ಫೆ. 10ರಂದು: ಭವಿಷ್ಯ ನಿಧಿ ಕಚೇರಿಯಲ್ಲಿ ಪಿಂಚಣಿ ಅದಾಲತ್
Team Udayavani, Feb 7, 2023, 12:26 AM IST
ಮಂಗಳೂರು: ಮಂಗಳೂರು ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ ವತಿಯಿಂದ ನಿಧಿ ಆಪ್‌ಕೇ ನಿಕಟ್ ಪಿಂಚಣಿ ಅದಾಲತ್ ಕಾರ್ಯಕ್ರಮವು ಫೆ. 10ರಂದು ಭವಿಷ್ಯ ನಿಧಿ ಕಚೇರಿಯಲ್ಲಿ ನಡೆಯಲಿದೆ.
ಬೆಳಗ್ಗೆ 11ರಿಂದ 12 ವರೆಗೆ ಭವಿಷ್ಯ ನಿಧಿ ಸದಸ್ಯರು, ಉದ್ಯೋಗದಾತರು, ಹಾಗೂ 12ರಿಂದ 1ರ ವರೆಗೆ ಪಿಂಚಣಿದಾರರು ಇದರಲ್ಲಿ ಪಾಲ್ಗೊಳ್ಳಬಹುದು.
ಅಹವಾಲುಗಳನ್ನು ಇಮೇಲ್ ಮೂಲಕ [email protected] ಅಥವಾ ನೇರವಾಗಿ ಮಂಗಳೂರಿನ ಹೈಲ್ಯಾಂಡ್ಸ್ ಬಳಿ ಸಿಲ್ವ ರಸ್ತೆಯಲ್ಲಿರುವ ಭವಿಷ್ಯನಿಧಿ ಕಚೇರಿಗೆ ತಲಪಿಸಬಹುದು.
ಡಿಜಿಟಲ್ ಜೀವಿತ ಪ್ರಮಾಣಪತ್ರ ವನ್ನು ವರ್ಷದ ಯಾವುದೇ ತಿಂಗಳಲ್ಲೂ ಸಲ್ಲಿಸಬಹುದು ಹಾಗೂ ಇದು ಒಂದು ವರ್ಷ ಕಾಲ ಮಾನ್ಯವಾಗಿರುತ್ತದೆ. ಜೀವನ್ ಪ್ರಮಾಣ್ ಫೇಸ್ ರೆಕಗ್ನಿಶನ್ ಆಪ್ ಬಳಸಿಕೊಂಡು ಸ್ಮಾರ್ಟ್ ಫೋನಿನಲ್ಲಿ ಕೂಡ ಪಿಂಚಣಿದಾರರು ಪ್ರಮಾಣ ಪತ್ರ ಸಲ್ಲಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ
ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ
ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ