
ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ
ಫೈನಲ್ ಸೋತ ಬಳಿಕ ಹತಾಶೆಗೊಂಡ ಕಿವೀಸ್ ಆಲ್ ರೌಂಡರ್!
Team Udayavani, Jul 15, 2019, 7:01 PM IST

ಲಂಡನ್ : ಫೈನಲ್ ಪಂದ್ಯದ ಸೋಲಿನ ಬಳಿಕ ನ್ಯೂಜಿಲೆಂಡ್ ಸವ್ಯಸಾಚಿ ಜೇಮ್ಸ್ ನೀಶಮ್ ತಮ್ಮ ನೋವನ್ನು ಹೊರ ಹಾಕಿದ್ದಾರೆ. ‘ಮಕ್ಕಳೇ ಯಾರು ಕೂಡ ಕ್ರೀಡೆಯನ್ನು ಆಯ್ದುಕೊಳ್ಳಬೇಡಿ. ಅದಕ್ಕಿಂತ ಬೇಕರಿ ಕೆಲಸ ಅಥವಾ ಬೇರೆಯಾವುದಾದರೂ ಕ್ಷೇತ್ರ ಉತ್ತಮ’ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಯಾರೂ ಕೂಡ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಬೇರೆ ಉದ್ಯೋಗದತ್ತ ಮನಸ್ಸು ಮಾಡಿ ಎಂದು ಯುವ ಸಮುದಾಯಕ್ಕೆ ಸೂಚಿಸಿದ್ದಾರೆ. ಬೊಜ್ಜು ಸಮಸ್ಯೆ ಎದುರಾದರೆ ಡಯಟ್ ಮಾಡಿ, 60 ವರ್ಷಕ್ಕೆ ಕೊನೆಯುಸಿರು ಎಳೆದರೆ ಸಾಕು ಎಂದು ಹೇಳಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಹಲವರು ಜೇಮ್ಸ್ ನೀಶಮ್ ಅವರನ್ನು ಸಮಾಧಾನಪಡಿಸಿದ್ದಾರೆ.
ಟಾಪ್ ನ್ಯೂಸ್
