ವಿಡಿಯೋ… ಲಿಫ್ಟ್‌ನೊಳಗೆ ಶಾಲಾ ಬಾಲಕನಿಗೆ ಕಚ್ಚಿದ ಸಾಕು ನಾಯಿ


Team Udayavani, Nov 16, 2022, 3:24 PM IST

ವಿಡಿಯೋ… ಲಿಫ್ಟ್‌ನೊಳಗೆ ಶಾಲಾ ಬಾಲಕನಿಗೆ ಕಚ್ಚಿದ ಸಾಕು ನಾಯಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ ಅದರಂತೆ ನೋಯ್ಡಾದಲ್ಲಿ ನಡೆದ ಘಟನೆ ಜನರನ್ನು ಬೆಚ್ಚಿ ಬೀಳಿಸುವಂತಿದೆ, ಇಲ್ಲಿನ ವಸತಿ ಸಮುಚ್ಚಯದಲ್ಲಿ ಶಾಲಾ ಬಾಲಕನಿಗೆ ಸಾಕು ನಾಯಿಯೊಂದು ಕಚ್ಚಿದ ಪ್ರಕರಣ ನಡೆದಿದೆ.

ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ತನ್ನ ತಾಯಿಯ ಜೊತೆ ವಸತಿ ಸಮುಚ್ಚಯದ ಲಿಫ್ಟ್ ನಲ್ಲಿ ನಿಂತಿದ್ದ ವೇಳೆ ಸಾಕು ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ. ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.

ಸಾಮಾನ್ಯವಾಗಿ ಬೀದಿ ನಾಯಿಗಳಿಂದ ಮಕ್ಕಳಿಗೆ ಅಪಾಯವಾಗುತ್ತಿತ್ತು, ಆದರೆ ಈಗ ಸಾಕು ನಾಯಿಗಳು ಕೂಡ ಮಕ್ಕಳ ಮೇಲೆ ದಾಳಿ ಮಾಡಲು ಆರಂಭಿಸಿವೆ. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಸಾಕು ನಾಯಿಗಳು ವಿಶೇಷವಾಗಿ ಹೆಚ್ಚು ಆಕ್ರಮಣಕಾರಿ ಆಗುತ್ತಿವೆ. ಇಂತಹ ಪ್ರಕರಣಗಳು ದೆಹಲಿ-ಎನ್‌ಸಿಆರ್‌ನಲ್ಲಿ ನಿರಂತರವಾಗಿ ಬರುತ್ತಿದ್ದು, ಸಾಕು ನಾಯಿಯು ಮಾಲೀಕರ ಮುಂದೆ ಮಕ್ಕಳು ಮತ್ತು ಹಿರಿಯರ ಮೇಲೆ ದಾಳಿ ಮಾಡಿದೆ. ಲಿಫ್ಟ್‌ನಲ್ಲೂ ಇಂತಹ ಹಲವು ಘಟನೆಗಳು ನಡೆದಿವೆ.

ಈ ಪ್ರಕರಣ ಬಿಸ್ರಖ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು. ನೋಯ್ಡಾ ಪ್ರದೇಶದ ಲಾ ರೆಸಿಡೆನ್ಸಿಯ ವಸತಿ ಸಮುಚ್ಚಯದ ಲಿಫ್ಟ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಜೊತೆಗೆ ಲಿಫ್ಟ್ ನೊಳಗೆ ಪ್ರವೇಶಿಸಿದ ವೇಳೆ ನಾಯಿಯನ್ನು ಅದರ ಮಾಲಕ ಲಿಫ್ಟ್ ನೊಳಗೆ ತಂದಿದ್ದಾರೆ ಈ ವೇಳೆ ಬಾಲಕನ ಕೈಗೆ ನಾಯಿ ಕಚ್ಚಿ ಗಾಯಗೊಳಿಸಿದೆ, ಕೂಡಲೇ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ ಇದುವರೆಗೆ ಒಟ್ಟು ನಾಲ್ಕು ಚುಚ್ಚುಮದ್ದುಗಳನ್ನು ನೀಡಲಾಗಿದೆ ಎಂದು ಪೋಷಕರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಯಿ ಕಚ್ಚುವ ಅನೇಕ ಘಟನೆಗಳು ನಡೆಯುತ್ತಿವೆ. ಅಲ್ಲದೆ ಇತ್ತೀಚೆಗೆ ನಗರದಲ್ಲಿ ನಾಯಿ ಕಡಿತದಿಂದ 8 ತಿಂಗಳ ಮಗು ಸಾವನ್ನಪ್ಪಿತ್ತು. ಗಮನಾರ್ಹವಾದ ವಿಚಾರ ಏನೆಂದರೆ ಸಾಕು ನಾಯಿಗಳ ಕಾಟ ಹೆಚ್ಚುತ್ತಿರುವ ಬಗ್ಗೆ ನೋಯ್ಡಾದಲ್ಲಿ ಹೊಸ ನಾಯಿ ನೀತಿಯನ್ನು ಜಾರಿಗೆ ತರಲಾಗಿದೆ. ಅದರಂತೆ ಸಾಕುಪ್ರಾಣಿಗಳನ್ನು ಸಾಕಲು ನೋಯ್ಡಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ. ಇದಲ್ಲದೆ ಸಾಕು ನಾಯಿ ಕಚ್ಚಿದರೆ ಅದರ ಮಾಲೀಕರಿಂದ ಚಿಕಿತ್ಸಾ ವೆಚ್ಚ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ :ಕೋಲಾರ ಕಡೆ ಮುಖಮಾಡಿದ ಸಿದ್ದುಗೆ ಸಿಕ್ಕಿದ್ದೇ ಶ್ರೀಪಾದ : ಯತ್ನಾಳ್

ಟಾಪ್ ನ್ಯೂಸ್

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾ

1-wwewqewq

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ಇಸ್ಲಾ-ವ-ತಂಝೀಮ್ ನಿರ್ಣಯ

tdy-23

ಮೈ ಮನ ಸೆಳೆಯುವ ದೂದ್‌ಸಾಗರ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-sadsasad

ಸರಣಿ ನಿರ್ಣಾಯಕ ಪಂದ್ಯ: ಆಸೀಸ್ 269ಕ್ಕೆ ಆಲೌಟ್ ಮಾಡಿದ ಟೀಮ್ ಇಂಡಿಯಾ

1-adassad

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಯುನಿಕೋರ್ಟ್‌ ದಿನ

1-ffsdfsf

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

1-qweqw

ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.