ಉಡುಪಿ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಉಪನ್ಯಾಸಕಿ ಸಾವು
Team Udayavani, Feb 8, 2023, 6:05 AM IST
ಉಡುಪಿ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಉಪ ನ್ಯಾಸಕಿಯೊಬ್ಬರು ಸಾವನ್ನಪ್ಪಿದ್ದಾರೆ.
ಪಡುತೋನ್ಸೆಯ ನಿವಾಸಿ ಸುಶೀಲಾ (39) ಅವರು ಕಾಪುವಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು ಫೆ.3ರಂದು ಪತಿಯ ಬೈಕ್‌ನಲ್ಲಿ ಹೋಗುವಾಗ ಸಂತೆಕಟ್ಟೆ ಬಳಿ ತಲೆ ಸುತ್ತು ಬರುತ್ತಿರುವುದಾಗಿ ತಿಳಿಸಿದ್ದರು. ಬೈಕ್‌ನಿಂದ ಇಳಿದ ವೇಳೆ ಕೆಳಗ್ಗೆ ಬಿದ್ದ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಮತ್ತು ಅಲ್ಲಿಂದ ಯೇನಪೊಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯಲ್ಲಿರುವಾಗ ಫೆ.6ರಂದು ಸಾವನ್ನಪ್ಪಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.