
ಜಡೇಜಾ, ಚಾಹಲ್‌ರನ್ನು ʻಕಳಪೆ ಸ್ಪಿನ್ನರ್ಸ್ʼ ಎಂದ ಪಾಕ್ ಮಾಜಿ ಕ್ರಿಕೆಟರ್
Team Udayavani, Mar 2, 2023, 5:53 PM IST

ನವದೆಹಲಿ: ಭಾರತದ ಸ್ಟಾರ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ಅಬ್ದುರ್ ರೆಹಮಾನ್ ʻಕಳಪೆʼ ಎಂದು ಕರೆದಿದ್ದಾರೆ. ಎಂ.ಎಸ್ ಧೋನಿ ಇಲ್ಲದಿದ್ದರೆ ಇವರಿಬ್ಬರೂ ಸ್ಪಿನ್ನರ್‌ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೀತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದೂ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಬಾಗಿಯಾದ ರೆಹಮಾನ್ ಅವರಲ್ಲಿಅತ್ಯಂತ ಕೆಟ್ಟ ಭಾರತೀಯ ಸ್ಪಿನ್ನರ್ ಯಾರೆಂದು ಕೇಳಲಾಗುತ್ತದೆ. ಮೊದಲಿಗೆ ಅದಕ್ಕೆ ಉತ್ತರಿಸಿದ ರೆಹಮಾನ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಸ್ಪಿನ್ನರ್‌ಗಳನ್ನು ಬಕಳಪೆ ಎನ್ನಲಾಗದು ಎಂದು ಹೇಳಿದ್ದಾರೆ. ಆದರೆ ಒಮ್ಮಗೇ ತಮ್ಮ ನಿರ್ಧಾರವನ್ನು ಬದಲಿಸಿದ ರೆಹಮಾನ್ ತಮ್ಮ ನಿರ್ಧಾರ ಬದಲಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ʻಆರಂಭಿಕ ವೃತ್ತಿಜೀವನದ ಪ್ರಾರಂಭದಲ್ಲಿ ರವೀಂದ್ರ ಜಡೇಜಾ ಒಬ್ಬ ಕಳಪೆ ಸ್ಪಿನ್ನರ್ ಆಗಿದ್ದರು. ಎಂ.ಎಸ್ ಧೋನಿ ಅವರ ನಾಯಕತ್ವದಲ್ಲಿ ಅವರನ್ನು ಅದ್ಭುತವಾಗಿ ಬೆಳೆಸಲಾಯಿತು. ಈಗ ಆತ ವಿಶ್ವದ ಶ್ರೇಷ್ಟ ಸ್ಪಿನ್ನರ್‌ಗಳಲ್ಲಿ ಒಬ್ಬನಾಗಿದ್ದಾನೆ. ಯಜುವೇಂದ್ರ ಚಾಹಲ್ ಮತ್ತೊಬ್ಬ ʻಕಳಪೆʼ ಸ್ಪಿನ್ನರ್. ಆತನ ಎದುರು ಸುಲಭವಾಗಿ ದೊಡ್ಡ ಹೊಡೆತಗಳನ್ನು ಹೊಡೆಯಬಹುದು. ಚಹಲ್ ಬೌಲಿಂಗ್‌ನಲ್ಲಿ ಬಲವಿಲ್ಲ. ಆತ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹುಕಾಲ ಉಳಿಯಬಲ್ಲ ಬೌಲರ್ ಅಲ್ಲವೇ ಅಲ್ಲʼ ಎಂದು ಹೇಳಿದ್ದಾರೆ.
ಪಾಕ್‌ನ ಮಾಜಿ ಎಡಗೈ ಸ್ಪಿನ್ನರ್ ಆಗಿರುವ ಅಬ್ದುರ್ ರೆಹಮಾನ್ ಪಾಕ್ ಪರ 22 ಟೆಸ್ಟ್ ಪಂದ್ಯಗಳಿಂದ 99 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಪುರುಷ ದಾದಿ; ಫೋಟೋಗಳು ವೈರಲ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ