Korategere Shree Anjaneyaswamy Temple: ಬಾಗಿಲು ತೆರೆದ ಶ್ರೀ ಆಂಜನೇಯಸ್ವಾಮಿ ದೇವಾಲಯ

ಪೂಜೆ ಸಲ್ಲಿಸಲು ಬೇರೋಬ್ಬರಿಗೆ ಅವಕಾಶ: ದೊಡ್ಡಕಾಯಪ್ಪ ದೇಗುಲದ ವಿವಾದ ಅಂತ್ಯ

Team Udayavani, Apr 5, 2023, 5:57 PM IST

korate

ಕೊರಟಗೆರೆ:ಆರ್ಚಕರ ನೇಮಕ ವಿವಾದದ ಹಿನ್ನಲೆಯಲ್ಲಿ ಕೊರಟಗೆರ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಆರ್ಚಕ ಶ್ರೀನಿವಾಸ ಮೂರ್ತಿ ಹಾಕಿದ್ದ ಬೀಗವನ್ನು ತಾಲೂಕು ಆಡಳಿತ ತೆರವುಗೊಳಿಸಿದೆ.

ದೊಡ್ಡಕಾಯಪ್ಪ ಎಂದೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಪ್ರತ್ಯೇಕ ಬೀಗ ಹಾಕಿದ್ದರಿಂದ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿತ್ತು.ಮೂರು ದಿನದ ಹಿಂದೆಯೇ ಕುರಂಕೋಟೆ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲು ಹಾಕಿಕೊಂಡು ಕಾಣೆಯಾಗಿದ್ದ ಆರ್ಚಕ ಶ್ರೀನಿವಾಸ ಮೂರ್ತಿ ಮಂಗಳವಾರ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು ಅಧಿಕಾರಿಗಳ ಸೂಚನೆಯಂತೆ ದೇವಾಲಯದ ಬಾಗಿಲು ತೆರೆದಿದ್ದಾರೆ.
ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಚರ್ಚಿಸಿ ಪಂಚಾಯತಿ ನಡೆಸಿದ್ದು ಬೆರೋಬ್ಬರನ್ನು ಆರ್ಚಕರನ್ನಾಗಿ ನೇಮಿಸಿ ದಿನ‌ನಿತ್ಯ ಪೂಜೆ‌ ನಡೆಸುವಂತೆ ಸೂಚಿಸಿದರು.

ಗ್ರಾಮದಲ್ಲಿ ಗಲಾಟೆಗೆ ಕಾರಣವಾಗಬಾರದೆಂದು ತಹಸೀಲ್ದಾರ್ ಮುನಿಶಾಮಿರೆಡ್ಡಿ ಜೂಡ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ವಿವಾದ ಬಗೆಹರಿಸಿಕೊಳ್ಳಿವಂತೆ ಸ್ಥಳೀಯರಿಗೆ ಅವಕಾಶ ನೀಡಿ ತೆರಳಿದ್ದರು.

ಏನಿದು ದೇವಾಲಯ ವಿವಾದ?
ಪ್ರತಿ ವರ್ಷದಂತೆ ಶ್ರೀ ರಾಮ‌ನವಮಿ ಹಬ್ಬದ‌ ನಂತರ ಆರ್ಚಕರ ಬದಲಾವಣೆ ಊರಿನಲ್ಲಿ ವಾಡಿಕೆಯಾಗಿದ್ದು ಆದರಂತೆ ಆರ್ಚಕ ಶ್ರೀನಿವಾಸ ಮೂರ್ತಿ ಅವರನ್ನು ಬದಲಾಯಿಸಿ ವೆಂಕಟೇಶ ಮೂರ್ತಿಯವರನ್ನು‌ ನೇಮಿಸಲಾಗಿತ್ತು.ಪೂಜೆ ಉಸ್ತುವಾರಿಯನ್ನು ಬಿಟ್ಟುಕೊಡಬೇಕಿದ್ದ ಶ್ರೀನಿವಾಸ ಮೂರ್ತಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಮೂರು ದಿನಗಳಿಂದ ಕಾಣೆಯಾಗಿದ್ದರು. ಗ್ರಾಮಸ್ಥರು ತಹಸೀಲ್ದಾರ್ ದೂರು ನೀಡಿದ ಕೂಡಲೇ ಮಂಗಳವಾರ ಶ್ರೀನಿವಾಸ ಮೂರ್ತಿ ಗ್ರಾಮಕ್ಕೆ ಆಗಮಿಸಿ ದೇಗುಲದ ಬಾಗಿಲು ತೆಗೆದಿದ್ದಾರೆ.ಆರ್ಚಕ ವೆಂಕಟೇಶ ಮೂರ್ತಿ ಯವರು ಪೂಜೆ ಮುಂದುವರಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದು ವಿವಾದ ಸದ್ಯಕ್ಕೆ ಬಗೆಹರಿದಿದೆ.

ಇದನ್ನೂ ಓದಿಜೈನ ಮಠದಲ್ಲಿ 2622ನೇ ಮಹಾವೀರ ಜಯಂತಿ

ದೇವಸ್ಥಾನಕ್ಕೆ‌ಆರ್ಚಕ ಬೀಗ ಹಾಕಿದ್ದರಿಂದ ಭಕ್ತರು ಬಾಗಿಲಿನಲ್ಲಿಯೇ ಪೂಜೆ ಸಲ್ಲಿಸುತ್ತಿದ್ದರು.ವಿವಾದದ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಸ್ಥಳೀಯರೇ ತೀರ್ಮಾನ ತೆಗೆದು ಮಾಡಿಕೊಂಡು ಬಗೆಹರಿಸಿಕೊಳ್ಳಲಾಗಿದೆ. ನೂತನ ಅರ್ಚಕ ವೆಂಕಟೇಶ್ ‌ಮೂರ್ತಿ ದೇವಾಲಯದ ಪೂಜೆಯನ್ನು ಮುಂದುವರಿಸಿಕೊಂಡು ಹೋಗಲು ಸೂಚಿಸಲಾಗಿದೆ.
ಎ.ಜೆ.ರಾಜು, ಉಪ ತಹಸೀಲ್ದಾರ್ ಚನ್ನರಾಯನದುರ್ಗ ಹೋಬಳಿ ಕೊರಟಗೆರೆ.

ದೇವಸ್ಥಾನಕ್ಕೆ ಬೀಗ ಹಾಕಿ‌ ಕಾಣೆಯಾಗಿದ್ದಆರ್ಚಕ ‌ಶ್ರೀನಿವಾಸ ಮೂರ್ತಿಯ ಮೇಲೆ ಶಿಸ್ತು ಕ್ರಮಕ್ಕಾಗಿ ಎ.ಸಿಯವರಿಗೆ ಲಿಖಿತವಾಗಿ ಪತ್ರ ಬರೆದಿದ್ದೇನೆ.ಅಲ್ಲಿಂದ ಏನೂ ಬರುತ್ತೂ ಅದರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರದಿ ಪ್ರಕಾರ ಯಾರಿಗಿತ್ತೂ ಅವರಿಗೆ ಹಸ್ತಾಂತರ ಮಾಡಲಾಗಿದೆ.ಆರ್ಚಕ ವೆಂಕಟೇಶ ಮೂರ್ತಿ ಯನ್ನು‌ ನೆಮಿಸಲಾಗಿದ್ದು ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿವೆ.

ಮುನಿಶಾಮಿರೆಡ್ಡಿ, ತಹಸೀಲ್ದಾರ್ .ಕೊರಟಗೆರೆ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.