MITಯ 35 ವಿದ್ಯಾರ್ಥಿಗಳಿಗೆ ವಾರ್ಷಿಕ 44ಲಕ್ಷ ರೂ. ಪ್ಯಾಕೇಜ್ ನ ಉದ್ಯೋಗ ನೀಡಿದ ಮೈಕ್ರೋಸಾಫ್ಟ್
ವಿದ್ಯಾರ್ಥಿಗಳಿಗೆ ನೀಡಲಾದ ಅತೀ ದೊಡ್ಡ ಮೊತ್ತದ ಸಂಬಳದ ಪ್ಯಾಕೇಜ್ ಇದಾಗಿದೆ
Team Udayavani, Sep 23, 2021, 11:42 AM IST
ಉಡುಪಿ: ಮಣಿಪಾಲ ಎಂಐಟಿಯ 35 ವಿದ್ಯಾರ್ಥಿಗಳು ಮೈಕ್ರೋಸಾಫ್ಟ್ನಿಂದ ವಾರ್ಷಿಕ 44 ಲಕ್ಷ ರೂ.ಗೆ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಎಂಐಟಿಯಲ್ಲಿ ಮೈಕ್ರೋಸಾಫ್ಟ್ ನಿಂದ ಆಯ್ಕೆಯಾದವರ ಗರಿಷ್ಠ ಸಂಖ್ಯೆ ಇದಾಗಿದೆ.
ಇದನ್ನೂ ಓದಿ:ಸಾರ್ವಕಾಲಿಕ ಗರಿಷ್ಠ ದಾಖಲೆಯತ್ತ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಜಿಗಿತ, ನಿಫ್ಟಿ ಏರಿಕೆ
ಮೈಕ್ರೋಸಾಫ್ಟ್ ಅಲ್ಲದೆ ಅಡೋಬ್, ಅಮೆಜಾನ್, ಬಜಾಜ್ ಫಿನ್ಸರ್ವ್, ಚಾರ್ಜ್ಬೀ, ಸಿಸ್ಕೊ ಸಿಸ್ಟಮ್ಸ್, ಸಿಟ್ರಿಕ್ಸ್ ಆರ್ ಆ್ಯಂಡ್ ಡಿ, ಕ್ಲೌಡೆರಾ, ವೆಸ್ಟರ್ನ್ ಡಿಜಿಟಲ್ನಂತಹ ಪ್ರತಿಷ್ಠಿತ ಕಂಪೆನಿಗಳು ವರ್ಚುವಲ್ ಮೂಲಕ ಕ್ಯಾಂಪಸ್ ಸಂದರ್ಶನ ನಡೆಸುತ್ತಿವೆ. 2021-22ನೇ ಸಾಲಿನ ಪ್ರಥಮ ಹಂತದ ಪ್ಲೇಸ್ ಮೆಂಟ್ ಇದಾಗಿದ್ದು ಪ್ಲೇಸ್ ಮೆಂಟ್ ಪ್ರಕ್ರಿಯೆ ನಡೆಯುತ್ತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾದ ಅತೀ ದೊಡ್ಡ ಮೊತ್ತದ ಸಂಬಳದ ಪ್ಯಾಕೇಜ್ ಇದಾಗಿರುವುದಾಗಿ ಎಂಐಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
292 ವಿದ್ಯಾರ್ಥಿಗಳು ಪ್ಲೇಸ್ ಮೆಂಟ್ ಮತ್ತು ಇಂಟರ್ನ್ ಶಿಪ್ ಗೆ ಆಯ್ಕೆಯಾಗಿದ್ದು ಸರಾಸರಿ ವಾರ್ಷಿಕ ವೇತನ 18.2 ಲಕ್ಷ ರೂಪಾಯಿ ಆಗಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಸದಾ ಉತ್ತೇಜನ ನೀಡುತ್ತಿದ್ದೇವೆ ಎಂದು ನಿರ್ದೇಶಕ ಕ್ವಾ. ಡಾ| ಅನಿಲ್ ರಾಣಾ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ