
ತ್ರಿವಳಿ ಸಹೋದರಿಯರಿಗೆ ಒಬ್ಬನೇ ಗಂಡ… ಒಬ್ಬೊಬ್ಬರಿಗೂ ಒಂದೊಂದು ದಿನ ಮೀಸಲಿಟ್ಟ ಪತಿ
Team Udayavani, Feb 6, 2023, 7:37 PM IST

ತ್ರಿವಳಿ ಸಹೋದರಿಯರು ಒಬ್ಬನೇ ವ್ಯಕ್ತಿಯನ್ನು ಮದುವೆಯಾದ ವಿಚಿತ್ರ ಘಟನೆಯೊಂದು ಕೀನ್ಯಾದಲ್ಲಿ ಬೆಳಕಿಗೆ ಬಂದಿದೆ…
ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ಯುವಕನನ್ನು ಮದುವೆಯಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಈ ಮೂವರು ಸಹೋದರಿಯರು ನೋಡಲು ಒಂದೇ ತರ ಕಾಣುತ್ತಾರೆ.
ಕೇಟ್ ಮತ್ತು ಸ್ಟೀವೊ ಮೊದಲು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರಂತೆ ಒಂದು ದಿನ ಸ್ಟೀವೊ ತನ್ನ ಗೆಳತಿ ಕೇಟ್ ಜೊತೆ ಆಕೆಯ ಮನೆಗೆ ತೆರಳಿದ್ದಾಗ ಕೇಟ್ ಸಹೋದರಿಯರನ್ನು ನೋಡಿದ್ದಾನೆ ಈ ವೇಳೆ ಮೂವರು ಸಹೋದರಿಯರು ನೋಡಲು ಒಂದೇ ರೀತಿ ಇದ್ದ ಕಾರಣ ಸ್ಟೀವೊ ತನ್ನ ಗೆಳತಿ ಕೇಟ್ ಜೊತೆಗೆ ಉಳಿದ ಇಬ್ಬರು ಸಹೋದರಿಯರನ್ನು ವರಿಸುವುದಾಗಿ ತನ್ನ ಗೆಳತಿ ಜೊತೆ ಹೇಳಿಕೊಂಡಿದ್ದಾನೆ ಇದಕ್ಕೆ ಸಹೋದರಿಯರು ಸಮ್ಮತಿಯನ್ನು ಸೂಚಿಸಿದ್ದಾರೆ.
ಅದರಂತೆ ಸ್ಟೀವೊ ತ್ರಿವಳಿ ಸಹೋದರಿಯರನ್ನು ಒಂದೇ ವೇದಿಕೆಯಲ್ಲಿ ವಿವಾಹವಾಗಿದ್ದಾನೆ, ಅಲ್ಲದೆ ಯಾರಿಗೂ ತನ್ನಿಂದ ನೋವಾಗಬಾರದೆಂದು ಪ್ರೀತಿಯಲ್ಲೂ ಸಮಾನತೆ ತೋರ್ಪಡಿಸಿದ್ದಾನೆ. ತ್ರಿವಳಿ ಸಹೋದರಿಯರು ಮದುವೆಯ ಬಳಿಕ ನಾವು ಅನ್ಯೋನ್ಯವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ತನ್ನ ಮೂವರು ಮಡದಿಯರಿಗಾಗಿ ವಾರದಲ್ಲಿ ಒಂದೊಂದು ದಿನ ಮೀಸಲಿಟ್ಟಿದ್ದಾನಂತೆ ಸ್ಟೀವೊ. ಸದ್ಯ ಈ ಜೋಡಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಜೋಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಈಗಿನ ಕಾಲದಲ್ಲಿ ಒಬ್ಬರನ್ನು ಮದುವೆಯಾಗಿ ನಿಭಾಯಿಸುವುದೇ ಕಷ್ಟ, ಅಂಥದ್ದರಲ್ಲಿ ಮೂವರು ಹೆಂಡತಿಯರೊಂದಿಗೆ ಹೇಗೆ ಜೀವನ ಸಾಗಿಸುತ್ತಾನೋ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಮೂವರು ಮಡದಿಯರೊಂದಿಗೆ ನಾನು ಸಂತೋಷವಾಗಿದ್ದೇನೆ ಎಂದು ಸ್ಟೀವೋ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತತ್ತರಿಸಿ ಹೋದ ಟರ್ಕಿ; 24 ಗಂಟೆಗಳೊಳಗೆ ಮೂರನೇ ಭೂಕಂಪ!!
Man marries set of identical triplets because the girls can’t stay away from each other🤯🤯🤯 pic.twitter.com/xNw1JTLbjf
— 🇨🇲🇳🇬TheGdMother™️🇨🇲🇳🇬 (@NjangiGuru) May 24, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪೋಪ್ ಫ್ರಾನ್ಸಿಸ್ ನೋಡಿ ಬೆರಗಾದ ಜನ! ಫೋಟೋ ವೈರಲ್