IPL Auction: ವಿರಾಟ್ ಕೊಹ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗುವುದು ಖಚಿತ?
ಕೊಹ್ಲಿ 2008ರಲ್ಲಿ 12 ಲಕ್ಷ ರೂ.ಗೆ ಆರ್‌ಸಿಬಿ ತಂಡದ ಪಾಲಾಗಿದ್ದರು!!
Team Udayavani, Aug 14, 2024, 7:10 AM IST
ಹೊಸದಿಲ್ಲಿ: ವಿರಾಟ್ ಕೊಹ್ಲಿ ಏನಾದರೂ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವುದರಲ್ಲಿ ಅನುಮಾನವಿಲ್ಲ!
ಇಂಥದೊಂದು ಹೇಳಿಕೆ ನೀಡಿದ ವರು ಬೇರೆ ಯಾರೂ ಅಲ್ಲ, ಖ್ಯಾತ ಹರಾಜುದಾರ ಹ್ಯೂ ಎಡ್ಮೀಡ್ಸ್. ಇವರು 2018ರಿಂದ 2022ರ ತನಕ ಐಪಿಎಲ್ ಹರಾಜುದಾರನಾಗಿ ಕಾರ್ಯ ನಿಭಾ ಯಿಸಿದ್ದರು. ವಿಶ್ವದಾದ್ಯಂತ 2,500ಕ್ಕೂ ಹೆಚ್ಚು ಹರಾಜುಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಇವರದು.
ವಿರಾಟ್ ಕೊಹ್ಲಿ 2008ರಲ್ಲಿ 12 ಲಕ್ಷ ರೂ.ಗೆ ಆರ್‌ಸಿಬಿ ತಂಡದ ಪಾಲಾಗಿದ್ದರು. ಈಗಲೂ ಬೆಂಗಳೂರು ಫ್ರಾಂಚೈಸಿಯಲ್ಲಿಯೇ ಆಡುತ್ತಿದ್ದಾರೆ. ಇದೊಂದು ದಾಖಲೆಯೂ ಹೌದು. ಈಗ ಅವರ ಬೆಲೆ 15 ಕೋಟಿ ರೂ. ಆಗಿದೆ. ಈ ಬಾರಿಯ ಮೆಗಾ ಹರಾಜಿಗೂ ಮುನ್ನ 15 ಕೋಟಿ ರೂ.ಗೂ ಅಧಿಕ ಮೊತ್ತ ನೀಡಿ ಕೊಹ್ಲಿ ಅವರನ್ನು ಆರ್‌ಸಿಬಿ ಉಳಸಿಕೊಳ್ಳಲಿದೆ.
ಮುಂದಿನ ಹರಾಜಿನ ವೇಳೆ ಪ್ರತಿಯೊಂದು ಫ್ರಾಂಚೈ ಸಿಗೂ 6 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗುವುದು ಎಂದು ಮೂಲಗಳು ಹೇಳಿವೆ. ಹೀಗಾಗಿ ಫ್ರಾಂಚೈಸಿ ಗಳು ತಮ್ಮ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಖಚಿತ. ಅಕಸ್ಮಾತ್ ವಿರಾಟ್ ಕೊಹ್ಲಿ ಯೇನಾದರೂ ಹರಾಜು ವ್ಯಾಪ್ತಿಗೆ ಬಂದರೆ, ಅವರ ಬೆಲೆ ಖಂಡಿತ 30 ಕೋಟಿ ರೂ. ದಾಟುತ್ತದೆ ಎಂಬುದು ಎಡ್ಮೀಡ್ಸ್ ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Duleep Trophy 2024; ಮೂರು ತಂಡಗಳಲ್ಲಿ ಹಲವು ಬದಲಾವಣೆ: ಮಯಾಂಕ್ ಗೆ ನಾಯಕತ್ವ
NZvsAFG: ಇನ್ನೆಂದೂ ಇಲ್ಲಿ ಬರುವುದಿಲ್ಲ..: ಭಾರತದ ಮೈದಾನದ ಬಗ್ಗೆ ಕಿಡಿಕಾರಿದ ಅಫ್ಘಾನಿಸ್ತಾನ
Pro Kabaddi ಅ.18-ಡಿ.24 ರ ವರೆಗೆ:ಹೈದರಾಬಾದ್,ನೋಯ್ಡಾ, ಪುಣೆಯಲ್ಲಿ ಪಂದ್ಯಗಳು
US Open;ಅಮೆರಿಕದ ಟೇಲರ್ ಫ್ರಿಟ್ಜ್ ಗೆ ಸೋಲು:ಸಿನ್ನರ್ ಯುಎಸ್ ಚಾಂಪಿಯನ್
3rd Test: ಶ್ರೀಲಂಕಾಕ್ಕೆ 8 ವಿಕೆಟ್ ಜಯ: ಇಂಗ್ಲೆಂಡಿಗೆ 2-1 ಟೆಸ್ಟ್ ಸರಣಿ
MUST WATCH
ಹೊಸ ಸೇರ್ಪಡೆ
Kolkata: ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೂ ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ!
ಮಡಾಮಕ್ಕಿ: ವೃದ್ದ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು
Haryana Assembly Election: ಆಪ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.