ಮಾತನಾಡುವಾಗ ಕಾಮನ್ ಸೆನ್ಸ್ ಇರಬೇಕು: ಆರಗ ವಿರುದ್ಧ ಮಾಜಿ ಸಚಿವ ಕಿಮ್ಮನೆ ವಾಗ್ದಾಳಿ
Team Udayavani, Feb 2, 2023, 6:54 PM IST
ತೀರ್ಥಹಳ್ಳಿ : ರಾತ್ರಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ ಅದಕ್ಕೆಲ್ಲ ಉತ್ತರವನ್ನು ನಾನು ಕೊಡುತ್ತೇನೆ. ರಾತ್ರಿ ಕುಡಿದು ಗಲಾಟೆ ಮಾಡಿಕೊಂಡಿದ್ದು ಜ್ಞಾನೇಂದ್ರ ಅವರಿಗೆ ಗೊತ್ತಾಗಿರಬಹುದು. ಹಗಲು ಬಿಜೆಪಿಯವರು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಲ್ಲ ಆಗ ಕುಡಿದುಕೊಂಡು ಹೋಗಿ ಕೊಟ್ಟಿದ್ರ ? ಬಿಜೆಪಿಯವರು ಹೋಗಿ ಕಂಪ್ಲೇಂಟ್ ಕೊಟ್ಟಿದ್ದು ರಾತ್ರಿಯಲ್ಲ ಹಗಲು. ಏನೇ ಮಾತನಾಡುವುದಾದರೂ ಒಂದು ಕಾಮನ್ ಸೆನ್ಸ್ ಬೇಕು ಎಂದು ಆರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಕುಡುಕರ ಪರ ಇದ್ದೇನೆ ಎಂದು ಹೇಳುತ್ತಾರೆ ನಾನು ಕುಡುಕರ ಪರ ಆಗಲು ಸಾಧ್ಯವಿಲ್ಲ. ಅವರಿಗೆ ಕುಡಿಯುವ ಅಭ್ಯಾಸ ಇರಬಹುದು ನಾನು ಕುಡಿಯುವುದು ಇಲ್ಲ. ತೀರ್ಥಹಳ್ಳಿಯಲ್ಲಿ ಮರಳು ಕಲ್ಲು ಎಲ್ಲ ಹೊಡಿಯುತ್ತಿದ್ದಾರೆ ಎಂದರೆ ಅದು ಬಿಜೆಪಿ ಅವರೇ. ಇವರ ಹಣೆಬರಹಕ್ಕೆ ಒಬ್ಬರಿಗೆ ಉದ್ಯೋಗ ಕೊಡಿಸಲು ಆಗುವುದಿಲ್ಲ. ಅಂತಹದರಲ್ಲಿ ಉದ್ಯೋಗ ಮಾಡಿಕೊಂಡಿರುವವನನ್ನು ಜೈಲಿಗೆ ಅಟ್ಟಲು ಪ್ರಯತ್ನಿಸುತ್ತಾರಲ್ಲ ಎಂತಹ ಮನಸ್ಥಿತಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವೆಲ್ಲರೂ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯನ್ನು ನೋಡಿದ್ದೀರಿ ಅಧಿಕಾರಿಗಳನ್ನು ಜನಪ್ರತಿನಿಧಿಗಳ ಮೇಲೆ ಗಲಾಟೆಗೆ ಬಿಡುವುದು. ಗ್ರಾಮ ಪಂಚಾಯಿತಿಯ ಪಿಡಿಓ ಅಲ್ಲಿನ ಇಬ್ಬರು ಸದಸ್ಯರಿಗೆ ಹೋಗಿ ಹೊಡೆಯುತ್ತಾರೆ ಅದಕ್ಕೆ ಜ್ಞಾನೇಂದ್ರ ಬೆಂಬಲ ಕೊಡುತ್ತಾರೆ ಎಂದರೆ ಏನರ್ಥ. ಸ್ಯಾಂಟ್ರೋ ರವಿ, ಆರ್ ಡಿ ಪಾಟೀಲ, ದಿವ್ಯ ಹಾಗರಗಿ,
ಇವರದೆಲ್ಲಾ ಸಂಪರ್ಕ ಇಟ್ಟುಕೊಂಡು ಇಲ್ಲಿ ಲಕ್ಷ್ಮಿ ಕಾಯಿನ್ ಹಂಚುತ್ತಾರೆ. ಜ್ಞಾನೇಂದ್ರ ಅವರು ಯಾಕೆ ಹೀಗಾದರೂ ಅಂತ ನನಗೆ ಗೊತ್ತಾಗುತ್ತಿಲ್ಲ ಎಂದರು.
ಮಲ್ಲಂದೂರಿನಲ್ಲಿ ವಿದ್ಯುತ್ ರಸ್ತೆ ಇತರ ಸಮಸ್ಯೆಗಳಿಗೆ ಪ್ರತಿಭಟನೆ ಮಾಡಿದವನು ನಾನು. ಆಗ ನಾನು ಶಾಸಕ ಕೂಡ ಆಗಿರಲಿಲ್ಲ ಅವರೇ ಆರಗಾದ ಜ್ಞಾನೇಂದ್ರ ಅವರೇ ಶಾಸಕರಾಗಿದ್ದರು. ಆದರೆ ಈಗ ಏನೇ ಹೇಳಿದರೂ ನಾನೇ ಮಾಡಿದ್ದು ಎಂದು ಹೇಳುತ್ತಾರೆ ಅದಕ್ಕೆಲ್ಲ ಬೇರೆ ರೀತಿಯಲ್ಲೇ ವಿಶೇಷವಾದ ಪತ್ರಿಕಾಗೋಷ್ಠಿಯನ್ನು ಕರೆದು ಉತ್ತರ ಕೊಡುತ್ತೇನೆ ಎಂದರು.
ತೀರ್ಥಹಳ್ಳಿಗೆ ಪ್ರಜಾಧ್ವನಿ ಯಾತ್ರೆ ಬರುವ ಬಗ್ಗೆ ಮಾತನಾಡಿ ಫೆಬ್ರವರಿ 3 ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಪ್ರಜಾ ಧ್ವನಿ ಯಾತ್ರೆ ಪ್ರಾರಂಭವಾಗಲಿದೆ. ಈ ಯಾತ್ರೆಯಲ್ಲಿ ನಾನು ಇರಬೇಕೆಂದು ಎಐಸಿಸಿಯಲ್ಲಿ ನಿರ್ದೇಶನ ಇದೆ. ಫೆಬ್ರವರಿ 8 ರಂದು ತೀರ್ಥಹಳ್ಳಿಗೆ ಈ ಯಾತ್ರೆ ಬರಲಿದೆ.
ಪ್ರಜಾಧ್ವನಿ ಕಾರ್ಯಕ್ರಮ ಪಟ್ಟಣ ಪಂಚಾಯತ್ ಆವರಣದಲ್ಲಿ ನಡೆಯಲಿದೆ. ಹಾಗೂ ಯೂತ್ ಕಾಂಗ್ರೆಸ್ ನಿಂದ ಬೆಚ್ಚುವಳ್ಳಿಯಿಂದ ತೀರ್ಥಹಳ್ಳಿಯ ವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಕುಶಾವತಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣ ಪಂಚಾಯತ್ ಆವರಣಕ್ಕೆ ಕರೆತರಲಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೇಳೂರು ಮಿತ್ರ, ವಿಶ್ವನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಹರ್ಷೇಂದ್ರ ಕುಮಾರ್, ಪುಟ್ಲೋಡು ರಾಘವೇಂದ್ರ, ಪೂರ್ಣೇಶ್ ಕಳಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಪದವಿ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ ಖಂಡನೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ
ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ,ಸಾವಿರಾರು ಸೀರೆಗಳು ವಶ
ಸಕಲ ಸರಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಮಹಾಸ್ವಾಮಿಗಳ ಅಂತ್ಯಕ್ರಿಯೆ: ಸಿಎಂ
ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ
MUST WATCH
ಹೊಸ ಸೇರ್ಪಡೆ
ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ