ಸೂಟು ಬೂಟು ಕಳಚಿ, ಹಸಿರು ಶಾಲು ಹೆಗಲೇರಿಸಿ ಕಲಬುರ್ಗಿ ಡಿಸಿ ಗ್ರಾಮ ವಾಸ್ತವ್ಯ

Team Udayavani, Feb 19, 2022, 9:01 PM IST

ಹಸಿರು ಶಾಲು ಹೆಗಲೇರಿಸಿ ಕಲಬುರ್ಗಿ ಡಿಸಿ ಗ್ರಾಮ ವಾಸ್ತವ್ಯ

ವಾಡಿ (ಚಿತ್ತಾಪುರ): ಭದ್ರತೆ ಬದಿಗಿಟ್ಟು, ಸೂಟು ಬೂಟು ಕಳಚಿಟ್ಟು, ಶ್ವೇತವರ್ಣದ ಅಂಗಿ ಪಂಚೆಯುಟ್ಟು ಹಸಿರು ಶಾಲು ಹೆಗಲೇರಿಸಿಕೊಂಡ ಜಿಲ್ಲಾಧಿಕಾರಿ ಯಶವಂತ ವಿ.ಗುರಿಕಾರ್, ಗುಲಾಬಿ ರುಮಾಲಿನಲ್ಲಿ ಎತ್ತಿನ ಗಾಡಿ ಹತ್ತಿ ಕೊಂಚೂರು ಗ್ರಾಮ ಪ್ರವೇಶ ಮಾಡುವ ಮೂಲಕ ಗ್ರಾಮೀಣ ರೈತರ ಹೃದಯ ತಟ್ಟಿದರು. ಮಹಿಳೆಯರು ಆರತಿ ಬೆಳಗಿ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮೆರವಣಿಗೆಯ ಆಕರ್ಷಣೆಯಾಗಿದ್ದವು. ಆಂಜನೇಯ ದೇವರ ದರ್ಶನ ಪಡೆದು ಗ್ರಾಮ ವಾಸ್ತವ್ಯ ಆರಂಭಿಸಿದ ಡಿಸಿ, ಜನರ ಕುಂದು ಕೊರತೆ ಆಲಿಸಿದರು. ಟಿಪ್ಪಣಿ ಮುಕ್ತ ಜಿಲ್ಲೆಯಾಗಿಸುವ ಗುರಿ ಕೊಂಚೂರು ಗ್ರಾಮದಿಂದಲೇ ಆರಂಭಿಸುತ್ತಿದ್ದೇನೆ ಎಂದು ಘೋಷಿಸಿ ಅನ್ನದಾತರ ಬಿಕ್ಕಟ್ಟಿನ ಸಮಸ್ಯೆಗೆ ಸರಳ ಪರಿಹಾರ ಒದಗಿಸಿದರು.

ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಡಿಸಿ ಯಶವಂತ ಗುರಿಕಾರ್, ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೊಂಚೂರು ಹಾಗೂ ಹಳಕರ್ಟಿ ಗ್ರಾಮಗಳ ಶೇ.90 ರಷ್ಟು ಜಮೀನುಗಳ ಪಹಣಿ, ಆಕಾರಬಂದ್, ಟಿಪ್ಪಣಿ ದೋಷದಂತಹ ಜಟಿಲ ಸಮಸ್ಯೆಗಳಿಗೆ ತಿಂಗಳೊಳಗಾಗಿ ಪರಿಹಾರ ಒದಗಿಸುವ ಭರವಸೆ ನೀಡಿದರು. 29 ಫಲಾನುಭವಿಗಳಿಗೆ ಪಿಂಚಣಿ, 10 ಕುಟುಂಬಗಳಿಗೆ ಪಡಿತರ ಚೀಟಿ, 80 ಜನ ಬಡವರಿಗೆ ಹೆಲ್ತ್ ಕಾರ್ಡ್, ಹೆಣ್ಣು ಹೆತ್ತ ಎರಡು ಕುಟುಂಬಕ್ಕೆ ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಓರ್ವ ಫಲಾನುಭವಿಗೆ ನಿವೇಶನ ಹಕ್ಕುಪತ್ರ ಸೇರಿದಂತೆ ಒಟ್ಟು 122 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಬಳವಡಗಿ ಕೊಂಚೂರು ಹಳ್ಳದ ಪ್ರವಾಹ ಸಮಸ್ಯೆಯ ಕುರಿತು ವರದಿ ಪಡೆದು ಕ್ರಮಕೈಗೊಳ್ಳುತ್ತೇನೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ನೀಡಲಾಗುವುದು. ಒಂದು ವಾರದಲ್ಲಿ ಕೊಂಚೂರು ಗ್ರಾಮವನ್ನು ಟಿಪ್ಪಣಿ ಮುಕ್ತ ಗ್ರಾಮವನ್ನಾಗಿ ಘೋಷಿಸುತ್ತೇನೆ ಎಂದು ವಾಗ್ದಾನ ಮಾಡಿದರು.

ಇದನ್ನೂ ಓದಿ : ಅತಿಥಿ ಉಪನ್ಯಾಸಕರ ನೇಮಕ: ಶೀಘ್ರವೇ 2ನೇ ಸುತ್ತಿನ ಕೌನ್ಸೆಲಿಂಗ್‌

ನಾಲವಾರ, ಕಡಬೂರ, ಕೊಂಚೂರು, ಬಳವಡಗಿ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬಸ್ ಸೌಲಭ್ಯದ ಬೇಡಿಕೆಯನ್ನು ಸ್ಥಳದಲ್ಲೇ ಬಗೆಹರಿಸಿದ ಡಿಸಿ ಗುರಿಕಾರ್, ಸಾರಿಗೆ ಸಂಸ್ಥೆಯ ಬಸ್ ಜತೆಗೆ ಕೊಂಚೂರಿಗೆ ಆಗಮಿಸಿ ಶನಿವಾರದಿಂದಲೇ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಕೊಂಚೂರಿನಿಂದ ಬಳವಡಗಿ ಗ್ರಾಮದ ವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ ಹಳ್ಳಿ ಜನರ ಜತೆ ಆತ್ಮೀಯವಾಗಿ ಬೆರೆತರು. ಅಂಗನವಾಡಿ ಭಾಗವಾದ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯವನ್ನು ಡಿಸಿ ಗುರಿಕಾರ್ ಹಾಗೂ ತಾಪಂ ಇಒ ನೀಲಗಂಗಾ ಬಬಲಾದ ನೆರವೇರಿಸಿದರು. ಗ್ರಾಮದ ಗಲ್ಲಿಗಳಲ್ಲಿ ಸಂಚರಿಸಿ ಊರಿನ ಮೂಲಭೂತ ಸಮಸ್ಯೆಗಳ ಸ್ಥಿತಿಗತಿ ಅರಿತುಕೊಂಡರು. ವಾಡಿ ನಗರದಲ್ಲಿ ಸಿದ್ಧವಾಗುತ್ತಿರುವ 100 ಕೋಟಿ ವೆಚ್ಚದ ನ್ಯೂ ಟೌನ್ ಕಾಮಗಾರಿ ವೀಕ್ಷಿಸಿದರು. ಬಾಲಕರ ವಸತಿನಿಲಯಗಳಿಗೆ ಮತ್ತು ಕೊಂಚೂರು ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಭ್ಯಾಸ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿದರು.

ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ತಹಶೀಲ್ದಾರ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಟಿಎಚ್‌ಒ ಡಾ.ಅಮರದೀಪ ಪವಾರ, ಸಿಡಿಪಿಒ ಬಿ.ಎಸ್.ಹೊಸಮನಿ, ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಕುಂಬಾರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದು ಅಣಬಿ, ಎಇಇ ಶ್ರೀಧರ ಸಾರವಾಡ, ಲಾಡ್ಲಾಪುರ ಗ್ರಾಪಂ ಅಧ್ಯಕ್ಷೆ ಸೋನಿಬಾಯಿ ರಾಠೋಡ, ಡಿಡಿಎಲ್‌ಆರ್ ಶಂಕರ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ, ಹಿರಿಯ ಮುಖಂಡರಾದ ಜುಮ್ಮಣ್ಣ ಪೂಜಾರಿ, ರುದ್ರುಮುನಿ ಮಠಪತಿ, ಅಲ್ಲಾ ಪಟೇಲ್, ಖಾದರ್ ಪಟೇಲ್, ರಮೇಶ ಡಿಸಿ, ಗೋವಿಂದಪ್ಪ ಸಾಹುಕಾರ, ಸುರೇಶ ಪಾಟೀಲ ಸೇರಿದಂತೆ ನೂರಾರು ಜನ ಫಲಾನುಭವಿಗಳು ಪಾಲ್ಗೊಂಡಿದ್ದರು.

– ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ : ಪ್ರಧಾನಿ ಮೋದಿ

ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಬೇಕೇ? ಹಾಗಾದರೆ ನೀವು ಮದ್ಯಪಾನ ತ್ಯಜಿಸಿ

ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಬೇಕೇ? ಹಾಗಾದರೆ ನೀವು ಮದ್ಯಪಾನ ತ್ಯಜಿಸಿ

38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಮೂಳೆ! ಅಂತಿಮ ನಮನಕ್ಕಾಗಿ ಕಾಯುತ್ತಿದೆ ಕುಟುಂಬ

38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಮೂಳೆ! ಅಂತಿಮ ನಮನಕ್ಕಾಗಿ ಕಾಯುತ್ತಿದೆ ಕುಟುಂಬಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

horo

ಸೋಮವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

ಸಂಭ್ರಮ ಭಗ್ನ ಸಂಚು ವಿಫ‌ಲ: ದೇಶ 75ನೇ ಸ್ವಾತಂತ್ರ್ಯ ದಿನಕ್ಕೆ ಸಜ್ಜು

ಸಂಭ್ರಮ ಭಗ್ನ ಸಂಚು ವಿಫ‌ಲ: ದೇಶ 76ನೇ ಸ್ವಾತಂತ್ರ್ಯ ದಿನಕ್ಕೆ ಸಜ್ಜು

ಅಮೃತ ಸಂಭ್ರಮಕ್ಕೆ 183 ಸ್ವಾತಂತ್ರ್ಯ ಯೋಧರ ಸಾಕ್ಷಿ

ಅಮೃತ ಸಂಭ್ರಮಕ್ಕೆ 183 ಸ್ವಾತಂತ್ರ್ಯ ಯೋಧರ ಸಾಕ್ಷಿ

CMಕಾಂಗ್ರೆಸ್‌ ನಾಯಕರಿಗೆ ಸಿಎಂ ಬೊಮ್ಮಾಯಿ ತಿರುಗೇಟು

ಕಾಂಗ್ರೆಸ್‌ ನಾಯಕರಿಗೆ ಸಿಎಂ ಬೊಮ್ಮಾಯಿ ತಿರುಗೇಟು

MUST WATCH

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

ಹೊಸ ಸೇರ್ಪಡೆ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ : ಪ್ರಧಾನಿ ಮೋದಿ

ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.