ಮದುವೆ ಬಳಿಕ ಆಸ್ತಿ ಹಂಚಿಕೆ ಅಂದಿದ್ದಕ್ಕೆ ಒಡಹುಟ್ಟಿದ ಅಣ್ಣನನ್ನೇ ಹತ್ಯೆಗೈದ ತಮ್ಮ
Team Udayavani, Feb 2, 2023, 10:24 PM IST
ಕುಷ್ಟಗಿ: ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಮದುವೆ ಬಳಿಕ ಆಸ್ತಿ ಹಂಚಿಕೆ ಎಂದಿದ್ದಕ್ಕೆ ತಮ್ಮ, ಅಣ್ಣನನ್ನು ಕೊಲೆ ಮಾಡಿದ ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಯಮನೂರಪ್ಪ ಬಸಪ್ಪ ಕಡಿವಾಲರ್ (35) ಮೃತ ದುರ್ದೈವಿ, ಯಮನೂರಪ್ಪನಿಗೆ ಕೆಲಸ ನೆಪದಲ್ಲಿ ಬಂದ ಯಮರೂಪಿ ತಮ್ಮ ಮಲ್ಲಪ್ಪ ಕಡಿವಾಲರ್ (30) ನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆಸಿ, ಸ್ನಾನದ ಕೊಠಡಿಯಲ್ಲಿ ಕಟ್ಟಿಗೆಯಿಂದ ಭೀಕರವಾಗಿ ಹೊಡೆದು, ಚಾಕುವಿನಿಂದ ಮನಬಂದಂತೆ ಇರಿದು ಕೊಂದು ಹಾಕಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ಮದುವೆ ಬಳಿಕ ಆಸ್ತಿ ಹಂಚಿಕೆ ಅಂದಿದ್ದಕ್ಕೆ ಕೊಲೆ
ಪಟ್ಟಣಚಿಂತಿ ಗ್ರಾಮದ ಬಸಪ್ಪ ಕಡಿವಾಲರ್ ಅವರಿಗೆ ನಾಲ್ವರು ಗಂಡು ಮಕ್ಕಳು 16 ಎಕರೆ ಜಮೀನು ಇತ್ತು. ಶರಣಪ್ಪ, ನಾಗಪ್ಪ, ಯಮನೂರಪ್ಪ, ಮಲ್ಲಪ್ಪ ಈ ನಾಲ್ವರು ಸಹೋದರರಲ್ಲಿ ಕೊನೆಯವ ಮಲ್ಲಪ್ಪ ಹೊರತು ಪಡಿಸಿ ಮೂವರು ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಆರೋಪಿ ಮಲ್ಲಪ್ಪ ಮಾತ್ರ ಎರಡನೇ ಸಹೋದರ ನಾಗಪ್ಪನ ಜೊತೆಯಲ್ಲಿದ್ದ. ಇವರ ಪಿತ್ರಾರ್ಜಿತ 16 ಎಕರೆ ಆಸ್ತಿಯಲ್ಲಿ ತನಗೆ ಸೇರಬೇಕಾದ ಆಸ್ತಿ ಹಂಚಿಕೆಗೆ ಅಣ್ಣಾ ಯಮನೂರಪ್ಪ ಅವರನ್ನು ಒತ್ತಾಯಿಸುತ್ತಲೇ ಇದ್ದ. ಅಣ್ಣಾ ಯಮನೂರಪ್ಪ ತಮ್ಮ ಮಲ್ಲಪ್ಪನಿಗೆ ಮದುವೆಯಾಗಲಿ ನಂತರ ಆಸ್ತಿ ಹಂಚಿಕೆ ವಿಷಯ ಹೇಳುತ್ತನೇ ದಿನದೂಡುತ್ತಿದ್ದ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನನಾಗಿದ್ದ ಮಲ್ಲಪ್ಪ ಮೂರನೇ ಸಹೋದರ ಯಮನೂರಪ್ಪನನ್ನು ಚಾಕುವಿನಿಂದ ಇರಿದು ಕೊಂದು ಹಾಕಿದ್ದಾನೆ.
ಘಟನೆ ಹಿನ್ನೆಲೆಯಲ್ಲಿ ಕೊಲೆ ಆರೋಪಿ ತಮ್ಮನನ್ನು ಹನುಮಸಾಗರ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ,. ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹನುಮಸಾಗರ ಪಿಎಸೈ ಸುನೀಲ್ ಎಚ್. ತಿಳಿಸಿದ್ದಾರೆ.
ಇದನ್ನೂ ಓದಿ: ಟಿಕೆಟ್ ಖರೀದಿಸಲು ನಿರಾಕರಣೆ: ಶಿಶುವನ್ನೇ ಬಿಟ್ಟು ಹೋದ ದಂಪತಿ.!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್
ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…
ಕೋವಿಡ್ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ
MUST WATCH
ಹೊಸ ಸೇರ್ಪಡೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ