ಆರೋಗ್ಯ ವಾಣಿ- ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು: ಕಾರಣಗಳು, ತಡೆ ಮತ್ತು ಚಿಕಿತ್ಸೆ


Team Udayavani, Feb 12, 2023, 10:34 AM IST

maxilo

ಜಾಗತಿಕವಾಗಿ ಉಂಟಾಗುವ ಒಟ್ಟು ಗಾಯಗಳಲ್ಲಿ ಮ್ಯಾಕ್ಸಿಲೊಫೇಶಿಯಲ್‌ ಮೂಳೆ ಮುರಿತಗಳು ಮತ್ತು ಗಾಯಗಳು ಶೇ. 93.3ರಷ್ಟು ಕಂಡುಬರುತ್ತವೆ. ಈ ಮ್ಯಾಕ್ಸಿಲೊಫೇಶಿಯಲ್‌ ಗಾಯಾಳುಗಳಲ್ಲಿ 20ರಿಂದ 40ರ ನಡುವಿನ ವಯೋಮಾನದವರೇ ಹೆಚ್ಚು ಪ್ರಮಾಣದಲ್ಲಿದ್ದು, ಪುರುಷರು ಮತ್ತು ಮಹಿಳೆಯರ ನಡುವಣ ಗಾಯಾಳು ಅನುಪಾತ 3:1ರಷ್ಟು ಇರುತ್ತದೆ.

ಮ್ಯಾಕ್ಸಿಲೊಫೇಶಿಯಲ್‌ ಗಾಯ ಮತ್ತು ಮೂಳೆ ಮುರಿತಗಳ ರೋಗಶಾಸ್ತ್ರವನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ರಸ್ತೆ ಸಾರಿಗೆ ಅಪಘಾತಗಳೇ ಪ್ರಧಾನ ಕಾರಣವಾಗಿರುವುದು ಕಂಡುಬರುತ್ತದೆ. ಜಾಗತಿಕವಾಗಿ ರಸ್ತೆ ಸಾರಿಗೆ ಅಪಘಾತಗಳು ಮರಣಕ್ಕೆ ಪ್ರಧಾನ ಕಾರಣವೂ ಆಗಿದೆ. ರಸ್ತೆ ಸಾರಿಗೆ ಅಪಘಾತಗಳ ಬಳಿಕ ಹಿಂಸೆ, ಬೀಳುವಿಕೆ ಮತ್ತು ಕ್ರೀಡಾ ಗಾಯಗಳು ಮ್ಯಾಕ್ಸಿಲೊಫೇಶಿಯಲ್‌ ಗಾಯ ಮತ್ತು ಮೂಳೆಮುರಿತಗಳಿಗೆ ಇನ್ನಿತರ ಪ್ರಧಾನ ಕಾರಣಗಳಾಗಿರುತ್ತವೆ.

ನಮ್ಮ ದೇಶಕ್ಕೆ ಸಂಬಂಧಿಸಿ ಹೇಳುವುದಾದರೆ, 2021ರಲ್ಲಿ 4,12,432 ರಸ್ತೆ ಸಾರಿಗೆ ಅಪಘಾತ ಪ್ರಕರಣಗಳು ಸಂಭವಿಸಿದ್ದು, ಇವುಗಳಲ್ಲಿ 1,53,972 ಮಂದಿ ಸಾವನ್ನಪ್ಪಿದ್ದರೆ 3,84,448 ಮಂದಿ ಗಾಯಗೊಂಡಿದ್ದಾರೆ. ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2023ರ ಜನವರಿ 11ರಿಂದ 17ರ ವರೆಗೆ ರಸ್ತೆ ಸಾರಿಗೆ ಸುರಕ್ಷಾ ಸಪ್ತಾಹವನ್ನು ʻಸ್ವತ್ಛತಾ ಪಖ್ವಾಡʼ ಎಂಬ ಧ್ಯೇಯದಡಿ ಆಚರಿಸಿತ್ತು. ಸಾರ್ವಜನಿಕರಲ್ಲಿ ರಸ್ತೆಗಳು ಸುರಕ್ಷಿತವಾಗಿರುವುದರ ಅಗತ್ಯದ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸುವುದು ಈ ಆಚರಣೆಯ ಉದ್ದೇಶ. ಈ ದೇಶದ ಜವಾಬ್ದಾರಿಯುತ ನಾಗರಿಕರಾಗಿ ರಸ್ತೆ ಸುರಕ್ಷೆಯ ಬಗ್ಗೆ ಅರಿವನ್ನು ಹೊಂದಿರುವುದು ಮತ್ತು ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಉಂಟಾದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಾವು ತಿಳಿವಳಿಕೆ ಹೊಂದಿರಬೇಕಾಗಿದೆ.

ತಡೆ

„ ಸ್ವಂತ ಮತ್ತು ಸುತ್ತಮುತ್ತಲಿನ ಬಗ್ಗೆ ಅರಿವು ಹೊಂದಿರಿ ರಸ್ತೆಗುಂಡಿಗಳು, ಕೆಟ್ಟ ರಸ್ತೆಗಳು ಮತ್ತು ದುರ್ಗಮ ಪ್ರದೇಶದ ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಂದರ್ಭದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು. ವಾಹನ ಚಲಾಯಿಸುವ ಸಂದರ್ಭದಲ್ಲಿ ನಾವು ಜಾಗರೂಕರಾಗಿದ್ದು, ಮನಸ್ಸನ್ನು ಅದರಲ್ಲಿಯೇ ನೆಟ್ಟಿರಬೇಕು.
„ ಸುರಕ್ಷಿತ ವಾಹನ ಚಲಾವಣೆ
ವೇಗ: ವಾಹನ ಚಲಾಯಿಸುವ ವೇಗ ಹೆಚ್ಚಿದಷ್ಟು ಅಪಘಾತ ಪ್ರಮಾಣವೂ ಹೆಚ್ಚು, ಅವಘಡದ ತೀವ್ರತೆಯೂ ಹೆಚ್ಚು. ಶಿಫಾರಸು ಮಾಡಲಾದ ವೇಗ ಮಿತಿಯಲ್ಲಿಯೇ ವಾಹನವನ್ನು ಚಲಾಯಿಸಬೇಕು.
ಮದ್ಯಪಾನ ಮತ್ತು ವಾಹನ ಚಲಾವಣೆ: ರಸ್ತೆ ಅಪಘಾತಗಳಿಗೆ ಇನ್ನೊಂದು ಪ್ರಧಾನ ಕಾರಣ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು. ಮನಸ್ಸನ್ನು ಪ್ರಚೋದಿಸುವ ದ್ರವ್ಯಗಳು ಮತ್ತು ಮದ್ಯವನ್ನು ಸೇವಿಸಿ ವಾಹನ ಚಲಾಯಿಸುವುದು ಸುರಕ್ಷಿತ ವಾಹನ ಚಾಲನೆಯ ದೃಷ್ಟಿಯಿಂದ ನಿಷೇಧಿತವಾಗಿದೆ.
ದ್ವಿಚಕ್ರ ವಾಹನ ಹೆಲ್ಮೆಟ್‌, ಮಕ್ಕಳ ರಕ್ಷಣಾತ್ಮಕ ಸಲಕರಣೆ ಮತ್ತು ಸೀಟ್‌ ಬೆಲ್ಟ್ ಬಳಕೆ: ದ್ವಿಚಕ್ರ ವಾಹನ ಚಲಾಯಿಸುವ ಸಂದರ್ಭದಲ್ಲಿ ಹೆಲ್ಮೆಟ್‌ ಬಳಕೆ, ಮಕ್ಕಳನ್ನು ರಕ್ಷಿಸುವ ಸಲಕರಣೆಗಳ ಉಪಯೋಗ ಮತ್ತು ಸೀಟ್‌ ಬೆಲ್ಟ್‌ಗಳ ಉಪಯೋಗ ಮಾಡಲೇಬೇಕು.
ಮನಸ್ಸನ್ನು ವಿಚಲಿತಗೊಳಿಸುವ ಸಂಗತಿಗಳು ಮತ್ತು ವಾಹನ ಚಾಲನೆ: ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಬಳಕೆ, ಸಂದೇಶ ರವಾನೆ ಇತ್ಯಾದಿಗಳನ್ನು ಮಾಡಬಾರದು.
ರಸ್ತೆ ನಿಯಮಗಳ ಪಾಲನೆ: ಫ‌ುಟ್‌ಪಾತ್‌ಗಳು, ಸೈಕಲ್‌ ಸವಾರಿ ದಾರಿಗಳು, ಪಾದಚಾರಿ ರಸ್ತೆ ದಾಟುವ ಸ್ಥಳಗಳು, ರಸ್ತೆ ಸಾರಿಗೆ ಸಿಗ್ನಲ್‌ಗ‌ಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಈ ಕ್ರಮಗಳನ್ನು ಅನುಸರಿಸುವುದರಿಂದ ರಸ್ತೆ ಅಪಘಾತ ಅಪಾಯ ಮತ್ತು ಗಾಯಗಳನ್ನು ಕಡಿಮೆ ಮಾಡಲು ಸಾಧ್ಯ.

ಅಪಘಾತ ಸಂಭವಿಸಿದರೆ ಯಾರನ್ನು ಸಂಪರ್ಕಿಸಬೇಕು?

ಎಷ್ಟೇ ಸುರಕ್ಷಾ ಕ್ರಮಗಳನ್ನು ಅನುಸರಿಸಿದರೂ ಕೆಲವೊಮ್ಮೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿಯೇ ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ನಾವು ತಿಳಿದುಕೊಂಡಿರುವುದು ಅಗತ್ಯ. ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ರವಾನಿಸುವುದಕ್ಕಾಗಿ ಹತ್ತಿರದ ಆಸ್ಪತ್ರೆಗಳ ತುರ್ತು ಸಂಪರ್ಕ ಸಂಖ್ಯೆ ನಮಗೆ ತಿಳಿದಿರುವುದು ಅಗತ್ಯ. ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದು ತಾಸು ಅವಧಿಯನ್ನು “ಚಿನ್ನದಂತಹ ಸಮಯ’ ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾದರೆ ಪ್ರಾಣ ಮತ್ತು ಅಂಗವೈಕಲ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ. ಮುಖದ ಎಲುಬು, ಹಲ್ಲುಗಳು ಮತ್ತು ಮೃದು ಅಂಗಾಂಶಗಳಿಗೆ ಗಾಯ ಉಂಟಾದ ಸಂದರ್ಭದಲ್ಲಿ ವೃತ್ತಿಪರ ಮ್ಯಾಕ್ಸಿಲೊಫೇಶಿಯಲ್‌ ಸರ್ಜನ್‌ ಅವರ ಸಹಾಯವನ್ನು ಪಡೆಯಬೇಕು. ಜಗಿಯುವಿಕೆ ಸರಿಯಾಗಿಲ್ಲದಿರುವುದು, ಜಗಿಯುವ ಸಂದರ್ಭದಲ್ಲಿ ನೋವು ಅಥವಾ ಜಗಿಯಲು ಕಷ್ಟ, ಈ ಹಿಂದೆ ಇಲ್ಲದಿದ್ದ ಮುಖದ ಅಸಹಜತೆ, ದೃಷ್ಟಿ ವೈಕಲ್ಯ, ಮುಖ ಅಥವಾ ಬಾಯಿಯ ಯಾವುದೇ ಭಾಗದಿಂದ ರಕ್ತಸ್ರಾವ ಆಗುತ್ತಿದ್ದಲ್ಲಿ ತತ್‌ಕ್ಷಣ ಮ್ಯಾಕ್ಸಿಲೊಫೇಶಿಯಲ್‌ ಸರ್ಜನ್‌ ಗಮನಕ್ಕೆ ತರಬೇಕು.

ಡಾ| ಶ್ರೀಯಾ ರಾಯ್‌
ಅಸಿಸ್ಟೆಂಟ್‌ ಪ್ರೊಫೆಸರ್‌, ಓರಲ್‌ ಮತ್ತು
ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ,
ಎಂಸಿಒಡಿಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.