ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…


ಸುಧೀರ್, Jan 28, 2023, 6:15 PM IST

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ದೇಶದಲ್ಲಿ ಹಲವಾರು ಪುರಾಣ ಪ್ರಸಿದ್ಧ ಸ್ಥಳಗಳನ್ನು ಕಾಣಬಹುದಾಗಿದೆ ಒಂದೊಂದು ಸ್ಥಳಗಳು ಅಲ್ಲಿನ ಕಾರಣಿಕಗಳನ್ನು ಹೊಂದಿರುತ್ತವೆ ಜೊತೆಗೆ ಅಷ್ಟೇ ಪಾವಿತ್ರ್ಯತೆಯನ್ನು ಕೂಡಾ ಪಡೆದುಕೊಂಡಿರುತ್ತದೆ. ಕೆಲವೊಂದು ಪುಣ್ಯ ಕ್ಷೇತ್ರಗಳು ಅಲ್ಲಿನ ಪೌರಾಣಿಕ ಹಿನ್ನೆಲೆಯಿಂದಲೇ ಹೆಚ್ಚು ಮಹತ್ವವನ್ನು ಪಡೆದಿರುತ್ತದೆ ಅತಂತದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಒಂದು.

ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಕರಾವಳಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ.

ಇದೊಂದು ಉದ್ಭವ ಶಿವಲಿಂಗದ ನೆಲೆಯಾಗಿದೆ ಅಂದ ಹಾಗೆ ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶ ಸಿಗುವುದು ವರ್ಷದಲ್ಲಿ ಆರು ತಿಂಗಳು ಮಾತ್ರ ಉಳಿದ ಆರು ತಿಂಗಳು ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಋಷಿಮುನಿಗಳು ಈ ಗುಹೆಯೊಳಗೆ ತಪಸ್ಸನ್ನು ಮಾಡುತ್ತಿರುತ್ತಾರೆ ಎಂಬುದು ಪ್ರತೀತಿ.

ಈ ಗುಹೆಯನ್ನು ನೋಡುವಾಗ ದೈತ್ಯಾಕಾರದ ಮೊಸಳೆಯೊಂದು ಬಾಯ್ತೆರೆದು ನಿಂತ ರೀತಿಯಲ್ಲಿ ಗೋಚರಿಸುತ್ತದೆ, ಅಲ್ಲದೆ ಈ ಗುಹೆ ಕಾಡುಪ್ರಾಣಿಗಳ ಆವಾಸಸ್ಥಾನವಾಗಿದೆ ಎಂದು ಹೇಳಲಾಗುತ್ತಿದೆ ಅದಕ್ಕೆ ಪ್ರತೀತಿ ಎಂಬಂತೆ ಹಾವು, ಕಾಡುಹಂದಿ, ಬಾವಲಿಗಳು ಇಲ್ಲಿ ಕಾಣಸಿಗುತ್ತವೆ.

ಈ ನೆಲ್ಲಿತೀರ್ಥದಲ್ಲಿರುವ ಶಿವ ಲಿಂಗಕ್ಕೆ ಸೋಮನಾಥೇಶ್ವರ ಎಂಬ ಹೆಸರಿದೆ ಈ ಶಿವಲಿಂಗವನ್ನು ತಲುಪಬೇಕಾದರೆ ಗುಹೆಯೊಳಗೆ ಸುಮಾರು 200 ಮೀಟರ್ ದೂರ ಸಾಗಬೇಕು ಕೆಲವೊಂದು ಕಡೆ ತೆವಳಿಕೊಂಡು ಸಾಗಬೇಕಾಗುತ್ತದೆ. ಹೀಗೆ ಸಾಗಿದಾಗ ಸೋಮನಾಥೇಶ್ವರನ ಉದ್ಭವ ಲಿಂಗದ ದರ್ಶನವಾಗುತ್ತದೆ.

ಕೆರೆಯಲ್ಲಿ ಸ್ನಾನಮಾಡಿ ದೇವರ ದರ್ಶನಕ್ಕೆ ಅವಕಾಶ
ಶಿವಲಿಂಗದ ದರ್ಶನ ಪಡೆಯಲು ಬರುವ ಭಕ್ತರು ಗುಹೆಯ ಹೊರಭಾಗದಲ್ಲಿರುವ ನಾಗಪ್ಪ ಕೆರೆಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಗುಹೆಯನ್ನು ಪ್ರವೇಶಿಸಬೇಕು ಎಂಬುದು ಇಲ್ಲಿನ ಪ್ರತೀತಿ, ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬರುವ ಸಂದರ್ಭ ಒಂದು ಜೊತೆ ಬಟ್ಟೆಯನ್ನು ತರಬೇಕಾಗುತ್ತದೆ.

ಕಿರಿದಾದ ಗುಹೆ :
ಗುಹೆಯು ಸುಮಾರು ಇನ್ನೂರು ಮೀಟರ್ ದೂರ ಇರುವುದರಿಂದ ಕೆಲವೊಂದು ಕಡೆ ತುಂಬಾ ಕಿರಿದಾಗಿದೆ ಇಲ್ಲಿ ಮಂಡಿಯೂರಿ ಮುಂದೆ ಸಾಗಬೇಕಾಗುತ್ತದೆ, ಅಲ್ಲದೆ ಬೆಳಕು ಇಲ್ಲದಿರುವುದರಿಂದ ಬೆಳಕಿನ ವ್ಯವಸ್ಥೆ (ಟಾರ್ಚ್ ಅಥವಾ ದೊಂದಿ) ಮಾಡಿಕೊಂಡು ಸಾಗಬೇಕಾಗುತ್ತದೆ.

ನೆಲ್ಲಿತೀರ್ಥ ಹೆಸರು ಬಂದದ್ದು ಹೀಗೆ :
ಗುಹೆಯು ಕೆಂಪು ಕಲ್ಲಿನಿಂದ ಆವರಿಸಿದ್ದು ಒಳ ಪ್ರವೇಶಿಸಿದಂತೆ ಕಲ್ಲಿನ ಸಂದುಗಳಲ್ಲಿ ನೆಲ್ಲಿಕಾಯಿ ಆಕಾರದಲ್ಲಿ ನೀರಿನ ಹನಿಗಳು ಜಿನುಗುತ್ತಿರುತ್ತವೆ ಹಾಗಾಗಿ ಈ ಪ್ರಸಿದ್ಧ ಸ್ಥಳಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.

ಈ ಶಿವಲಿಂಗದ ಸುತ್ತಲೂ ಸದಾ ನೀರು ಹರಿಯುತ್ತಿರುತ್ತದೆ ಇದನ್ನು ಉದ್ಭವ ಗಂಗೆ ಎಂದು ಕರೆಯುತ್ತಾರೆ ಅಲ್ಲದೆ ಇಲ್ಲಿಗೆ ಭೇಟಿ ನೀಡಿದ ಭಕ್ತರು ಈ ನೀರಿನಿಂದಲೇ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಜೊತೆಗೆ ತೀರ್ಥ ರೂಪದಲ್ಲಿ ಈ ನೀರನ್ನು ಕೊಂಡೊಯ್ಯುತ್ತಾರೆ ಅಷ್ಟು ಮಾತ್ರವಲ್ಲದೆ ಇಲ್ಲಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಂಡರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಕಾಶಿಗೆ ಸಂಪರ್ಕ ಹೊಂದುವ ಗುಹೆ
ಅಂದಹಾಗೆ ಈ ಗುಹೆಯಲ್ಲಿ ಭಕ್ತರಿಗೆ ಶಿವ ಲಿಂಗದ ಬಳಿ ತನಕ ಹೋಗಲು ಅವಕಾಶ ಮಾಡಲಾಗಿದೆ ಪುರಾಣದ ಪ್ರಕಾರ ಈ ಗುಹೆಯು ಮುಂದುವರೆದು ಕಾಶಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ. ಮುಂದೆ ಈ ಗುಹೆಯು ತೀರಾ ಕಡಿದಾದ ರೀತಿಯಲ್ಲಿ ಗೋಚರಿಸುತ್ತಿದ್ದು ಶಿವಲಿಂಗದಿಂದ ನಂತರ ಗುಹೆಯೊಳಗೆ ಮುಂದುವರೆಯಲು ಯಾರಿಗೂ ಅವಕಾಶವಿಲ್ಲ.

ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ
ಸ್ಥಳ ಪುರಾಣದ ಪ್ರಕಾರ ಈ ಗುಹೆಯು ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾಗಿತ್ತಂತೆ ಈ ನೆಲ್ಲಿತೀರ್ಥಕ್ಕೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಅನನ್ಯವಾದ ಸಂಬಂಧವಿದೆಯಂತೆ ಜಾಬಾಲಿ ಮಹರ್ಷಿಯ ಬಳಿ ಅರುಣಾಸುರನೆಂಬ ರಾಕ್ಷಸ ಗಾಯತ್ರಿ ಮಂತ್ರ ಕಲಿಯುತ್ತಿದ್ದನಂತೆ ಆದರೆ ಅರುಣಾಸುರ ಕಲಿಯುತ್ತಿರುವ ಗಾಯತ್ರಿ ಮಂತ್ರವನ್ನು ಜನರ ಒಳಿತಿಗಾಗಿ ಬಳಸುವ ಬದಲು ಗಾಯತ್ರಿ ಮಂತ್ರದ ಶಕ್ತಿಯಿಂದ ರಾಕ್ಷಸ ಅರುಣಾಸುರ ಜಗತ್ತಿನಲ್ಲಿ ಪರಾಕ್ರಮವನ್ನು ಮೆರೆಯಲ್ಲು ಆರಂಭಿಸುತ್ತಾನೆ. ಜಾಬಾಲಿ ಮುನಿಗಳು ಅರುಣಾಸುರನ ಪರಾಕ್ರಮವನ್ನು ತಡೆಯಲಾರದೆ ನೆಲ್ಲಿತೀರ್ಥದಲ್ಲಿರುವ ಗುಹೆಯೊಳಗೆ ಆದಿಶಕ್ತಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾರೆ. ಈ ಜಾಬಾಲಿ ಮಹರ್ಷಿಯ ತಪಸ್ಸಿಗೆ ಒಲಿದ ಆದಿಶಕ್ತಿಯು ದುಂಬಿಯ ಆಕಾರದಲ್ಲಿ ಅರುಣಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿಯಾಗಿ ಅವತರಿಸಿ ಕಟೀಲಿನಲ್ಲಿ ನೆಲೆನಿಲ್ಲುತ್ತಾಳೆ.

ಕಟೀಲಿನನಲ್ಲಿರುವ ನಂದಿನಿ ಹೊಳೆಯೇ ಈ ನೆಲ್ಲಿತೀರ್ಥ ಗುಹಾಲಯದಲ್ಲಿ ಅಂತರಗಂಗೆಯಾಗಿ ಹರಿಯುತ್ತಿದ್ದಾಳೆ ಎಂಬುದು ಪ್ರತೀತಿ, ನೆಲ್ಲಿತೀರ್ಥದಲ್ಲಿರುವ ಇನ್ನೊಂದು ಗುಹೆ ಕಟೀಲಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಜಾಬಾಲಿ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವನ್ನು ಇಲ್ಲಿಗೆ ಭೇಟಿ ನೀಡಿದ ಭಕ್ತರು ಕಾಣಬಹುದು.

ಭಕ್ತರಿಗೆ ಗುಹೆ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೂ ಅವಕಾಶವಿದೆ.

ಭಗವಾನ್‌ ಈಶ್ವರ (ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇವೆ. ಇದರ ಜೊತೆಯಲ್ಲಿ ದೇವಾಲಯದ ಪಕ್ಕದಲ್ಲೇ ಪ್ರಮುಖ ದೈವಗಳಾದ ಪಿಲಿಚಾಮುಂಡಿ, ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲಕರ ದೇವಾಲಯವಿದೆ.

ಗುಹಾ ದೇವಾಲಯವನ್ನು ಪ್ರತೀ ವರ್ಷ ತುಲಾ ಸಂಕ್ರಮಣದಂದು ತೆರೆಯಲಾಗುತ್ತದೆ ಅಲ್ಲಿಂದ ಆರು ತಿಂಗಳುಗಳ ಕಾಲ ಭಕ್ತರಿಗೆ ಗುಹೆ ಪ್ರವೇಶಿಸಲು ಅವಕಾಶವಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ.

ದೇವಳಕ್ಕೆ ಮಾರ್ಗ:
ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದಲ್ಲಿದೆ ಗುಹಾಂತರ ದೇವಾಲಯ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದವಿನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವನ್ನು ತಲುಪಬಹುದು. ಕಟೀಲಿನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್‌ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು. ಉಡುಪಿಯಿಂದ ಬರುವವರು ಮೂಲ್ಕಿ, ಕಿನ್ನಿಗೋಳಿ ನಿಡ್ಡೋಡಿಯಿಂದಾಗಿ ನೆಲ್ಲಿತೀರ್ಥಕ್ಕೆ ತಲುಪಬಹುದು.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

1-adsa-dsad

ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

indi-1

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

bhavana rao is in Gray Games

ಭಾವನಾ ಹೊಸ ಗೇಮ್‌! ಗ್ರೇ ಗೇಮ್ಸ್ ನಲ್ಲಿ ಪೊಲೀಸ್‌ ಆಫೀಸರ್‌

DKShi

ಡಿಕೆಶಿ ವಿರುದ್ಧದ ಸಿಬಿಐ ವಿಚಾರಣೆಗೆ ಎಪ್ರಿಲ್ 6ರವರೆಗೆ ತಡೆ ನೀಡಿ ಹೈಕೋರ್ಟ್ ಆದೇಶ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food

ವಾವ್! ಏನ್ ರುಚಿ ಈ ಸಿಗಡಿ ಘೀ ರೋಸ್ಟ್..ಸಿಗಡಿ ತಂದರೆ ಒಮ್ಮೆ ಹೀಗೆ ಮಾಡಿ ನೋಡಿ…

1-wwqeq3

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

web-health

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಬಂಕಾಪುರ: ಕಂದಾಯ ಅಧಿಕಾರಿಗಳ ಕೂಡಿ ಹಾಕಿ ಪ್ರತಿಭಟನೆ

ಬಂಕಾಪುರ: ಕಂದಾಯ ಅಧಿಕಾರಿಗಳ ಕೂಡಿ ಹಾಕಿ ಪ್ರತಿಭಟನೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

1-adsa-dsad

ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

tdy-19

ಅನುಮತಿಯಿಲ್ಲದೇ ಜಾಹೀರಾತು ಅಂಟಿಸಿದರೆ ಶಿಕ್ಷೆ

indi-1

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ