ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ… ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
Team Udayavani, Feb 5, 2023, 5:58 PM IST
ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಇನ್ನು ಮೂರು ತಿಂಗಳಕಾಲ ನಾನು ಕೆಟ್ಟದನ್ನು ನೋಡಲ್ಲ, ಕೆಟ್ಟದನ್ನು ಕೇಳಲ್ಲ, ಜೊತೆಗೆ ಕೆಟ್ಟದನ್ನು ಮಾತನಾಡಲ್ಲ ಎಂದುಕೊಂಡಿದ್ದೇನೆ ಎಂದು ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ಹೇಳಿಕೆ ನೀಡಿದ ಹೆಬ್ಬಾಳ್ಕರ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಹಾಗಾಗಿ ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಅವರು ನಾನು ಮುಂದಿನ ಮೂರು ತಿಂಗಳು ಯಾವುದೇ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಬಹಳ ತಾಳ್ಮೆಯಿಂದ ಕೆಲಸ ಮಾಡಬೇಕೆಂದಿದ್ದೇನೆ ಎಂದು ಹೇಳಿದ್ದಾರೆ.
ಸಿಡಿ ವಿಚಾರದ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ ಅಲ್ಲದೆ ಈ ವಿಚಾರವಾಗಿ ಪ್ರಶ್ನೆ ಕೇಳದಂತೆ ಮಾಧ್ಯಮದವರಿಗೆ ವಿನಂತಿ ಕೂಡ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನ ಅಧಿಕಾರಕ್ಕೆ ತರಬೇಕಿದೆ, ಅದರ ಜೊತೆಗೆ ಮಹಿಳೆಯರ ಪರವಾದ ಸರ್ಕಾರವನ್ನ ನಾವು ರೂಪಿಸಬೇಕಿದೆ, ನಾನು ತುಂಬಾ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಕುಮಾರಸ್ವಾಮಿ ಅಣ್ಣನ ಬಗ್ಗೆ ತುಂಬಾ ಗೌರವ ಇದೆ ಅವರು ಯಾವ ಮೂಲದಿಂದ ಹೇಳಿದ್ದಾರೆ ಗೊತ್ತಿಲ್ಲ, ಅದಕ್ಕೆ ನಾನು ಪ್ರತಿಕ್ರಿಯೇ ನೀಡೋದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಒಲಿದು ಬಂದ ಪದ್ಮ ಪ್ರಶಸ್ತಿ: ಪ್ರಾಚೀನ ದ್ರಾವಿಡ ಪಂಗಡ…ಇರುಲಾ ಹಾವಾಡಿಗರು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ
ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ,ಸಾವಿರಾರು ಸೀರೆಗಳು ವಶ
ಸಕಲ ಸರಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಮಹಾಸ್ವಾಮಿಗಳ ಅಂತ್ಯಕ್ರಿಯೆ: ಸಿಎಂ
ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ
MUST WATCH
ಹೊಸ ಸೇರ್ಪಡೆ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು