ವಿದ್ಯಾಕಾಶಿಯ ಮುಕುಟ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ


Team Udayavani, Feb 8, 2023, 8:30 AM IST

add-thumb-3

ಅಂದಿನ ದಕ್ಷಿಣಾತ್ಯ ಮಹಾರಾಷ್ಟ್ರ ಅಥವಾ ಮುಂಬಯಿ ಕರ್ನಾಟಕ ಪ್ರಾಂತದ ಸಾಂಸ್ಕೃತಿಕ, ಭಾಷಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು 1949ರಲ್ಲಿ ಮುಂಬಯಿಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ವಿಶ್ವವಿದ್ಯಾಲಯವು 1950ರ ಮಾರ್ಚ್‌ 1ರಂದು ಶಾಸನಬದ್ಧ ವಿಶ್ವವಿದ್ಯಾಲಯವಾಗಿ ಬೆಳವಲನಾಡು-ಮಲೆನಾಡು ಸೀಮೆಗಳ ಮಧ್ಯದಲ್ಲಿರುವ ಸಾಂಸ್ಕೃತಿಕ ಶೈಕ್ಷಣಿಕ ವಲಯದಲ್ಲಿ “ವಿದ್ಯಾಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ಸಾಹಿತಿಗಳು, ಸಂಗೀತಗಾರರು, ಕಲಾವಿದರ ತವರೂರಾದ ಧಾರವಾಡದಲ್ಲಿ 888 ಎಕರೆ ವ್ಯಾಪ್ತಿಯಲ್ಲಿ ತನ್ನ ಶೈಕ್ಷಣಿಕ ಚಟುವಟಿಕೆ ಆರಂಭಿಸಿತು.

ಕರ್ನಾಟಕದಲ್ಲಿಯೇ ಅತ್ಯಂತ ಹಿರಿಮೆಯ ಹಿರಿಯ ವಿಶ್ವವಿದ್ಯಾಲಯ ವಾಗಿರುವ ಕರ್ನಾಟಕ ವಿಶ್ವವಿದ್ಯಾಲಯವು 48 ಸ್ನಾತಕೋತ್ತರ ವಿಭಾಗಗಳು ಹಾವೇರಿ, ಗದಗ ಮತ್ತು ಕಾರವಾರದಲ್ಲಿ ಸ್ನಾತ್ತಕೋತ್ತರ ಕೇಂದ್ರಗಳು 5 ಘಟಕ ಮಹಾವಿದ್ಯಾಲಯಗಳು ಹಾಗೂ 281 ಮಹಾವಿದ್ಯಾಲಯಗಳನ್ನು ಹೊಂದಿದ್ದು, ಸ್ನಾತಕ, ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೋಮಾ, ಅಡ್ವಾನ್ಸ್ಡ್ ಡಿಪ್ಲೋಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಇಲ್ಲಿ ಬೋಧಿ ಸಲಾಗುತ್ತಿದೆ.

ವಿಶ್ವವಿದ್ಯಾಲಯದ ಸಾಧನೆಗಳು..
– ರಾಷ್ಟ್ರದಲ್ಲಿಯೇ ನೂತನ ಶಿಕ್ಷಣ ಪದ್ಧತಿಯನ್ನು ಮೊಟ್ಟ ಮೊದಲಿಗೆ ಬಾರಿಗೆ ಅನುಷ್ಠಾನಕ್ಕೆ ತಂದಿರುವ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

– ಇತ್ತಿಚಿಗೆ ನಡೆದ ಯುಜಿಸಿ ನ್ಯಾಕ್‌ ಮೌಲ್ಯಮಾಪನದ ಪ್ರಕ್ರಿಯೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 3.13 ಅಂಕಗಳಿಂದ ‘ಎ’ ಗ್ರೇಡ್‌ ಮನ್ನಣೆಗೆ ಪರಿಗಣಿತವಾಗಿದೆ. ಇದು ಸತತವಾಗಿ ನಾಲ್ಕು ಬಾರಿ ಯುಜಿಸಿಯ ನ್ಯಾಕ್‌ನಿಂದ ‘ಎ’ ಶ್ರೇಣಿ ಮಾನ್ಯತೆಗೆ ಪಾತ್ರವಾಗಿರುವ ವಿಶ್ವವಿದ್ಯಾಲಯವಾಗಿದೆ.

– ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂಕರವಾಗುವಂತೆ ಸ್ನಾತಕೋತ್ತರ ಮಟ್ಟದಲ್ಲಿ ಆಯ್ಕೆ ಆಧಾರಿತ ಶೈಕ್ಷಣಿಕ ಪದ್ಧತಿ ಇದ್ದು, ಸ್ನಾತ್ತಕ ಕೋರ್ಸ್‌ಗಳಿಗೂ ಈ ಪದ್ಧತಿಯನ್ನು ಅಳವಡಿಸಲಾಗಿದೆ.

– ವಿಜ್ಞಾನ-ತಂತ್ರಜ್ಞಾನ ವಿಭಾಗದಿಂದ ವಿಶ್ವವಿದ್ಯಾಲಯ ವೈಜ್ಞಾನಿಕ ಉಪಕರಣಗಳ ಕೇಂದ್ರಕ್ಕೆ ಪರ್(Promotion of University Research and Scientific Excellence) ಯೋಜನೆಯಡಿ 10 ಪ್ರಧಾನ ಸಂಶೋಧನಾ ಯೋಜನೆಗಳು ಹಾಗೂ 7 ಪ್ರಯೋಗಾಲಯಗಳ ಸೌಲಭ್ಯ ಹೊಂದಿರುತ್ತದೆ.

– ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣ ಕೇಂದ್ರಕ್ಕೆ ನವದೆಹಲಿ ಡಿಎಸ್‌ಟಿ ಸಂಶೋಧನಾ ಯೋಜನೆ ಅಡಿಯಲ್ಲಿ 5.38 ಕೋಟಿ ರೂ. ವೆಚ್ಚದಲ್ಲಿ ಐದು ಅತ್ಯಾಧುನಿಕ ವೈಜ್ಞಾನಿಕ ವಿಶ್ಲೇಷಣೆಯ ಉಪಕರಣ ವ್ಯವಸ್ಥೆಯನ್ನು (SAIF-Sophisticated Analytical Instrument Facility)ಹೊಂದಿದೆ.

– ಡಿ.ಎಸ್‌.ಟಿ ಮತ್ತು ಪರ್ಸ್‌ ಅಡಿಯಲ್ಲಿ ಮೊದಲನೇ ಹಂತದಲ್ಲಿ ಸುಮಾರು 4.25 ಲಕ್ಷ ರೂ. ಮತ್ತು ಎರಡನೇ ಹಂತದಲ್ಲಿ 5.90 ಕೋಟಿ ರೂ.ವೆಚ್ಚದಲ್ಲಿ ವೈಜ್ಞಾನಿಕ ಕೇಂದ್ರಕ್ಕೆ ವಿವಿಧ ಉಪಕರಣಗಳನ್ನು ಖರೀದಿಸಲಾಗಿದೆ.

– ಪ್ರಸ್ತುತ ಯುಜಿಸಿ, ಡಿಎಸ್‌ಟಿ, ಪರ್ಸ್‌ ಮತ್ತು ರೂಸಾ ವತಿಯಿಂದ ಸರಿ ಸುಮಾರು 16 ಕೋಟಿ 54 ಲಕ್ಷ ರೂ.ಗಳ ಬೆಲೆವುಳ್ಳ ವೈಜ್ಞಾನಿಕ ಉಪಕರಣಗಳನ್ನು ಖರೀದಿ ಸಿ ಸಂಶೋಧಕರ ಉಪಯೋಗಕ್ಕೆ ವೈಜ್ಞಾನಿಕ ಕೇಂದ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡಲಾಗಿದೆ.

– ಬೃಹತ್‌ ಪುಸ್ತಕ ಭಂಡಾರ ಇ-ವ್ಯವಸ್ಥೆ, ಶೋಧಗಂಗಾ ಮುಂತಾದ ಆಧುನಿಕ ಸೌಲಭ್ಯಗಳುಳ್ಳ ಪ್ರೊ| ಶಿ.ಶಿ. ಬಸವನಾಳ ಗ್ರಂಥಾಲಯ ಹಾಗೂ ಸ್ನಾತಕೋತ್ತರ ವಿಭಾಗಗಳ ಗ್ರಂಥಾಲಯಗಳ ವ್ಯವಸ್ಥೆ ಇರುತ್ತದೆ.

– ದೇಶದಲ್ಲಿ ಏಕೈಕ ಕರ್ನಾಟಕ ವಿಶ್ವವಿದ್ಯಾಲಯವು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಧ್ಯಾಪಕರುಗಳಿಗೆ ಅಂತಾರಾಷ್ಟ್ರೀಯ ಸಂಪರ್ಕ ಕಲ್ಪಿಸಲು ಡಾ| ಡಿ.ಸಿ.ಪಾವಟೆ ಸ್ಮರಣಾರ್ಥ ಪ್ರತಿಷ್ಠಾನ ಸ್ಥಾಪಿಸಲಾಗಿದೆ.

– ಡಿ.ಸಿ.ಪಾವಟೆ ಫೌಂಡೇಶನ್‌ ವತಿಯಿಂದ ಪ್ರತಿ ವರ್ಷ 27 ಲಕ್ಷ ರೂ. ವೆಚ್ಚದಲ್ಲಿ ವಿಶ್ವವಿದ್ಯಾಲಯದ ಮೂರು ವಿದ್ಯಾರ್ಥಿಗಳಿಗೆ ಡಾ|ಡಿ.ಸಿ. ಪಾವಟೆ ಫೌಂಡೇಶನ್‌ ಫೆಲೋಶಿಪ್‌ ನೀಡಲಾಗುತ್ತಿದೆ.

– ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ.ಗೋಕಾಕ, ಗಿರೀಶ ಕಾರ್ನಾಡ ಡಾ| ಚಂದ್ರಶೇಖರ ಕಂಬಾರ, ಉದ್ಯಮಿ ನಂದನ ನಿಲೇಕಣಿ, ಜಸ್ಟಿಸ್‌ ಮೋಹನ ಶಾಂತನಗೌಡರ ಮುಂತಾದವರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು.

– ಯುನಿಸ್ಕೋ ಮಾದರಿಯಲ್ಲಿ ಶಿಕ್ಷಕರು ಅಲ್ಪಾವ ಧಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ಸಂಶೋಧನಾ ನಿಧಿ  ಸ್ಥಾಪಿಸಲಾಗಿದೆ.

– ಆವರಣದಲ್ಲಿರುವ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿಂದ ಹೆಚ್ಚಿನ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ.

– ವಿದ್ಯಾರ್ಥಿಗಳಿಗೆ ದೇಶದ ಮಹನೀಯರ ಕುರಿತು ಅಧ್ಯಯನ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ.

– ಉನ್ನತ ಸಂಶೋಧನೆಗಾಗಿ, ಕೆಂಬ್ರಿಡ್ಜ್, ಪೋರ್ಚುಗಲ್‌ ಮುಂತಾದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಹೊಂದಿರುತ್ತದೆ.

– ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವಲ್ಲಿ ವಿಶ್ವವಿದ್ಯಾಲಯವು ಅನೇಕ ಸ್ನಾತಕೋತ್ತರ ಕೋರ್ಸ್‌ಗಳು ದೇಶದ ಪ್ರತಿಷ್ಠಿತ ವೃತ್ತಿಪರ ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

– ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯವು ಸಿಎಸ್‌ಆರ್‌ (Corporate Social Responsibility)ಯೋಜನೆಯಡಿ ನೂರು ಕಂಪ್ಯೂಟರ್ ಒಳಗೊಂಡ ಡಿಜಿಟಲ್‌ ಗ್ರಂಥಾಲಯ ಹೊಂದಿದೆ.

– ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ 24×7 ಮತ್ತು ಹಸಿರು ಉದ್ಯಾನವನ ಗ್ರಂಥಾಲಯಗಳನ್ನು ಹೊಂದಿದೆ.

– ವಿಶ್ವವಿದ್ಯಾಲವಯದ ಸುಗಮ ಆಡಳಿತ ವ್ಯವಸ್ಥೆಗಾಗಿ ವಿಶ್ವವಿದ್ಯಾಲಯವು ಇ-ಆಡಳಿತ ವ್ಯವಸ್ಥೆ(E-Office) ಅನುಷ್ಠಾನಗೊಳಿಸಿದೆ.

– ದೇಶದಲ್ಲಿಯೇ ಪ್ರಥಮ ಬಾರಿಗೆ ಹೊಸ ಶಿಕ್ಷಣ ನೀತಿ ಅನಗುಣವಾಗಿ ವಿಶ್ವವಿದ್ಯಾಲಯವು ಸ್ನಾತ್ತಕ ಮತ್ತು ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು (UUCMS)ಮುಖಾಂತರ ಅನುಷ್ಠಾನ ಗೊಳಿಸಿದೆ.

– ವಿಶ್ವವಿದ್ಯಾಲಯದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರತಿ ಬುಧವಾರ ಖಾದಿ ಬಟ್ಟೆಗಳನ್ನು ಧರಿಸಲು ಹೆಚ್ಚು ಆದ್ಯತೆ ನೀಡಿದೆ.

– ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ನವೋದ್ಯಮಕ್ಕೆ ಪ್ರೊತ್ಸಾಹ ನೀಡಲು ವಿಶ್ವವಿದ್ಯಾಲಯದ ಆವರಣದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಹೊಂದಿದೆ. ಈ ಕೇಂದ್ರದಲ್ಲಿ ನವೋದ್ಯಮಕ್ಕೆ ಬೇಕಾಗುವ ಕೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಅಲ್ಪಾವ ಧಿಯ ತರಬೇತಿ ನೀಡಲಾಗುತ್ತದೆ.

– ವಿಶ್ವವಿದ್ಯಾಲಯಗಳಲ್ಲಿ ಹಸಿರು ಉದ್ಯಾನವನಕ್ಕೆ ಒತ್ತು ನೀಡಿದ್ದು, ವಿಶಾಲವಾದ ಕಾಂಕ್ರೀಟ್‌ ರಸ್ತೆಗಳನ್ನು ಹೊಂದಿದೆ.

– ಭವಿಷ್ಯದ ಆಟಗಾರರನ್ನು ರೂಪಿಸಲು ವಿಶ್ವವಿದ್ಯಾಲಯ ವಿಶಾಲವಾದ ಕ್ರೀಡಾಂಗಣ ಜತೆಗೆ ಸುಸಜ್ಜಿತವಾದ ಜಿಮ್‌ ಒಳಾಂಗಣ ಕ್ರೀಡಾಂಗಣ ಹೊಂದಿದೆ.

– ವಿಶೇಷವಾಗಿ ವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಅಭ್ಯುಧ್ಯೇಯಕ್ಕಾಗಿ 1956 ರಿಂದ ಸಹಕಾರ ಸಂಸ್ಥೆ ಸ್ಥಾಪಿಸಿದ್ದು, ಅದರಿಂದ ಹಲವಾರು ರೀತಿಯಲ್ಲಿ ವಿಶ್ವವಿದ್ಯಾಲಯ ಸಿಬ್ಬಂದಿ ಸದುಪಯೋಗ ಪಡೆಯಲು ಸಹಾಯಕವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ..
ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಸ್ನಾತ್ತಕ ಮತ್ತು ಸ್ನಾತ್ತಕೋತ್ತರ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದೆ.

– ಅನೌಪಚಾರಿಕ ಶಿಕ್ಷಣ ಕಾರ್ಯಕ್ರಮಗಳಡಿ ವಿಶ್ವವಿದ್ಯಾಲಯ ಕಾಕಡೆ ಕರಿಯರ್‌ ಅಕಾಡೆಮಿಯ ಸೇವಾ ಪೂರೈಕೆಯೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್‌ ಮತ್ತು ಆಪ್‌ಲೈನ್‌ ಮಾದರಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಆರಂಭಿಸಲು ನಿರ್ಧರಿಸಿದೆ.

– ಮೊದಲ ಹಂತದ ತರಬೇತಿಯಲ್ಲಿ ಪಿಎಸ್‌ಐ ಪೊಲೀಸ್‌ ಕಾನ್‌ಸ್ಟೆàಬಲ್‌, ಕೆಪಿಎಸ್‌ಸಿ ಗ್ರುಪ್‌-ಸಿ, ಪಿಡಿಒ, ಎಸ್‌ಡಿಎ, ಬ್ಯಾಂಕ್‌ ಕ್ಲರಿಕಲ್‌, ರೇಲ್ವೆ, ಎಸ್‌ಎಸ್‌ಸಿ, ಆರ್‌ಆರ್‌ಬಿ, ತರಬೇತಿ ಆರಂಭಿಸಲಾಗಿದೆ. ಎರಡನೇ ಹಂತದಲ್ಲಿ ಐಎಎಸ್‌, ಕೆಎಎಸ್‌, ಎಫ್‌ಡಿಎ, ಕೆಎಸ್‌ಆರ್‌ಟಿಸಿ-ಟಿಇಟಿ, ಸಿ-ಟಿಇಟಿ, ಮತ್ತು ಇತರೆ ಸ್ಪರ್ಧಾತ್ಮಕ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ವಿಶ್ವವಿದ್ಯಾಲಯವು ಪರಿಸರ ಸ್ನೇಹಿ ನೀತಿಯನ್ನು ಅನುಸರಿಸುತ್ತಿದ್ದು, ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌ ಧ್ಯೇಯಕ್ಕೆ ಒತ್ತು ನೀಡಿದ್ದು, ಮರುಬಳಕೆಯ ವಸ್ತುಗಳಿಗೆ ಹೆಚ್ಚು ಆದ್ಯತೆ ನೀಡಿದೆ.

– ಪ್ರೊ| ಕೆ.ಬಿ. ಗುಡಸಿ, ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ
– ಯಶಪಾಲ್‌ ಕ್ಷೀರಸಾಗರ, ಕುಲಸಚಿವರು, ಕರ್ನಾಟಕ ವಿಶ್ವವಿದ್ಯಾಲಯ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.