ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಮತ್ತೆ ಕೆಲಸ ಶುರುವಾಗುವುದು ದವಡೆ ಹಲ್ಲಿಗೂ ಮತ್ತು ವೀಳ್ಯದೆಲೆ,ಅಡಿಕೆಗೆ ಯುದ್ಧ ಆರಂಭವಾದಗಲೆ

Team Udayavani, Nov 29, 2021, 10:30 AM IST

ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಮಲೆನಾಡು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಾದ ಬೆಟ್ಟ-ಗುಡ್ಡಗಳು, ಭವ್ಯವಾದ ಶಿಲ್ಪಕಲೆಯುಳ್ಳ ದೇವಸ್ಥಾನಗಳು, ಪ್ರಾಣಿ ವರ್ಗ ಹಾಗೂ ಅಲ್ಲಿನ ಶ್ರೀಮಂತ ಹೃದಯದ ಜನರು. ಮಲೆನಾಡ ಜನರ ಬದುಕಿನ ಶೈಲಿಗೂ ಇಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಮಲೆನಾಡು ಹಸಿರು ತೋರಣಗಳ ನಾಡು. ಅಲ್ಲಿ ಕೃಷಿಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚು. ಉದಾ ; ಕರಾವಳಿಯಲ್ಲಿ ಮೀನುಗಾರಿಕೆ ಹೇಗೋ ಅಲ್ಲಿ ಕೃಷಿಯೂ ಹಾಗೆ, ಒಂದೂರಿನಲ್ಲಿ 100 ಮನೆ  ಇದೆಯೆಂದಾದರೆ ಅದರಲ್ಲಿ 80ರಷ್ಟು  ಮನೆಯವರು ಹೊಲ, ಗದ್ದೆ,ತೋಟ ಹೊಂದಿರುತ್ತಾರೆ. ಮನೆಯಲ್ಲಿ ತಮ್ಮದೇ ಆದ ಸ್ವಲ್ಪಮಟ್ಟಿಗೆ ತೋಟ ಅಥವಾ ಗದ್ದೆ ಇದ್ದರೂ ಕೂಡ ಊರಿನ ಎಸ್ಟೇಟ್ ಗಳಿಗೆ ಹೋಗಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಮಲೆನಾಡಿನ ಯಾವುದೇ ಮನೆಗಳಿಗೆ ಭೇಟಿ ಕೊಟ್ಟರೆ ಸುಮ್ಮನೆ ಕೂತು ಕಾಲಹರಣ ಮಾಡುವಂತಿಲ್ಲ, ಏಕೆಂದರೆ ಪ್ರತಿಯೊಂದು ಮನೆಯೂ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವೀಕ್ಷಣೀಯವಾಗಿದೆ. ವಿಭಿನ್ನವಾದ ವಿನ್ಯಾಸದೊಂದಿಗೆ ಮನೆಗೆ ಬರುವವರನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಮಲೆನಾಡಿಗರಿಗೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ ಎಂದರೆ ತಪ್ಪಾಗದು.

ಅಲ್ಲಿನ ಜನರಿಗೆ ಬೆಳಗಾಗುವುದು ಮನೆಯ ಕೋಳಿ ಕೊಕ್ಕೊಕ್ಕೋ ಎಂದು ರಾಗ ಹಾಕಿದಾಗಲೆ. ಮುಂಜಾನೆ ಮನೆಯ ಕುಬೇರರಿಗೆ ತಿನ್ನಲು ಹುಲ್ಲು ತಂದು ಹಾಕಿ ಮೇವಿಗೆ ಬಿಟ್ಟರೆ ಮತ್ತೆ ಕೆಲಸ ಶುರುವಾಗುವುದು ದವಡೆ ಹಲ್ಲಿಗೂ ಮತ್ತು ವೀಳ್ಯದೆಲೆ,ಅಡಿಕೆಗೆ ಯುದ್ಧ ಆರಂಭವಾದಗಲೆ. ಗದ್ದೆಯಲ್ಲೊ, ತೋಟದಲ್ಲೊ ಬೆವರು ಸುರಿಸಿ ಬಂದರೆ ಮನೆಯಲ್ಲಿ ಬೆಲ್ಲಕ್ಕೆ ನೀರು ಹಾಕಿದಂತೆ ಮಾಡಿದ ಕಾಫಿಯನ್ನು ಕುಡಿಯುತ್ತಾರೆ.

ಮಳೆಗಾಲದ ಸಂದರ್ಭದಲ್ಲಿ ಮಲೆನಾಡು  ಸ್ವರ್ಗದ ದ್ವಾರ ಬಾಗಿಲಿನಂತೆ  ಕಾಣುತ್ತಿರುತ್ತದೆ. ಆ ಸಮಯದಲ್ಲಿ ಪಟಪಟನೆ ಹಂಚಿನ ಮೇಲೆ ಬೀಳುವ ಮಳೆಗೆ ಹಲಸಿನ ಹಬ್ಬಳ ಮುರಿಯುವ ಮಜವೇ ಬೇರೆ. ಮನೆಯ ಅಂಗಳದಲ್ಲಿ ಬಿಟ್ಟರೆ ಇನ್ನುಳಿದ ಕಡೆ ನದಿಯೋ, ಜಲಪಾತವು ಹರಿಯುತ್ತಿರುತ್ತದೆ. ಅಣಬೆ ಎಂದರೆ ಎಲ್ಲರೂ  ಕೇಳಿರಲಿಕ್ಕಿಲ್ಲ, ನಿಮಗೆ ಅರ್ಥವಾಗುವಂತೆ (ಮಶ್ರೂಮ್ ) ನಾಯಿಕೊಡೆಯನ್ನು ಹುಡುಕುವುದು ಸಿಲಿಕಾನ್ ಸಿಟಿ ಟ್ರಾಫಿಕ್ ನಲ್ಲಿ ತಿಂಡಿ ತಿಂದು ಮುಗಿಸಿದಷ್ಟು ಸುಲಭದ ಕೆಲಸ. ಗದ್ದೆಯಂಚಿನಲ್ಲಿ ಹಾಳು ಬಿದ್ದ ಜಾಗದಲ್ಲಿ ಹುಟ್ಟಿರುತ್ತದೆ.

ಎಂದಿನಂತೆ ಅಲ್ಲಿಗೂ ಇಲ್ಲಿಗೂ ತುಂಬಾ ವ್ಯತ್ಯಾಸವಿದೆ, ಇಲ್ಲಿ ಮನೆಗಳಿಗೆ ಕಂಪೌಂಡ್ ಏರಿಸಿದ್ದಾರೆ, ಅಲ್ಲಿ ಅಚ್ಚುಕಟ್ಟಾದ ತಂತಿಬೇಲಿ, ಮನೆ ಎದುರಿಗೆ ಇಲ್ಲಿ ಸಿಮೆಂಟಿನ ಹಾಸಿಗೆ, ಅಲ್ಲಿ ಹಸಿರು ಬಳ್ಳಿಗಳು ಎದ್ದು ನಿಂತಿರುತ್ತವೆ, ಇಲ್ಲಿ ತಿನ್ನಲು ಜೊತೆಗೆ ಜಾಮ್ ಅಥವಾ ಸಾಸ್ ಇದ್ದರೆ, ಅಲ್ಲಿ ಚಗಳಿ ಇರುವೆ ಚಟ್ನಿ ಹೀಗೆ ಹೇಳುತ್ತ ಹೋದರೆ ಮುಗಿಯದಷ್ಟಿದೆ.

ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ ಅದು ಮಧ್ಯದಲ್ಲಿ ಮುಳುಗಿ ಹೋಗಬಹುದು ಅಥವಾ ದಡಸೇರಲು ಬಹುದು. ಬದುಕು ಕೊನೆಗೊಳ್ಳುವ ಮೊದಲು ಆದಷ್ಟು ಸಿಹಿ ಕಹಿ ನೆನಪುಗಳು ಉಳಿದು ಅಳಿದು ಹೋಗುತ್ತವೆ. ಆದರೆ ಕಲ್ಲು-ಸಕ್ಕರೆಯಂಥ ಸಿಹಿನೆನಪು ಬದುಕಿನಲ್ಲಿ  ಉಳಿಯಬೇಕಾದರೆ ನೀವು ಒಮ್ಮೆ ಮಲೆನಾಡಿಗೆ ಕಾಲಿಡಲೇ ಬೇಕು.

ರಾಹುಲ್, ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

h gygghjklm

ಹೀಗೊಂದು ಮೊಬೈಲ್ ಮಾರ್ಚ್ಯುರಿ !

ಚಾರಣ ಪ್ರಿಯರ ನೆಚ್ಚಿನ ತಾಣ ಕುಮಾರ ಪರ್ವತ…

ಚಾರಣ ಪ್ರಿಯರ ನೆಚ್ಚಿನ ತಾಣ ಕುಮಾರ ಪರ್ವತ…

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

3distric

ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

2abulence

ಉಚಿತ ಆಂಬ್ಯುಲೆನ್ಸ್‌ ಸೇವೆಗೆ ಸಚಿವ ನಿರಾಣಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.