.
ಆ್ಯನ್‌ಹೆಲ್79 (Anhell69-Theo Montoya-Spanish)
ಡಿ ಹ್ಯುಮನಿ ಕಾರ್ಪೋರಿಸ್ ಫ್ಯಾಬ್ರಿಕಾ[De Humani Corporis Fabrica- veena Paravel, Lucina castaing – Taylor- French)
ಇಯಾಮಿ [Eami-Paz Encina- Spanish)
ಫೇರಿಟೇಲ್ [Fairytale- Alexander Sokurov- German)
ಹ್ಯಾವ್ ಯು ಸೀನ್ ದಿಸ್ ವುಮೆನ್ [Have you seen this women- Dusan Zoric, Matija Gluscevic-Serbian)
ಇನೋಸೆನ್ಸ್ [Innocense- Guy Davidi- Hebrew)
ಮೈ ಇಮ್ಯಾಜಿನರಿ ಕಂಟ್ರಿ [My Imaginary Country- Patricio Guzman-Spanish)
ಅವರ್ ಲೇಡಿ ಆಫ್ ದಿ ಚೈನೀಸ್ ಶಾಪ್ [Our lady of the Chinese Shop- Ery Claver- Portugeese-chinese)
ಪೆಸಿಫಿಕ್ಷನ್ [Pacifiction-Albert Serra- French)
ದಿ ಗ್ರೇಟ್ ಮೂವ್‌ಮೆಂಟ್ [The Great Movement-Kiro Russo-Spanish)
ಇದೊಂದು ವಿಶೇಷ ವಿಭಾಗವಾಗಿದ್ದು, ಎಲ್ಲ ಸಿನಿಮಾಗಳೂ 2022 ರಲ್ಲಿ ರೂಪಿಸಿದವುಗಳಾಗಿರುವುದು ವಿಶೇಷ. ಈ ಪೈಕಿ ಕೆಲವು ಚಿತ್ರಗಳು ಇಂಡಿಯನ್ ಪ್ರೀಮಿಯರ್ ಗಳಾಗಿರುವುದೂ ಮತ್ತೊಂದು ವಿಶೇಷ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಪಂಚದಾದ್ಯಂತ ಧೂಳೆಬ್ಬಿಸುತ್ತಿರುವ ʻRRRʼ ಜಪಾನ್‌ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ಭಾರತಕ್ಕೆ ಡಬಲ್ ಸಂಭ್ರಮ ತಂದ ಆಸ್ಕರ್ 95: ಇಲ್ಲಿದೆ ನೋಡಿ ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ

ಇಫಿ; ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ; ಬರ್ನರ್

IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು

ಇಫಿ 53ನೇ ಚಿತ್ರೋತ್ಸವ;ಸುನಿಲ್ ಶೆಟ್ಟಿ, ದೇವಗನ್ ಸೇರಿ ಪಂಚ ಸಿನಿ ದಿಗ್ಗಜರ ಮಾತಿಗೆ ಚಪ್ಪಾಳೆಯ ಸುರಿಮಳೆ!
MUST WATCH
ಹೊಸ ಸೇರ್ಪಡೆ

ಅತೀಕ್ ಅಹಮದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ವೈ-ಪ್ಲಸ್ ಭದ್ರತೆ

ಮತ ಎಣಿಕೆಗೆ ಎರಡು ದಿನ ಬೇಕೆ ?! ;ಏನು ಕಾಮೆಂಟ್ಸ್ ಗಳು?! ; ಕಿಡಿ ಕಾರಿದ ಉಪೇಂದ್ರ

ಚುನಾವಣೆ ಘೋಷಣೆ: ಉಡುಪಿ ಮಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಸೂಚನೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ