ಪಾಕ್ ಆಡಳಿತಾತ್ಮಕ ಹುದ್ದೆಗೆ ಮೊದಲ ಹಿಂದೂ ಮಹಿಳೆ !
Team Udayavani, Feb 15, 2023, 7:50 AM IST
ಇಸ್ಲಾಮಾಬಾದ್ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವತಿ, ಸನಾ ರಾಮಚಂದ್ ಗುಲ್ವಾನಿ ಅವರನ್ನು, ಪಂಜಾಬ್ ಪ್ರಾಂತ್ಯದ ಹಸನಾಬ್ದಲ್ನ ಸಹಾಯಕ ಆಯುಕ್ತರು ಹಾಗೂ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಈ ಮೂಲಕ ಪಾಕಿಸ್ತಾನ ಆಡಳಿತಾತ್ಮಕ ಸೇವೆ (ಪಿಎಎಸ್)ಗೆ ಸೇರ್ಪಡೆಗೊಂಡ ಹಿಂದೂ ಸಮುದಾಯದ ಮೊದಲ ಸಹಾಯಕ ಆಯುಕ್ತರೆಂಬ ಖ್ಯಾತಿಗೆ ಸನಾ ಪಾತ್ರರಾಗಿದ್ದಾರೆ.
ಸಿಂಧ್ ಪ್ರಾಂತ್ಯದ ಶಿಕಾರ್ಪುರ ಮೂಲದವರಾದ ಸನಾ, 2020ರಲ್ಲಿ ಕೇಂದ್ರ ಉನ್ನತ ಸೇವೆ (ಸಿಎಸ್ಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕಳೆದವಾರವಷ್ಟೆ ಹಸನಾಬ್ದಲ್ನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ.
ಅಲ್ಲದೆ, ಸನಾ ತಮ್ಮ ಮೊದಲ ಪ್ರಯತ್ನದಲ್ಲೇ ಸಿಎಸ್ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ