ಕುಣಿಗಲ್: ಪ್ರತ್ಯೇಕ ಅಪಘಾತ, ಇಬ್ಬರು ಸಾವು, ಇಬ್ಬರಿಗೆ ಗಾಯ
Team Udayavani, Apr 1, 2023, 9:16 PM IST

ಕುಣಿಗಲ್: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಅಮೃತೂರು ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಅಮೃತೂರು ಹೋಬಳಿ ಹೊಳಗೆರೆಪುರ ಗ್ರಾಮದ ರಾಮ್‌ದಾಸ್ (೫೫) ಹಾಗೂ ಹುಲಿಯೂರುದುರ್ಗ ಹೋಬಳಿ ತೊರೆಬೊಮ್ಮನಹಳ್ಳಿ ಗ್ರಾಮದ ರುದ್ರೇಶ್ (೩೧) ಮೃತ ದುರ್ದೈವಿಗಳು.
ರಾಮ್‌ದಾಸ್ ತನ್ನ ಗ್ರಾಮದಿಂದ ಹೊಸಕೆರೆಗೆ ಬಂದು ತಮ್ಮ ಸಂಬಂಧಿಕರಿಗೆ ಹಬ್ಬಕೆ ಹೇಳಿ ತಮ್ಮ ಗ್ರಾಮ ಹೊಳಗೆರೆಪುರಕ್ಕೆ ವಾಪಸ್ಸ್ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದರು, ಬಸ್ ಬಂದ ಕಾರಣ ರಸ್ತೆ ದಾಟುತ್ತಿದ್ದ ವೇಳೆ, ಅಮೃತೂರಿನಿಂದ ಯಡವಾಣಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಾಮ್‌ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಬೈಕ್‌ನಲ್ಲಿ ಇದ್ದ ಇಬ್ಬರಿಗೆ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ರುದ್ರೇಶ್ ಎಂಬ ವ್ಯಕ್ತಿ ಕೆಲಸದ ನಿಮಿತ ತನ್ನ ಗ್ರಾಮ ತೊರೆಬೊಮ್ಮನಹಳ್ಳಿ ಗ್ರಾಮದಿಂದ ಹುಲಿಯೂರುದುರ್ಗಕ್ಕೆ ಹೊಗುತ್ತಿರಬೇಕಾದರೆ, ಸುಗ್ಗನಹಳ್ಳಿ ಹಾಗೂ ತೊರೆಬೊಮ್ಮನಹಳ್ಳಿ ಮಧ್ಯೆ ಯಡವಾಣಿ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ಹೋಗುತ್ತಿದ್ದ ಕಾರು ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ರುದ್ರೇಶನ್ನು ತೀವ್ರವಾಗಿ ಗಾಯಗೊಂಡನ್ನು ಅಸ್ಪತ್ರೆಗೆ ಕರೆದ್ಯೋಯುವ ಮಾರ್ಗದ ಮಧ್ಯೆ ರುದ್ರೇಶನ್ನು ಮೃತಪಟ್ಟಿದ್ದು ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದು ವಿಶ್ವ ದಾಖಲೆ ನಿರ್ಮಿಸಿದ 4ರ ಪೋರ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Illicit ಸಂಬಂಧ; ವಿವಾಹಿತೆಗೆ ಬ್ಲಾಕ್ ಮೇಲ್: ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಸದಸ್ಯ ಅರೆಸ್ಟ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?
MUST WATCH
ಹೊಸ ಸೇರ್ಪಡೆ