“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಉದ್ಘಾಟನೆ

Team Udayavani, Feb 27, 2021, 10:43 PM IST

“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು: ಲವಕುಶ ಜೋಡುಕರೆ ಕಂಬಳ ಉದ್ಘಾಟನೆ

ಕಾರ್ಕಳ: ತುಳುನಾಡಿನ ಕಂಬಳ ಕ್ರೀಡೆ ವಿಶ್ವಾದ್ಯಂತ ಪ್ರಸಿದ್ಧಿ ಗೊಂಡಿದೆ. ಈ ಕ್ರೀಡೆಯೂ ಕೆಲವು ಅಡೆತಡೆಯ ನಡುವೆಯೂ ನಿರಾತಂಕ ವಾಗಿ ನಡೆದು ಬಂದಿದೆ. ಕಂಬಳ ಕ್ರೀಡೆಗೆ ದೈವ-ದೇವರ ಸಂಬಂಧವಿದೆ ಎಂದು ಮಿಯ್ನಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್‌ ಭಟ್‌ ಹೇಳಿದರು,

ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಇದರ ಸಹಯೋಗದಲ್ಲಿ ಶನಿವಾರ ನಡೆದ 17ನೇ ವರ್ಷದ ಲವಕುಶ ಜೋಡುಕರೆ ಬಯಲು ಕಂಬಳದ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಬಳ ವಿಶ್ವಪರ್ಯಂತ ನಡೆಯುವಂತಾಗಲಿ ಕೃಷಿ ವ್ಯಾಪ್ತಿ ಕಡಿಮೆಯಾಗಿ ಜಾನುವಾರು ಸಾಕಣೆ ಕುಸಿತದ ಸ್ಥಿತಿಯಲ್ಲಿಯೂ ಕಂಬಳ ಕ್ರೀಡೆ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಕಂಬಳ ಕ್ರೀಡೆ ವಿಶ್ವ ಪರ್ಯಂತ ನಡೆಯುವಂತಾಗಲಿ ಎಂದು ಹಾರೈಸಿದರು.

ಶಾಸಕ ವಿ. ಸುನಿಲ್‌ಕುಮಾರ್‌ ಕಂಬಳ ಸ್ಪರ್ಧೆ ಉದ್ಘಾಟಿಸಿದರು. ಈ ಸಂದರ್ಭ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್‌ದಾಸ್‌ ಅಡ್ಯಂತಾಯ, ಜಿ.ಪಂ. ಸದಸ್ಯ ಉದಯ್‌ ಕೋಟ್ಯಾನ್‌, ಗ್ರಾ.ಪಂ. ಅಧ್ಯಕ್ಷ ಗಿರೀಶ್‌ ಅಮೀನ್‌, ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಎಂ. ಸದಾನಂದ ಶೆಟ್ಟಿ ಬೆಳುವಾಯಿ, ಪ್ರಮುಖರಾದ ಬೋರ್ಕಟ್ಟೆ ಪ್ರಭಾಕರ ಶೆಟ್ಟಿ, ಭಾಸ್ಕರ ಎಸ್‌. ಕೋಟ್ಯಾನ್‌, ಸುನಿಲ್‌ಕುಮಾರ್‌ ಬಜಗೋಳಿ, ಅಂತೋನಿ ಡಿ’ಸೋಜ ನಕ್ರೆ, ಉಮೇಶ್‌ ರಾವ್‌, ಪ್ರಕಾಶ್‌ ಬಲಿಪ, ಶುಭದಾ ರಾವ್‌, ಸುರೇಶ್‌ ಕೆ. ಪೂಜಾರಿ, ಸಂತೋಷ್‌ ಕುತೊìಟ್ಟು, ಪದ್ಮಪ್ರಸಾದ್‌, ಜೀವೆಂದರ್‌ ಹೆಗ್ಡೆ ಬೋರ್ಕಟ್ಟೆ, ಮಾಳ ದಿನೇಶ್‌ ಶೆಟ್ಟಿ, ಮಾಳ ಶೇಖರ್‌ ಶೆಟ್ಟಿ, ರಮೇಶ್‌ ರಾವ್‌, ಜೆರಾಲ್ಡ್‌ ಡಿ’ಸೋಜ, ಶಾಂತಿರಾಜ್‌, ಮಾಧವ ಕಾಮತ್‌, ಪಶುಸಂಗೋಪನ ಇಲಾಖೆಯ ಅಧಿಕಾರಿ ರಾಜಶೇಖರ್‌ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಂಘಟನ ಕಾರ್ಯದರ್ಶಿ ಕೆ. ಗುಣಪಾಲ ಕಾರ್ಯಕ್ರಮ ನಿರ್ವಹಿಸಿದರು.
ಮಿಯ್ನಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಹೂ ಪೂಜೆ ನಡೆಸಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಸ್ಪರ್ಧೆಗೆ ಚಾಲನೆ
ಉದ್ಘಾಟನೆ ಬಳಿಕ ಕೋಣಗಳನ್ನು ಗದ್ದೆಗೆ ಇಳಿಸುವ ಕಾರ್ಯ ನಡೆಯಿತು. ಆರಂಭದಲ್ಲಿ ನೇಗಿಲು ಕಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಕನೆ ಹಲಗೆ ಮತ್ತು ಅಡ್ಡ ಹಲಗೆ ಸ್ಪರ್ಧೆ ಗಳು ನಡೆದವು. ವಿವಿಧೆಡೆಗಳಿಂದ ಕಂಬಳ ಕ್ರೀಡೆಯ ಅಭಿಮಾನಿಗಳು ಆಗಮಿಸಿದ್ದರು.

ಕಂಬಳ ಊರಿನ ಉತ್ಸವ
ಮಿಯ್ನಾರು ಚರ್ಚ್‌ ಧರ್ಮಗುರು ಎ. ಫಾ. ಪಾವುಲ್‌ ರೇಗೋ ಮಾತನಾಡಿ, ಜಾನಪದ ಕ್ರೀಡೆ ಕಂಬಳ ಊರಿನ ಉತ್ಸವ. ರಾತ್ರಿ -ಹಗಲು ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಸೇರುವ ಈ ಕ್ರೀಡೆಯನ್ನು ಎಲ್ಲರೂ ಸವಿಯುತ್ತಾರೆ. ಕೋಣ ಸಾಕುವುದು ಕಾಯಕಲ್ಪ ಎಂದು ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

Mehbooba Mufti,

ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

thumb 2

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೌಹಾರ್ದದಿಂದ ಮಂದಿರ ಬಿಟ್ಟುಕೊಡಲಿ : ಪೇಜಾವರ ಶ್ರೀ

ಸೌಹಾರ್ದದಿಂದ ಮಂದಿರ ಬಿಟ್ಟುಕೊಡಲಿ : ಪೇಜಾವರ ಶ್ರೀ

ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ

ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ

ಕಲ್ಸಂಕ : ಆ್ಯಂಬುಲೆನ್ಸ್‌ನಲ್ಲಿ ಬೆಂಕಿ, ವಾಹನ ಸಂಚಾರ ಅಸ್ತವ್ಯಸ್ತ

ಕಲ್ಸಂಕ : ಆ್ಯಂಬುಲೆನ್ಸ್‌ನಲ್ಲಿ ಬೆಂಕಿ, ವಾಹನ ಸಂಚಾರ ಅಸ್ತವ್ಯಸ್ತ

ಕಟಪಾಡಿ : ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥ ನಾಪತ್ತೆ

ಕಟಪಾಡಿ : ದೇವಸ್ಥಾನಕ್ಕೆಂದು ಹೋದ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಪತ್ತೆ

ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ

ಕಾಲೇಜು ಆಕಾಂಕ್ಷಿಗಳ ಪ್ರಶ್ನೆಗಳಿಗೆ ಪರಿಣತರ ಉತ್ತರ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

Mehbooba Mufti,

ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

thumb 2

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.