BEST BUS: ವೇಳೆ ಮೊಬೈಲ್ ನಲ್ಲಿ ಏರು ಧ್ವನಿ ಸಂಭಾಷಣೆಗೆ ನಿರ್ಬಂಧ, ಹೆಡ್ ಫೋನ್ ಕಡ್ಡಾಯ
ಹೆಡ್ ಫೋನ್ ಬಳಸದೇ ವಿಡಿಯೋ ವೀಕ್ಷಿಸುವುದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತದೆ.
Team Udayavani, Apr 27, 2023, 6:15 PM IST
ಮುಂಬೈ: ಬೃಹನ್ಮುಂಬಯಿ ಎಲೆಕ್ಟ್ರಿಕ್ ಮತ್ತು ಟ್ರಾನ್ಸ್ ಪೋರ್ಟ್ (BEST)ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್ ಫೋನ್ ಗಳಲ್ಲಿ ಜೋರಾಗಿ ಸಂಭಾಷಣೆ ನಡೆಸುವುದು ಹಾಗೂ ಹೆಡ್ ಫೋನ್ ಗಳಿಲ್ಲದೇ ಆಡಿಯೋ, ವಿಡಿಯೋ ಬಳಸುವುದನ್ನು ನಿಷೇಧಿಸಿದೆ.
ಇದನ್ನೂ ಓದಿ:ಚಾರ್ಧಾಮ್ ದೇವಾಲಯದ ಆವರಣದಲ್ಲಿ ಜಿಯೋ ಟ್ರೂ 5ಜಿ ಸೇವೆ ಶುಭಾರಂಭ
ಎ.24ರಂದು BEST ಹೊರಡಿಸಿರುವ ಪ್ರಕಟನೆಯಲ್ಲಿ, ಪ್ರಯಾಣಿಕರ ದೂರುಗಳನ್ನು ಆಧರಿಸಿ ಯಾವುದೇ ಕಿರಿಕಿರಿ ಇಲ್ಲದೇ ಪ್ರಯಾಣಿಸಲು ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಹೊಸ ನಿಯಮದಂತೆ ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳ ಬೆಸ್ಟ್ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಬಸ್ ನೊಳಗೆ ಮೊಬೈಲ್ ಬಳಸಿ ಆಡಿಯೋ ಅಥವಾ ವಿಡಿಯೋ ವೀಕ್ಷಿಸಲು ಹೆಡ್ ಫೋನ್ ಉಪಯೋಗಿಸುವುದು ಕಡ್ಡಾಯ ಎಂದು ತಿಳಿಸಿದೆ.
ಮೊಬೈಲ್ ನಲ್ಲಿ ಜೋರಾಗಿ ಮಾತನಾಡುವುದು, ಹೆಡ್ ಫೋನ್ ಬಳಸದೇ ವಿಡಿಯೋ ವೀಕ್ಷಿಸುವುದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಈ ಅನನುಕೂಲತೆ ತಪ್ಪಿಸಲು ಹೊಸ ನಿಯಮ ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪ್ರಯಾಣಿಕರ ವಿರುದ್ಧ ಬಾಂಬೆ ಪೊಲೀಸ್ ಕಾಯ್ದೆ ಕಲಂ 38/112ರ ಅಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಬೆಸ್ಟ್ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು