ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Team Udayavani, Feb 8, 2023, 9:29 PM IST
ಯಲ್ಲಾಪುರ: ತಾಲೂಕಿನ ಆನಗೋಡದಿಂದ ಸಾವಗದ್ದೆಗೆ ಹೋಗುವ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ಅಸಹಜವಾಗಿ ಹೆಣ್ಣು ಚಿರತೆಯೊಂದು ಬುಧವಾರ ಮೃತ ಪಟ್ಟಿರುವುದು ಗಮನಕ್ಕೆ ಬಂದಿದೆ.
ಚಿರತೆ ಸತ್ತಿರುವ ಸ್ಥಳಕ್ಕೆ ಉಪರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಏಸಿಎಫ್ ಆನಂದ, ಆರ್.ಎಫ್.ಓ ಎಲ್.ಎ.ಮಠ್ ಭೆಟಿ ನೀಡಿ ಪರಿಶೀಲಿಸಿ ನಂತರ ಪಶು ವೈದ್ಯಾಧಿಕಾರಿ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಈ ಹಿಂದೆಯೂ ಈ ಭಾಗದಲ್ಲಿ ಇದೇ ರೀತಿಯಲ್ಲಿ ಚಿರತೆಯೊಂದು ಅಸಹಜವಾಗಿ ಪ್ರಕರಣವೊಂದು ದಾಖಲಾಗಿತ್ತು ಎನ್ನುವುದು ಉಲ್ಲೇಖನೀಯ. ಈ ರೀತಿ ಅಸಹಜ ಸಾವು ಈ ಪ್ರದೇಶದಲ್ಲಿ ನಡೆಯುತ್ತಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇತ್ತೀಚಿನ ದಿನದಲ್ಲಿ ಈ ಭಾಗದಲ್ಲಿ ಚಿರತೆಯ ಉಪಟಳ ಮಿತಿ ಮೀರಿತ್ತೆಂಬ ಮಾತು ಕೇಳಿ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್
ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…
ಕೋವಿಡ್ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ