ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ


Team Udayavani, Mar 22, 2023, 3:48 PM IST

1-saddsdsadd

ಸದ್ಯ “ಕಾಂತಾರ’ ಸಿನಿಮಾದ ಸದ್ದು ವಿದೇಶಗಳಲ್ಲೂ ಮುಂದುವರೆದಿದೆ. ಭಾರತದಲ್ಲಿ ಈಗಾಗಲೇ ಹಲವು ಭಾಷೆಗಳಲ್ಲಿ ಡಬ್ಬಿಂಗ್‌ ಆಗುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ಕಾಂತಾರ’ ಎಲ್ಲ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್‌ ಮಾಡಿತ್ತು. ಇದೀಗ ಭಾರತದ ಭಾಷೆಗಳು ಮಾತ್ರವಲ್ಲದೆ, “ಕಾಂತಾರ’ ವಿದೇಶಿ ಭಾಷೆಗಳಿಗೂ ಡಬ್ಬಿಂಗ್‌ ಆಗುತ್ತಿದೆ.

ಹೌದು, ಸದ್ಯ “ಕಾಂತಾರ’ ಇಟಾಲಿಯನ್‌ ಮತ್ತು ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ಬಿಂಗ್‌ ಆಗುತ್ತಿದೆ. ಅಂದಹಾಗೆ, ಇಂಥದ್ದೊಂದು ಸುದ್ದಿಯನ್ನು “ಕಾಂತಾರ’ ಸಿನಿಮಾದ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್‌’ ಖಚಿತಪಡಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ “ಹೊಂಬಾಳೆ ಫಿಲಂಸ್‌’, “ಈ ವಿಷಯ ತಿಳಿಸಲು ನಮಗೆ ಖುಷಿ ಎನಿಸುತ್ತಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು.

ಇಟಾಲಿಯನ್‌ ಮತ್ತು ಸ್ಪ್ಯಾನಿಶ್‌ ಭಾಷೆಯಲ್ಲಿ “ಕಾಂತಾರ’ ಚಿತ್ರವನ್ನು ಎಡಿಟ್‌ ಮಾಡಲಾಗುತ್ತಿದೆ’ ಎಂದು ಇಟಾಲಿಯನ್‌ ಭಾಷೆಯಲ್ಲಿ “ಹೊಂಬಾಳೆ ಫಿಲಂಸ್‌’ ಟ್ವೀಟ್‌ ಮಾಡಿದೆ. ಆರಂಭದಲ್ಲಿ “ಕಾಂತಾರ’ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿಪ್ರತಿಕ್ರಿಯೆ ಸಿಕ್ಕಿತು. ಹೀಗಾಗಿ ಪರಭಾಷೆ ಪ್ರೇಕ್ಷಕರು ಕೂಡ “ಕಾಂತಾರ’ ಕಡೆಗೆ ಆಸಕ್ತಿ ತೋರಿಸಿದ್ದರಿಂದ ಕೆಲ ದಿನಗಳಲ್ಲೇ ಸಿನಿಮಾವನ್ನು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್‌ ಮಾಡಿ ರಿಲೀಸ್‌ ಮಾಡಲಾಯಿತು. ಅಲ್ಲದೆ, ಓಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್‌ ವರ್ಷನ್‌ ಕೂಡ ರಿಲೀಸ್‌ ಆಗಿತ್ತು. ಈಗ “ಕಾಂತಾರ’ವನ್ನು ಇಟಾಲಿಯನ್‌ ಮತ್ತು ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್‌ ಮಾಡಲಾಗುತ್ತಿರುವ ಸುದ್ದಿ ಹೊರಬಂದಿದೆ. ಇದರ ನಡುವೆಯೇ “ಕಾಂತಾರ’ ಸಿನಿಮಾವನ್ನು ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಿ ಎಂಬ ಬೇಡಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಟಾಪ್ ನ್ಯೂಸ್

1-w-wewqe

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

1-sadasd

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು

train-track

Express train ಬರುವ ವೇಳೆ ಟ್ರ್ಯಾಕ್ ಮೇಲೆ ಲಾರಿ ಟೈರ್‌ ಗಳು; ಆರೋಪಿಗಳಿಗೆ ಶೋಧ

arrest-lady

NCB ಯಿಂದ ನಿಷೇಧಿತ ಮಾದಕವಸ್ತು ಸಹಿತ ಮಹಿಳೆಯ ಬಂಧನ

1-sadd

Odisha trains ಅವಘಡ: ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದದ್ದೇನು?

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ನಿಲ್ಲಲಿದೆ ಹಸಿರುಮಕ್ಕಿ ಲಾಂಚ್

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ಓಡಾಟ ನಿಲ್ಲಿಸಲಿದೆ ಹಸಿರುಮಕ್ಕಿ ಲಾಂಚ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rudra-garuda-purana

‘ರುದ್ರ ಗರುಡ ಪುರಾಣ’ದಲ್ಲಿ ರಿಷಿ

‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ

‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Naveen shankar spoke about cini journey

ಹೀರೋ- ವಿಲನ್ ಅಂತೇನಿಲ್ಲ, ಪಾತ್ರಗಳಿಗೆ ನ್ಯಾಯ ಕೊಡುವುದೇ ನನ್ನಉದ್ದೇಶ… ನವೀನ್‌ ಶಂಕರ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

1-werr

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

1-qwrewq

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

1-w-wewqe

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

1-sadasd

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು