Udayavni Special

ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಭರ್ಜರಿ ಬೇಡಿಕೆ


Team Udayavani, Nov 15, 2020, 7:15 AM IST

ಸ್ಮಾರ್ಟ್‌ ಫೋನ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಭರ್ಜರಿ ಬೇಡಿಕೆ

ಹೊಸದಿಲ್ಲಿ: ಕೊರೊನಾ ಲಾಕ್‌ಡೌನ್‌ ಅನಂತರದಲ್ಲಿ ನಿರೀಕ್ಷೆಗೂ ಮೀರಿ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ದೀಪಾವಳಿ ಸಡಗರದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಮಾರುಕಟ್ಟೆ ಜಿಗಿತುಕೊಂಡಿದೆ.
ಅದರಲ್ಲೂ ಟಿವಿ, ರೆಫ್ರಿಜರೇಟರ್ಸ್‌ ಮತ್ತು ವಾಷಿಂಗ್‌ ಮೆಷಿನ್ ಗಳ ಮಾರಾಟದಲ್ಲಿ ಶೇ.8ರಿಂದ 10ರಷ್ಟು ಪ್ರಗತಿಯಾಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ವಿಶೇಷವೆಂದರೆ, ಲ್ಯಾಪ್‌ಟಾಪ್‌ ಸೇರಿದಂತೆ ಕೆಲವೊಂದು ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದರೂ ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗಿಲ್ಲ. ಹೀಗಾಗಿ ಕೆಲವೆಡೆ ಮಾರಾಟ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಾಹಕರ ಸೆಳೆಯುವ ಸಲುವಾಗಿ ಕಂಪೆನಿಗಳು ಉತ್ತಮ ಇಎಂಐ ಸ್ಕೀಮ್‌, ಹಣಕಾಸು ಯೋಜನೆಗಳು, ಕ್ಯಾಶ್‌ಬ್ಯಾಕ್‌ನಂಥ ಆಫ‌ರ್‌ ನೀಡಿದ್ದವು. ಇದರಿಂದಾಗಿ ಗ್ರಾಹಕರ ಖರೀದಿ ವೆಚ್ಚವೂ ಹೆಚ್ಚಾಯಿತು. ಕಳೆದೊಂದು ವಾರದಲ್ಲಿ ಈ ವಸ್ತುಗಳ ಮಾರಾಟದಲ್ಲಿ ಗಣನೀಯ ಪ್ರಗತಿಯಾಗಿದೆ ಎಂದು ಕಂಪೆನಿಗಳು ಹೇಳಿಕೊಂಡಿವೆ.

ಇನ್ನು ಬಟ್ಟೆ ಮತ್ತು ಲೈಫ್ ಸ್ಟೈಲ್‌ಗೆ ಸಂಬಂಧಿಸಿದ ವಸ್ತುಗಳ ಮಾರಾಟವೂ ಜೋರಾಗಿದೆ. ಕಂಪೆನಿಗಳು ಹೇಳುವ ಪ್ರಕಾರ, ಈ ಉದ್ಯಮ ನಿರೀಕ್ಷೆಗೂ ಮೀರಿ ಬೆಳೆದಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.80ರಿಂದ ಶೇ.85ರಷ್ಟು ಹೆಚ್ಚು ಮಾರಾಟವಾಗಿದೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ ಎಲೆಕ್ಟ್ರಾನಿಕ್‌ ರಿಟೈಲರ್ಸ್‌ ಪ್ರಕಾರ, ಟಿವಿ, ರೆಫ್ರಿಜರೇಟರ್ಸ್‌, ಅಡುಗೆ ಮನೆ ಸಾಮಗ್ರಿಗಳು, ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಪೂರೈಕೆಯಲ್ಲಿ ಕೊಂಚ ಸಮಸ್ಯೆಯಾಗಿದೆ. ಆದರೂ ಈ ವಲಯದಲ್ಲಿ ಶೇ.15ರಿಂದ 20ರಷ್ಟು ಮಾರಾಟ ಹೆಚ್ಚಾಗಿದೆ ಎಂದಿದ್ದಾರೆ.

ಎಲ್‌ಜಿ ಇಂಡಿಯಾದ ಉಪಾಧ್ಯಕ್ಷ ವಿಜಯ್‌ ಬಾಬು ಹೇಳುವ ಪ್ರಕಾರ, ದೇಶದ ಸಣ್ಣಪುಟ್ಟ ನಗರಗಳಲ್ಲಿ ಎಲೆಕ್ಟ್ರಾನಿಕ್‌ ಮತ್ತು ಸ್ಮಾರ್ಟ್‌ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇಲ್ಲಿ ಶೇ.50ರಷ್ಟು ಬೆಳವಣಿಗೆಯಾಗಿದೆ. ಕೆಲವೆಡೆ ನೋ ಸ್ಟಾಕ್‌ ಬೋರ್ಡ್‌ಗಳು ಕಾಣಿಸುತ್ತಿವೆ ಎಂದಿದ್ದಾರೆ.

ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್‌
ಈಗ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿರುವುದರಿಂದ ಸ್ಮಾರ್ಟ್‌ ಫೋನ್‌ಗಳಿಗೆ ಹೆಚ್ಚು ಬೇಡಿಕೆ ಇದೆ.  ಮೊದಲು ಸ್ಮಾರ್ಟ್‌ ಫೋನ್‌ ಖರೀದಿದಾರರ ವಯಸ್ಸು 18 ವರ್ಷದಿಂದ ಆರಂಭವಾಗುತ್ತಿತ್ತು. ಆದರೆ ಈಗ 10 ವರ್ಷ ಮೇಲ್ಪಟ್ಟ ಮಕ್ಕಳ ಸಲುವಾಗಿ ಖರೀದಿಯಾಗುತ್ತಿದೆ ಸಂಗೀತಾ ಮೊಬೈಲ್ಸ್‌ನ ನಿರ್ದೇಶಕ ಚಂದು ರೆಡ್ಡಿ ಹೇಳಿದ್ದಾರೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಹುತೇಕ ಹೆಚ್ಚಿನ ಕಂಪೆನಿಗಳ ಮೊಬೈಲ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

WhatsApp-gets-Sticker-Search,-new-animated-sticker-pack,-wallpapers

ವಾಟ್ಸಾಪ್ ಅಪ್ ಡೇಟ್: ಬಂದಿದೆ ಹೊಸ 2 ಫೀಚರ್ ಗಳು; ಏನದು ?

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.