Karachiಯಲ್ಲಿ ಲಷ್ಕರ್ ಉಗ್ರ, CRPF ಯೋಧರ ದಾಳಿಯ ಮಾಸ್ಟರ್ ಮೈಂಡ್ ಅದ್ನಾನ್ ಹತ್ಯೆ
Team Udayavani, Dec 6, 2023, 4:28 PM IST
ಇಸ್ಲಾಮಾಬಾದ್: ಲಷ್ಕರ್ ಇ ತೊಯ್ಬಾದ ಭಯೋತ್ಪಾದಕ ಹನ್ ಜ್ಲಾ ಅದ್ನಾನ್ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Ranbir Kapoor; ಬಾಕ್ಸ್ ಆಫೀಸ್ ನಲ್ಲಿ 500 ಕೋಟಿ ಕ್ಲಬ್ ನತ್ತ ಮುನ್ನುಗ್ಗುತ್ತಿರುವ ಅನಿಮಲ್
ಅದ್ನಾನ್ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ನ ನಿಕಟವರ್ತಿಯಾಗಿದ್ದ ಎಂದು ವರದಿ ವಿವರಿಸಿದೆ. ಅದ್ನಾನ್ ಅಹ್ಮದ್ ಅಲಿಯಾಸ್ ಅಜ್ಲಾ ಅದ್ನಾನ್ ಅಲಿಯಾಸ್ ಅದ್ನಾನ್ ಭಾಯಿ ಅಲಿಯಾಸ್ ಘಾಝಿ ಅದ್ನಾನ್ ಎಂಬಾತನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ಪ್ರಕಾರ, ಹನ್ ಜ್ಲಾ ಅದ್ನಾನ್ ಗೆ ಮನೆಯ ಹೊರಭಾಗದಲ್ಲಿ ಗುಂಡು ಹೊಡೆದಿದ್ದು, ದೇಹದಲ್ಲಿ ಆರು ಗುಂಡುಗಳು ಪತ್ತೆಯಾಗಿತ್ತು. ಕೂಡಲೇ ಉಗ್ರ ಅದ್ನಾನ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ತೀವ್ರ ರಕ್ತಸ್ರಾವ ಮತ್ತು ಗುಂಡಿನ ಏಟಿನಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಉಗ್ರ ಹನ್ ಜ್ಲಾ ಪಾಂಪೋರ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಸಿಆರ್ ಪಿಎಫ್ ಬೆಂಗಾವಲು ಪಡೆ ವಾಹನವನ್ನು ಗುರಿಯಾಗಿರಿಸಿಕೊಂಡು ನಡೆಸಿದ ದಾಳಿಯಲ್ಲಿ ಎಂಟು ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ