ಕಾಯಿ ಕೀಳಲು ತೆಂಗಿನ ಮರ ಹತ್ತಿದ ವ್ಯಕ್ತಿಗೆ ಹೃದಯಾಘಾತ, ಮರದಲ್ಲೇ ಕೊನೆಯುಸಿರು !
50 ಅಡಿ ಎತ್ತರದ ಮರದಿಂದ ಮೃತದೇಹ ಇಳಿಸಲು ಕ್ರೇನ್ ಬಳಕೆ
Team Udayavani, Feb 6, 2023, 10:38 PM IST
ಕೆಂಗೇರಿ: ತೆಂಗಿನಕಾಯಿ ಕೀಳಲು ತೆಂಗಿನ ಮರ ಏರಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಕೊನೆಯುಸಿರೆಳೆದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಮೈಲಸಂದ್ರ ನಿವಾಸಿ ನಾರಾಯಣಪ್ಪ (60) ಮೃತಪಟ್ಟವರು. ಬೆಳಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಮೈಲಸಂದ್ರದ ವಿಜಯಶ್ರೀ ಲೇಔಟ್‌ನಲ್ಲಿರುವ ವೆಂಕಟರಣ ದೇವಸ್ಥಾನ ಸಮೀಪದಲ್ಲಿ ಸುಮಾರು 50 ಅಡಿ ಎತ್ತರದ ತೆಂಗಿನ ಮರವಿದೆ. ಪ್ರತಿ ಬಾರಿಯೂ ನಾರಾಯಣಪ್ಪ ಅವರೇ ಈ ಮರದಲ್ಲಿ ಕಾಯಿ ಕೀಳುತ್ತಿದ್ದರು. ಸೋಮವಾರ ಬೆಳಗ್ಗೆ ಕೂಡ ಮರ ಹತ್ತಿದ್ದಾರೆ.
ಈ ವೇಳೆ ಅಲ್ಲಿಯೇ ಹೃದಯಾಘಾತವಾಗಿದೆ. ಬಹಳ ಹೊತ್ತಾದರೂ ಕೆಳಗೆ ಬಂದಿಲ್ಲ. ಫೋನ್ ಮಾಡಿದರೂ, ಕೂಗಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಅನಂತರ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ತೆಂಗಿನ ಮರದ ಮೇಲೆ ಕುಳಿತಿದ್ದ ನಾರಾಯಣಪ್ಪರನ್ನು ಕೆಳಗಿಳಿಸಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆ?: ಪೇಜಾವರ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ
ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ,ಸಾವಿರಾರು ಸೀರೆಗಳು ವಶ
ಸಕಲ ಸರಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಮಹಾಸ್ವಾಮಿಗಳ ಅಂತ್ಯಕ್ರಿಯೆ: ಸಿಎಂ
ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ
MUST WATCH
ಹೊಸ ಸೇರ್ಪಡೆ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು