
ವಿಧಾನ-ಕದನ 2023: ಪಕ್ಷಗಳಿಂದ ಪ್ರಚಾರದ ಬಿರುಸಿಗೆ ವಾರ್‌ರೂಂ ಚುರುಕು
Team Udayavani, Apr 1, 2023, 8:24 AM IST

ಮಂಗಳೂರು: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಮತದಾನಕ್ಕೆ ಇನ್ನೇನು 39 ದಿನಗಳು ಬಾಕಿ ಉಳಿದಿರುವಂತೆಯೇ ಪಕ್ಷಗಳಿಂದ ಚುನಾ ವಣ ಪ್ರಚಾರದ ಬಿರುಸಿಗಾಗಿ ಪ್ರತ್ಯೇಕ ವಾರ್ ರೂಂಗಳ ಸಿದ್ಧತೆ ಚುರುಕು ಪಡೆದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಕ್ರಿಯೆಗಳಿಗಾಗಿಯೇ ಪ್ರತ್ಯೇಕ ಕಾರ್ಯಾಲಯಗಳನ್ನು ಸಿದ್ಧಗೊಳಿ ಸಿದ್ದು, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆದ ಕ್ಷಣದಿಂದ ಯುದೊœà ಪಾದಿಯಲ್ಲಿ ಪ್ರಚಾರ ಕಾರ್ಯ ನಡೆಸಲು ಕಾರ್ಯತಂತ್ರಗಳನ್ನು ರೂಪಿಸುತ್ತಿವೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿಯು, ಪಕ್ಷದ ಅಧಿಕೃತ ಕಚೇರಿಯಲ್ಲದೆ, ಮಾಧ್ಯಮ ಗೋಷ್ಠಿ ಹಾಗೂ ಸಾಮಾಜಿಕ ಜಾಲ ತಾಣದ ನಿರ್ವಹಣೆಗೆ ನೂತನ ಕಾರ್ಯಾಲಯವನ್ನು ತೆರೆದಿದೆ. ಚುನಾ ವಣ ಪ್ರಕ್ರಿಯೆಗಳಿಗಾಗಿ ಈ ಕಾರ್ಯಾಲಯ ಕಾರ್ಯ ನಿರ್ವಹಿಸಲಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಯು ತನ್ನ ಚುನಾವಣಾ ಕಾರ್ಯಾಲಯವಾಗಿ ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಕಾಲೇಜು ಬಳಿಯ ಹಳೆ ಮನೆಯೊಂದನ್ನು ಬಹುತೇಕವಾಗಿ ಬಳಸಿತ್ತು. ಇದಲ್ಲದೆ, ಅಟಲ್ ಸೇವಾ ಕೇಂದ್ರವೂ ಬಳಕೆಯಾಗುತ್ತಿತ್ತು. ಆದರೆ ಈ ಬಾರಿ ಹೊಸ ಕಾರ್ಯಾಲಯ ಆರಂಭಿಸಿರುವುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಕೂಡಾ ಜಿಲ್ಲಾ ಕಚೇರಿಯಲ್ಲೇ ಚುನಾವಣಾ ಪ್ರಚಾರಕ್ಕಾಗಿ ಪ್ರತ್ಯೇಕ ಕಾರ್ಯಾಲಯ ಆರಂಭಿಸಲು ಸಿದ್ದತೆ ನಡೆ ಸಿದೆ. ಮಾಧ್ಯಮ ನಿರ್ವಹಣೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ತಂತ್ರಗಾರಿಕೆಯ ನಿಟ್ಟಿನಲ್ಲಿ ಈ ಕಾರ್ಯಾಲಯಗಳು ಒತ್ತು ನೀಡಲಿವೆ. ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತದಾರರ ಮನೆ ಭೇಟಿಗೆ ತೆರಳಿ ಮತ ಯಾಚನೆಯ ಜತೆಗೆ ಜಿಲ್ಲೆಗೆ ಆಗಮಿಸುವ ತಾರಾ ಪ್ರಚಾರಕರು, ಹಿರಿಯ ನಾಯಕರ ಪತ್ರಿಕಾಗೋಷ್ಠಿ ಹಾಗೂ ಪಕ್ಷಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪಲು ಕಾರ್ಯಾಲಯಗಳು ಶ್ರಮಿಸಲಿವೆ.
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆ ಪಿಯ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ. ದ.ಕ. ಹಾಗೂ ಉಡುಪಿಯಿಂದ ಕಾಂಗ್ರೆಸ್‌ನಿಂದ ಬಾಕಿ ಇರುವ 5 ಕ್ಷೇತ್ರಗಳ ಅಭ್ಯರ್ಥಿಗಳ ಘೋ ಷಣೆ ಇನ್ನೇನಿದ್ದರೂ ಎಪ್ರಿಲ್ 7ರ ಬಳಿಕವೇ ಘೋಷಣೆಯಾಗುವ ಸಾಧ್ಯತೆ ಹೆಚ್ಚು. ಬಳಿಕ ಈ ವಾರ್ ರೂಂಗಳಲ್ಲೂ ಪ್ರಚಾರದ ಭರಾಟೆ ತಾರಕಕ್ಕೇರಲಿದೆ.
ಪ್ರತ್ಯೇಕ ವಿಭಾಗ ಶೀಘ್ರ
ಚುನಾವಣಾ ಕಾರ್ಯಗಳಿಗಾಗಿ ಪಕ್ಷದ ಕಚೇರಿ ಯಲ್ಲಿಯೇ ಪ್ರತ್ಯೇಕ ವಿಭಾಗವು ಮುಂದಿನ ವಾರದಿಂದ ಆರಂಭ ಗೊಳ್ಳಲಿದೆ. ಪಕ್ಷದ ಸಾಮಾಜಿಕ ಜಾಲ ತಾಣವನ್ನು ಈಗಾಗಲೇ ನಿರ್ವಹಿಸುತ್ತಿದ್ದು, ಪ್ರತ್ಯೇಕ ಕಾರ್ಯಾಲಯದ ಮೂಲಕ ಮಾಧ್ಯಮಗೋಷ್ಠಿ, ಸಾಮಾಜಿಕ ಜಾಲತಾಣದ ಆಗು ಹೋಗುಗಳನ್ನು ನಿರ್ವಹಿಸಲಾಗುವುದು. ಪ್ರಚಾರದ ಜತೆಗೆ ಕೆಪಿಸಿಸಿ ಹಾಗೂ ಎಐಸಿಸಿ ನಾಯಕರ ಜತೆ ಸಮನ್ವಯದೊಂದಿಗೆ ಪ್ರಚಾರ ಕಾರ್ಯ ನಡೆಯಲಿದೆ.
-ಹರೀಶ್ ಕುಮಾರ್, ಅಧ್ಯಕ್ಷರು, ಕಾಂಗ್ರೆಸ್, ದ.ಕ.
ಪ್ರತಿಸ್ಪರ್ಧಿಗಳ ಹೇಳಿಕೆಗಳಿಗೆ ಕೂಡಲೇ ಪ್ರತ್ಯುತ್ತರ
ಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮ ಗೋಷ್ಠಿ ಹಾಗೂ ಸಾಮಾಜಿಕ ಜಾಲ ತಾಣಗಳ ನಿರ್ವಹಣೆ ಗಾಗಿ ಪಕ್ಷದಿಂದ ನೂತನ ಕಾರ್ಯಾ ಲಯ ಬಳ್ಳಾಲ್‌ಬಾಗ್‌ನ ಕಟ್ಟಡದಲ್ಲಿ ಆರಂಭಗೊಂಡಿದೆ. ಪಕ್ಷದ ಸಾಧನೆಗಳನ್ನು ಮತದಾರರಿಗೆ ತಲುಪಿಸುವುದು ಹಾಗೂ ಪ್ರತಿಸ್ಪರ್ಧಿಗಳ ವಿರೋಧಾಭಾಸದ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳ ಪ್ರತ್ಯುತ್ತರ ನೀಡಲು ಈ ಕಾರ್ಯಾಲಯ
ಕಾರ್ಯ ನಿರ್ವಹಿಸಲಿದೆ.
-ಸುದರ್ಶನ ಮೂಡುಬಿದಿರೆ, ಅಧ್ಯಕ್ಷರು, ಬಿಜೆಪಿ, ದ.ಕ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?