Madikeri: 32 ಆನೆಗಳ ಕಾಡಿಗಟ್ಟಿದ ಅರಣ್ಯ ಸಿಬ್ಬಂದಿ
ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳ ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
Team Udayavani, Aug 11, 2024, 1:05 AM IST
ಮಡಿಕೇರಿ: ತಿತಿಮತಿ ಅರಣ್ಯ ವಲಯದ ಚೆನ್ನಂಗಿ ವ್ಯಾಪ್ತಿಯ ಬಾಡಗಬಾಣಂಗಾಲ, ಹುಂಡಿ, ಮಠ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ 32 ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಸಫಲರಾದರು.
ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳನ್ನು ಓಡಿಸಿದರು. ಸುಮಾರು 8 ಕೀಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ 32 ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾದರು.
ಈ ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದವು. ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಮತ್ತು ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ.ಟಿ, ದೇವರಾಜ್ ಡಿ., ಅರಣ್ಯ ಪಾಲಕ ರಾಜೇಶ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಚಿನ್, ಶಂಕರ್, ಮುತ್ತ, ಸುಂದರ, ಭರತ, ಪ್ರದೀಪ್, ರಂಜಿತ್, ಧನು, ದಿನು, ರೋಶನ್, ಪೊನ್ನಣ್ಣ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು
BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?
Kundapura: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ವಂಚನೆ
Bajpe: ಪೊರ್ಕೋಡಿ ದ್ವಾರದ ಬಳಿ ಹೈಮಾಸ್ಟ್ ದೀಪದ ಕಂಬಕ್ಕೆ ಟಿಪ್ಪರ್ ಢಿಕ್ಕಿ
Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.