
ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!
ಇಡ್ಲಿಯನ್ನು ಹೆಚ್ಚಾಗಿ ಆರ್ಡರ್ ಮಾಡುವ ವಿಶ್ವದ ಮೂರು ಪ್ರಮುಖ ನಗರಗಳೆಂದರೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ.
Team Udayavani, Mar 30, 2023, 6:54 PM IST

ಹೈದರಾಬಾದ್: ಭಾರತದಲ್ಲಿ ಪ್ರದೇಶದಿಂದ ಪ್ರದೇಶ, ವಿವಿಧ ರಾಜ್ಯಗಳಲ್ಲಿ ಒಂದೊಂದು ಬಗೆಯ ಉಪಹಾರಗಳು ಇರುತ್ತವೆ. ಇದರಲ್ಲಿ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಇಡ್ಲಿಯೂ ಸೇರಿದೆ. ಆದರೆ ಇಂದಿಗೂ ಇಡ್ಲಿಯ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!
ಈ ನಿಟ್ಟಿನಲ್ಲಿ ಸ್ವಿಗ್ಗಿ ವಿಶ್ವ ಇಡ್ಲಿ ದಿನದ (ಮಾರ್ಚ್ 30) ಸಂದರ್ಭದಲ್ಲಿ ಸಮೀಕ್ಷೆಯೊಂದನ್ನು ಬಿಡುಗಡೆಗೊಳಿಸಿದ್ದು, ಸ್ವಿಗ್ಗಿ ಕಳೆದ 12 ತಿಂಗಳಲ್ಲಿ 33 ಮಿಲಿಯನ್ ಪ್ಲೇಟ್ ಗಳಷ್ಟು ಇಡ್ಲಿಯನ್ನು ಸರಬರಾಜು ಮಾಡಿರುವುದಾಗಿ ತಿಳಿಸಿದೆ.
2022ರ ಮಾರ್ಚ್ 30ರಿಂದ 2023ರ ಮಾರ್ಚ್ 25ರವರ ನಡುವಿನ ಅವಧಿಯಲ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿಯ ಕುರಿತು ಸ್ವಿಗ್ಗಿ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ಇಡ್ಲಿಯನ್ನು ಹೆಚ್ಚಾಗಿ ಆರ್ಡರ್ ಮಾಡುವ ವಿಶ್ವದ ಮೂರು ಪ್ರಮುಖ ನಗರಗಳೆಂದರೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ. ಇನ್ನುಳಿದಂತೆ ದೆಹಲಿ, ಕೋಲ್ಕತಾ, ಕೊಚ್ಚಿ, ಮುಂಬೈ, ಕೊಯಮತ್ತೂರು, ಪುಣೆ ವೈಜಾಗ್ ನಗರಗಳು ನಂತರದ ಸ್ಥಾನದಲ್ಲಿರುವುದಾಗಿ ಸ್ವಿಗ್ಗಿ ಹೇಳಿದೆ.
ಈತ ಆರ್ಡರ್ ಮಾಡಿದ್ದು ಬಿರಿಯಾನಿ ಅಲ್ಲ…
ಒಂದು ವೇಳೆ ಹೈದರಾಬಾದ್ ನಲ್ಲಿ ವಾಸವಾಗಿದ್ದರೆ ಅಥವಾ ಭೇಟಿ ನೀಡಿದರೆ ಬಹುತೇಕ ಮಂದಿ ಹೆಚ್ಚಾಗಿ ಆರ್ಡರ್ ಮಾಡುವುದು ಬಿರಿಯಾನಿ. ಆದರೆ ಹೈದರಾಬಾದ್ ನ ಸ್ವಿಗ್ಗಿ ಗ್ರಾಹಕರೊಬ್ಬರು ಇಡೀ ವರ್ಷದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಡ್ಲಿಯನ್ನು ಆರ್ಡರ್ ಮಾಡಿ ಗಮನಸೆಳೆದಿದ್ದಾರೆ.
ಹೌದು ಹೈದರಾಬಾದ್ ನ ಈ ವ್ಯಕ್ತಿ ಒಂದು ವರ್ಷದಲ್ಲಿ ತನ್ನ ಗೆಳೆಯರು ಮತ್ತು ಕುಟುಂಬ ಸದಸ್ಯರಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದು, ಇದಕ್ಕಾಗಿ ಅವರು ಆರು ಲಕ್ಷ ರೂಪಾಯಿ ಪಾವತಿಸಿರುವುದಾಗಿ ಸ್ವಿಗ್ಗಿ ವಿವರಿಸಿದೆ.
ಸಮೀಕ್ಷೆಯ ಪ್ರಕಾರ, ಇಡ್ಲಿಗಳನ್ನು ಆರ್ಡರ್ ಮಾಡುವ ಜನಪ್ರಿಯ ಸಮಯವೆಂದರೆ ಬೆಳಗ್ಗೆ 8ರಿಂದ 10ಗಂಟೆವರೆಗೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ ಮತ್ತು ಕೊಯಮತ್ತೂರಿನ ಗ್ರಾಹಕರು ಊಟದ ಸಮಯದಲ್ಲಿ ಇಡ್ಲಿಗಳನ್ನು ಆರ್ಡರ್ ಮಾಡುತ್ತಾರೆ ಎಂದು ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!

Squid Game ಪ್ರೇರಿತ ಗೇಮ್ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

Wedding: ಮದುವೆಯಾದ 7 ದಿನದ ಬಳಿಕ ನಗದು, ಚಿನ್ನದೊಂದಿಗೆ ಪರಾರಿಯಾದ ನವವಧು