ಉಡುಪಿ: ಕೆವೈಸಿ ಅಪ್‌ಡೇಟ್ ನೆಪದಲ್ಲಿ ವ್ಯಕ್ತಿಗೆ 1.6 ಲ.ರೂ. ವಂಚನೆ
Team Udayavani, Feb 4, 2023, 11:11 PM IST
ಉಡುಪಿ: ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಖಾತೆ ವಿವರ ಪಡೆದು 1.6 ಲ.ರೂ. ಆನ್‌ಲೈನ್ ಮೂಲಕ ದೋಚಿದ ಘಟನೆ ನಡೆದಿದೆ.
ಅಲೆವೂರು ರಸ್ತೆಯ ಎಎಲ್‌ಎನ್ ರಾವ್ ಲೇಔಟ್ ನಿವಾಸಿ ಸ್ಟ್ಯಾನ್ಲಿ ಪಿ. ಕುಂದರ್ ಅವರು ತಮ್ಮ ಮೊಬೈಲ್‌ಗೆ 2022ರ ನ. 3ರಂದು ಕೆವೈಸಿ ಅಪ್‌ಡೇಟ್ ಸಲುವಾಗಿ ಬಂದ ಸಂದೇಶವನ್ನು ನಂಬಿ ಆ ಸಂದೇಶದಲ್ಲಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಿದ್ದರು.
ಫೆ. 2ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಸ್ಟಾನ್ಲಿ ಪಿ. ಕುಂದರ್ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಒಟಿಪಿ ಪಡೆದುಕೊಂಡು ಅವರ ಖಾತೆಯಿಂದ ಹಂತ ಹಂತವಾಗಿ 1,06,826 ರೂ.ಗಳನ್ನು ಆನ್‌ಲೈನ್ ಮೂಲಕ ದೋಚಿದ್ದಾರೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೌದಿ ಪ್ರೊ ಲೀಗ್ ಫುಟ್ ಬಾಲ್: ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ