
ತನ್ವೀರ್ ಸೇಠ್ ಗೆ ಇರಿತ ಪ್ರಕರಣ: 48 ಗಂಟೆ ಏನೂ ಹೇಳಲಾಗದು ಎಂದ ವೈದ್ಯರು
Team Udayavani, Nov 18, 2019, 10:12 AM IST

ಮೈಸೂರು: ತೀವ್ರ ಹಲ್ಲೆಗೊಳಗಾದ ಶಾಸಕ ತನ್ವೀರ್ ಸೇಠ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ವೀರ್ ಸೇಠ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕತ್ತಿನ ಭಾಗದಲ್ಲಿ ಇರಿತವಾದ ಕಾರಣ ಕತ್ತು ಮತ್ತು ಹೃದಯವನ್ನು ಸಂಪರ್ಕಿಸುವ ಎರಡು ನರಗಳು ತುಂಡಾಗಿವೆ ಎಂದು ವರದಿಯಾಗಿದೆ. ಸತತ ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ನರಗಳನ್ನು ಮರುಜೋಡಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಸಂಬಂಧಿಗಳ ಭೀಗರ ಔತಣಕೂಟದಲ್ಲಿ ಭಾಗಿಯಾಗಿ ನಂತರ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ತನ್ವೀರ್ ಸೇಠ್ ಮೇಲೆ ದಾಳಿ ನಡೆದಿದೆ. ಮೈಸೂರಿನ ನಗರದ ಬನ್ನಿ ಮಂಟಪದ ಆವರಣದಲ್ಲಿ ನಡೆಯುತಿದ್ದ ಕಾರ್ಯಕ್ರಮ ಇದಾಗಿತ್ತು.
ಆರೋಪಿ ಫರಾನ್ ನನ್ನು ಬಂಧಿಸಲಾಗಿದ್ದು, ಎನ್ ಆರ್ ಠಾಣೆ ಪೊಲೀಸರ ವಶದಲ್ಲಿದ್ದಾನೆ.
ಟಾಪ್ ನ್ಯೂಸ್
