Health Tips: ಏನಿದು ಪಿತ್ತಜನಕಾಂಗದ ಕೊಬ್ಬು? ಈ ಸಮಸ್ಯೆ ಎಷ್ಟು ಗಂಭೀರ

ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ

Team Udayavani, Apr 1, 2023, 2:59 PM IST

Health Tips: ಏನಿದು ಪಿತ್ತಜನಕಾಂಗದ ಕೊಬ್ಬು? ಈ ಸಮಸ್ಯೆ ಎಷ್ಟು ಗಂಭೀರ

ಈಗೀಗ ಅಲ್ಟ್ರಾಸೌಂಡ್‌ ಸ್ಕ್ಯಾನ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗುತ್ತಿರುವ ಪಿತ್ತಜನಕಾಂಗದ ಕೊಬ್ಬು ನಿರಪಾಯಕಾರಿ ಎಂಬ ವಾದವೊಂದಿದೆ. ಆದರೆ ಇದು ಸುಳ್ಳು. ನಿಜ ವಿಚಾರ ಎಂದರೆ, ಇದು ಪ್ರಗತಿ ಹೊಂದುತ್ತಿರುವ ಅನಾರೋಗ್ಯದ ಸೂಚನೆಯಾಗಿದ್ದು, ಇದು ಸಿರೋಸಿಸ್‌, ದೀರ್ಘ‌ಕಾಲಿಕ ಪಿತ್ತಜನಕಾಂಗದ ವೈಫ‌ಲ್ಯ ಅಥವಾ ಪಿತ್ತಜನಕಾಂಗದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದಾಗಿದೆ. ದೇಹ ವ್ಯವಸ್ಥೆಯಲ್ಲಿ ಅಡಗಿರುವ ಗಂಭೀರ ಅನಾರೋಗ್ಯದ ಮುನ್ಸೂಚಕವೂ ಇದಾಗಿದೆ.

ಎನ್‌ಎಎಫ್ಎಲ್‌ಡಿಗೆ ಕಾರಣಗಳೇನು?

ಎನ್‌ಎಎಫ್ಎಲ್‌ಡಿ ಒಂದು ಗಂಭೀರ ಅನಾರೋಗ್ಯ ಸ್ಥಿತಿಯಾಗಿದೆ. ಇದು ಸಾಧಾರಣ ಪಿತ್ತಜನಕಾಂಗದ ಕೊಬ್ಬಿನ ಸ್ಥಿತಿಯಿಂದ ಹೆಚ್ಚು ಗಂಭೀರ ಪ್ರಕರಣಗಳಾದ ಸ್ಟೀಟೊಹೆಪಟೈಟಿಸ್‌ (ಎನ್‌ಎಎಸ್‌ಎಚ್‌), ಸಿರೋಸಿಸ್‌ ಮತ್ತು ಕಾಲಾಂತರದಲ್ಲಿ ಪಿತ್ತಜನಕಾಂಗದ ಕ್ಯಾನ್ಸರ್‌ ಆಗಿಯೂ ಬೆಳವಣಿಗೆ ಹೊಂದಬಹುದಾಗಿದೆ. ಇದೊಂದು ಸೈಲೆಂಟ್‌ ಕಿಲ್ಲರ್‌ ಆಗಿದ್ದು, ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಹೀಗಾಗಿ ದಶಕಗಳ ಕಾಲ ಯಾವುದೇ ಲಕ್ಷಣಗಳಿಲ್ಲದೆ ಮೌನವಾಗಿದ್ದು, ಕೊನೆಗೆ ಪಿತ್ತಜನಕಾಂಗವು ಸರಿಪಡಿಸಲಾಗದ ಸ್ಥಿತಿಗೆ ತಲುಪಿದಾಗ ಮಾತ್ರ ಅನಾರೋಗ್ಯ ಲಕ್ಷಣಗಳ ಮೂಲಕ ಬಹಿರಂಗವಾಗುತ್ತದೆ. ಎನ್‌ಎಎಸ್‌ಎಚ್‌ಗೂ ಹೃದ್ರೋಗಗಳಿಗೂ ನಿಕಟ ಸಂಬಂಧ ಇದೆ. ಎನ್‌ಎಎಫ್ಎಲ್‌ಡಿ ರೋಗಿಗಳಲ್ಲಿ ಮೃತ್ಯು ಉಂಟಾಗುವುದಕ್ಕೆ ಹೃದ್ರೋಗ ಹಾಗೂ ರಕ್ತನಾಳ ಸಂಬಂಧಿ ಕಾಯಿಲೆಗಳು ಪ್ರಧಾನ ಕಾರಣವಾಗಿರುತ್ತವೆ.

ಏನಿದು ಪಿತ್ತಜನಕಾಂಗದ ಕೊಬ್ಬು?

ಪಿತ್ತಜನಕಾಂಗದಲ್ಲಿ ಕೊಬ್ಬು ಅಸಹಜವಾಗಿ ಸಂಗ್ರಹಗೊಳ್ಳುವುದರಿಂದ ಪಿತ್ತಜನಕಾಂಗವು ಊದಿಕೊಳ್ಳುವ ಸ್ಥಿತಿ (ಮದ್ಯಪಾನಿಗಳಲ್ಲಿ ಕಂಡುಬರುವಂಥಹುದು). ನಮಗೆ ಎದುರಾಗುವ ಎರಡು ಪ್ರಧಾನ ಪಿತ್ತಜನಕಾಂಗದ ಕೊಬ್ಬು ಪ್ರಕರಣಗಳೆಂದರೆ, ಆಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಮತ್ತು ಎನ್‌ಎಎಫ್ಎಲ್‌ಡಿ (ನಾನ್‌ ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌). ಅಪಾಯಕಾರಿ ಮದ್ಯಪಾನ ಹವ್ಯಾಸ, ವೈರಲ್‌ ಹೆಪಟೈಟಿಸ್‌ ಅಥವಾ ಔಷಧಗಳಂತಹ ಪಿತ್ತಜನಕಾಂಗದ ಕೊಬ್ಬಿನ ಬೇರೆ ಕಾರಣಗಳಿಲ್ಲದೆ ಇದ್ದಾಗ ಎನ್‌ಎಎಫ್ಎಲ್‌ಡಿ ರೋಗ ಪತ್ತೆ ಮಾಡಲಾಗುತ್ತದೆ.

ಸಮಸ್ಯೆ ಎಷ್ಟು ಗಂಭೀರ?

ಜಾಗತಿಕವಾಗಿ ಶೇ. 25ರಷ್ಟು ಮಂದಿ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾಶ್ಚಾತ್ಯ ಜನಸಮುದಾಯಗಳಲ್ಲಿ ಎನ್‌ಎಎಫ್ಎಲ್‌ಡಿಯು ಅತೀ ಸಾಮಾನ್ಯವಾದ ದೀರ್ಘ‌ಕಾಲಿಕ ಪಿತ್ತಜನಕಾಂಗ ಕಾಯಿಲೆಯಾಗಿದೆ. ಇತ್ತೀಚೆಗೆ ಭಾರತ ಮತ್ತು ಏಶ್ಯದ ಇತರ ದೇಶಗಳಲ್ಲಿಯೂ ಪಿತ್ತಜನಕಾಂಗ ಕಾಯಿಲೆಗಳ ಪ್ರಮುಖ ಕಾರಣವಾಗಿ ಕಂಡುಬರುತ್ತಿದೆ. ಭಾರತ ಮತ್ತು ಏಶ್ಯದ ಇತರ ದೇಶಗಳಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಜೀವನ ಶೈಲಿ ಮತ್ತು ಆಹಾರ ಶೈಲಿ ಬದಲಾವಣೆಯಿಂದಾಗಿ ಇದು ಹೆಚ್ಚುಹೆಚ್ಚು ಪತ್ತೆಯಾಗುತ್ತಿರುವುದು ದಾಖಲಾಗುತ್ತಿದೆ.

ಭಾರತದ ಕೆಲವು ನಗರಗಳ ಜನಸಮುದಾಯಗಳಲ್ಲಿ ಇದರ ಉಪಸ್ಥಿತಿ ಶೇ. 32ರ ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಎನ್‌ಎಎಫ್ಎಲ್‌ಡಿ ಸಮಸ್ಯೆಯನ್ನು ಭಾರತ ಸರಕಾರವು ಗುರುತಿಸಿದ್ದು, ಫೆಬ್ರವರಿ 2021ರಿಂದ ಎನ್‌ಸಿಡಿ ನಿಯಂತ್ರಣ ಕಾರ್ಯಕ್ರಮದಡಿ ನಾನ್‌-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಕಾಯಿಲೆಯನ್ನೂ ಸೇರ್ಪಡೆಗೊಳಿಸಿದೆ.

ಎನ್‌ಎಎಫ್ಎಲ್‌ಡಿಯ ಅಪಾಯಾಂಶಗಳೇನು?

ಎನ್‌ಎಎಫ್ಎಲ್‌ಡಿಯು ಆಧುನಿಕ ಜೀವನ ಶೈಲಿಗೆ ಸಂಬಂಧಿಸಿದ ಒಂದು ಕಾಯಿಲೆಯಾಗಿದೆ. ಅತಿಯಾದ ಕ್ಯಾಲೊರಿಯುಕ್ತ ಆಹಾರ ಸೇವನೆ, ಜಡ ಜೀವನ ಶೈಲಿಗಳು ಪ್ರಧಾನವಾಗಿರುವ ಅಸಮತೋಲಿತ, ತಪ್ಪು ಜೀವನ ಕ್ರಮದಿಂದಾಗಿ ಇದು ಉಂಟಾಗುತ್ತದೆ. ವಂಶವಾಹಿ ಕಾರಣಗಳು ಮತ್ತು ಜನಾಂಗೀಯ ವ್ಯತ್ಯಾಸಗಳು ಕೂಡ ಇದಕ್ಕೆ ಕೊಡುಗೆ ನೀಡುವುದು ಕಂಡುಬಂದಿದೆ. ಎನ್‌ಎಎಫ್ಎಲ್‌ಡಿ ಉಂಟಾಗಲು ಅಪಾಯಾಂಶಗಳೆಂದರೆ, ಮಧುಮೇಹ, ಬೊಜ್ಜು, ಹೆಚ್ಚು ಕೊಲೆಸ್ಟರಾಲ್‌ ಮಟ್ಟ, ಅಧಿಕ ರಕ್ತದೊತ್ತಡ, ಗುÉಕೋಸ್‌ ಅಸಹಿಷ್ಣುತೆ – ಇವುಗಳನ್ನು ಒಟ್ಟಾಗಿ ಮೆಟಬಾಲಿಕ್‌ ಸಿಂಡ್ರೋಮ್‌ ಎನ್ನಲಾಗುತ್ತದೆ.

ಬೊಜ್ಜು ಅಥವಾ ಮಧುಮೇಹ ಹೊಂದಿರುವವರಲ್ಲಿ ಶೇ. 70 ಮಂದಿಗೆ ಎನ್‌ಎಎಫ್ಎಲ್‌ಡಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇರುವ ಎನ್‌ಎಎಫ್ಎಲ್‌ಡಿ ಪೀಡಿತರಲ್ಲಿ ವಿಶೇಷತೆಯೊಂದಿದೆ. ಅದೆಂದರೆ, “ಲೀನ್‌ ಎನ್‌ಎಎಫ್ಎಲ್‌ಡಿ’ ಅಥವಾ “ಬೊಜ್ಜೆàತರ ಎನ್‌ಎಎಫ್ಎಲ್‌ಡಿ’. ಇದು ಭಾರತದಲ್ಲಿ ಎನ್‌ಎಎಫ್ಎಲ್‌ಡಿ ಹೊಂದಿರುವವರ ಪೈಕಿ ಶೇ. 10 ಮಂದಿಯಲ್ಲಿ ಕಂಡುಬರುತ್ತಿದೆ.

ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯು ಸಹಜ ದೇಹತೂಕ ಹೊಂದಿರಬಹುದು ಅಥವಾ ತೆಳ್ಳಗೆ ಇರಬಹುದು; ಆದರೆ ಆತನಲ್ಲಿ ಮಧುಮೇಹ ಉಂಟಾಗುತ್ತದೆ, ಕೊಲೆಸ್ಟರಾಲ್‌ ಪ್ರಮಾಣ ಅಧಿಕವಾಗುತ್ತದೆ; ದೇಹದ ಚಯಾಪಚಯ ಕ್ರಿಯೆಯಲ್ಲಿರುವ ತೊಂದರೆಯಿಂದಾಗಿ ಎನ್‌ಎಎಫ್ಎಲ್‌ಡಿ ಉಂಟಾಗುತ್ತದೆ. ಇಂತಹ ಪ್ರಕರಣಗಳಲ್ಲಿ ದೇಹವು ತೆಳ್ಳಗಿರುವುದರಿಂದಾಗಿ ಉತ್ತಮ ಆರೋಗ್ಯದಿಂದಿರುವ ತಪ್ಪು ಚಿತ್ರಣ ಉಂಟಾಗುತ್ತದೆ ಮತ್ತು ರೋಗಿಯು ಕಾಯಿಲೆಯ ಮುಂದುವರಿದ ಹಂತದಲ್ಲಷ್ಟೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತಾಗುತ್ತದೆ.

ಎನ್‌ಎಎಫ್ಎಲ್‌ಡಿನಿಭಾಯಿಸುವುದು ಹೇಗೆ?

ಫ್ಯಾಟಿ ಲಿವರ್‌ ಕಾಯಿಲೆ ಒಂದು ನಿರಪಾಯಕಾರಿ ಕಾಯಿಲೆ ಖಂಡಿತ ಅಲ್ಲ; ದೀರ್ಘಾವಧಿಯಲ್ಲಿ ಕೆಲವರಿಗೆ ಅದು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಸದ್ಯದ ಮಟ್ಟಿಗೆ ಇದರಿಂದ ಪಾರಾಗುವ ಅತ್ಯುತ್ತಮ ಚಿಕಿತ್ಸಾ ವಿಧಾನ ಎಂದರೆ ಆರೋಗ್ಯವಂತ ಜೀವನಕ್ರಮವನ್ನು ರೂಢಿಸಿಕೊಳ್ಳುವುದು. ವ್ಯಾಯಾಮ, ತೂಕ ಕಳೆದುಕೊಳ್ಳುವುದು, ಪೌಷ್ಟಿಕ ಆಹಾರಕ್ರಮ ಬಹಳ ಮುಖ್ಯ. ಬಿರುಸಾದ ನಡಿಗೆ, ಸೈಕಲ್‌ ಸವಾರಿ, ಜಾಗಿಂಗ್‌ ಅಥವಾ ಈಜಾಡುವಂತಹ ಏರೋಬಿಕ್‌ ವ್ಯಾಯಾಮಗಳಿಗೆ ಒತ್ತು ನೀಡಬೇಕು. ಕಾಬೊìಹೈಡ್ರೇಟ್‌ ಕಡಿಮೆ ಇರುವ, ಕೊಬ್ಬಿನಂಶ ಮಿತವಾಗಿರುವ, ಸ್ಯಾಚ್ಯುರೇಟೆಡ್‌ ಕೊಬ್ಬು ಇಲ್ಲದ ಮತ್ತು ಸಾಕಷ್ಟು ಪ್ರೊಟೀನ್‌ ಅಂಶ ಹೊಂದಿರುವ ಆಹಾರ ಕ್ರಮಕ್ಕೆ ಒತ್ತು ನೀಡಬೇಕು.

ದೇಹತೂಕದಲ್ಲಿ ಶೇ. 7ರಿಂದ ಶೇ. 10ರ ವರೆಗಿನ ಅಂಶವನ್ನು ಕಳೆದುಕೊಳ್ಳುವುದು ಗುರಿಯಾಗಿದ್ದು, ಇದರಿಂದ ನ್ಯಾಶ್‌ನ ಬಯಾಪ್ಸಿಯ ಫ‌ಲಿತಾಂಶಗಳು ಉತ್ತಮಗೊಳ್ಳುವುದು ಕಂಡುಬಂದಿದೆ. ರಕ್ತದ ಸಕ್ಕರೆಯ ಅಂಶದ ಉತ್ತಮ ನಿಭಾವಣೆ ಹಾಗೂ ಹೃದ್ರೋಗ ಅಪಾಯಗಳ ವಿಶ್ಲೇಷಣೆ ಮತ್ತು ಅದಕ್ಕೆ ಚಿಕಿತ್ಸೆ ಅತ್ಯಂತ ಮುಖ್ಯವಾಗಿವೆ, ಏಕೆಂದರೆ ಇದು ಹೃದ್ರೋಗ ಸಂದರ್ಭಗಳಲ್ಲಿ ಎನ್‌ಎಎಫ್ಎಲ್‌ಡಿ ರೋಗಿಗಳ ಮೃತ್ಯುವಿಗೆ ಪ್ರಧಾನ ಕಾರಣವಾಗಿರುತ್ತದೆ.

ಎನ್‌ಎಎಫ್ಎಲ್‌ಡಿಯ ಮೂರು ಹಂತಗಳಾದ- ಫ್ಯಾಟಿ ಲಿವರ್‌, ಫ್ಯಾಟಿ ಹೆಪಟೈಟಿಸ್‌ (ನ್ಯಾಶ್‌) ಮತ್ತು ಸಿರೋಸಿಸ್‌ – ಇವುಗಳಲ್ಲಿ ಮೊದಲ ಎರಡನ್ನು ಚಿಕಿತ್ಸೆ ನೀಡಿ ಸರಿಪಡಿಸುವ ಸಾಧ್ಯತೆಗಳಿವೆ ಮತ್ತು ಸರಿಪಡಿಸಲು ಸಾಧ್ಯವಾಗದ ಸಿರೋಸಿಸ್‌ ಹಂತಕ್ಕೆ ಪ್ರಗತಿ ಹೊಂದಲು ಸಾಕಷ್ಟು ಕಾಲಾವಕಾಶ ಇರುತ್ತದೆ. ಆದರೆ ಇಂತಹ ಸಮಸ್ಯೆ ಹೊಂದಿರುವ ಪ್ರಾಥಮಿಕ ಫ್ಯಾಟಿ ಲಿವರ್‌ ರೋಗಿಗಳನ್ನು ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಮನವೊಲಿಸುವುದು ಮತ್ತು ಆರೋಗ್ಯಕರ ಜೀವನ ವಿಧಾನವನ್ನು ಅನುಸರಿಸುವಂತೆ ಉತ್ತೇಜಿಸುವುದು ಸವಾಲಾಗಿರುತ್ತದೆ. ಏಕೆಂದರೆ, ಈ ಎನ್‌ಎಎಫ್ಎಲ್‌ಡಿ ಕಾಯಿಲೆಯು ಸರಿಪಡಿಸಬಹುದಾದ ಪ್ರಾರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ.

ಡಾ| ಅನುರಾಗ್ಶೆಟ್ಟಿ

ಅಸೋಸಿಯೇಟ್ಪ್ರೊಫೆಸರ್‌,

 ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ

ಕೆಎಂಸಿ ಆಸ್ಪತ್ರೆ, ಮಂಗಳೂರು.

ಟಾಪ್ ನ್ಯೂಸ್

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ

bill gates

ಹಳೆ ಪ್ರೇಮ ಪ್ರಕರಣದಿಂದ Bill Gates ಗೆ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health Tips: ಕಣ್ಣಿನ ಊತ ಕಡಿಮೆ ಮಾಡಿಕೊಳ್ಳುವುದು ಹೇಗೆ ?

Health Tips: ಕಣ್ಣಿನ ಊತ ಕಡಿಮೆ ಮಾಡಿಕೊಳ್ಳುವುದು ಹೇಗೆ ?

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

Covid test

WHOನಿಂದ ಕೋವಿಡ್-19 ಡೌನ್‌ಗ್ರೇಡ್‌; ಇನ್ನು ಮುಂದೆ ತುರ್ತುಸ್ಥಿತಿಯಿಲ್ಲ

World Asthma Day 2023: ಆರೋಗ್ಯ ಕಾಳಜಿ -ಅಸ್ತಮಾ ತಡೆಗೆ ಮನೆ ಮದ್ದು

World Asthma Day 2023: ಆರೋಗ್ಯ ಕಾಳಜಿ -ಅಸ್ತಮಾ ತಡೆಗೆ ಮನೆ ಮದ್ದು

3-sugar-health

ಆಕ್ಯುಪೇಶನಲ್‌ ಥೆರಪಿಸ್ಟ್‌ ಸಹಾಯ ಮನೆಯಲ್ಲಿಯೇ ನಿರ್ವಹಿಸಿ ಮಧುಮೇಹ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?