ಕಣ್ಣಿನ ಪೊರೆ ನಿವಾರಣೆಗೆ ವರದಾನ ಫೇಕೊ ಇಮಲ್ಸಿಫಿಕೇಶನ್
ಶಸ್ತ್ರಚಿಕಿತ್ಸೆಗೆ ಒಳಗಾದವರು ಬೇಗನೆ ದೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.
Team Udayavani, Feb 6, 2023, 6:00 PM IST
ಡಾ| ಚಾಲ್ಸ್ರ್ ಕೆಲ್ಮನ್ ಕ್ಯಾಟರ್ಯಾಕ್ಟ್ ಆದ ಕಣ್ಣಿನ ಮಸೂರದಿಂದ ಕ್ಯಾಟರ್ಯಾಕ್ಟ್ ಪೀಡಿತ ಭಾಗವನ್ನು ಕರಗಿಸಿ ಅತೀ ಸೂಕ್ಷ್ಮ ಗಾಯದ ಮೂಲಕ ಹೊರತೆಗೆಯುವ ಆವಿಷ್ಕಾರ ಮಾಡಿದರು. ಹಾಗಾಗಿ ಅವರನ್ನು ಫೇಕೊ ಇಮಲ್ಸಿಫಿಕೇಶನ್ ಚಿಕಿತ್ಸೆಯ ಪಿತಾಮಹ ಎಂದು ಕರೆಯಲಾಗುತ್ತದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾಟರ್ಯಾಕ್ಟ್ ಅಥವಾ ಪೊರೆಯಿಂದ ಮಸುಕಾದ ಲೆನ್ಸನ್ನು ಅಲಾó ಸೌಂಡ್ ಸಾಧನ ಬಳಸಿ ಕರಗಿಸಲಾಗುತ್ತದೆ. ಬಳಿಕ ಇಂಜಕ್ಟರನ್ನು ಉಪಯೋಗಿಸಿ ಅದೇ ಜಾಗದಲ್ಲಿ ಹೊಸ ಮಡಚಬಹುದಾದ ಮಸೂರವನ್ನು ಅಳವಡಿಸಲಾಗುವುದು. ಈಗ ಲಭ್ಯವಿರುವ ಸಾಧನಗಳ ಮೂಲಕ ಕೇವಲ 2.2 ಮಿ.ಮೀ. ಅಥವಾ ಅದಕ್ಕಿಂತಲೂ ಕಿರಿದಾದ ಗಾಯದ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಇನ್ನೊಂದು ವೈಶಿಷ್ಟ್ಯವೆಂದರೆ, ಇದರಲ್ಲಿ ಆಪ್ಟಿಕಲ್ ಸೆನ್ಸರ್ ಇರುವುದರಿಂದ ಈ ಶಸ್ತ್ರಚಿಕಿತ್ಸೆ ಅತ್ಯಂತ ಸುರಕ್ಷಿತ. ಅತಿ ಸೂಕ್ಷ್ಮ ಗಾಯವಾದುದರಿಂದ ರೋಗಿ ಬಹಳ ಉತ್ತಮ ದೃಷ್ಟಿ ಪಡೆಯಲು ಸಾಧ್ಯ.
ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ತಾಸುಗಳಲ್ಲಿ ಮನೆಗೆ ಹೋಗಬಹುದು. ಇದು ರೋಗಿಗಳ ಸಮಯವನ್ನು ಉಳಿಸುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದವರು ಬೇಗನೆ ದೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.
ಮೊದಲ ಶಸ್ತ್ರಚಿಕಿತ್ಸೆ
ಸರ್ ಹೆರಾಲ್ಡ್ ರಿಡ್ಲೆ ಎಂಬ ನೇತ್ರ ಶಸ್ತ್ರಚಿಕಿತ್ಸಕ ಪ್ರಪ್ರಥಮವಾಗಿ ಕಣ್ಣಿನ ಒಳಗಿನ ಪೊರೆ ತೆಗೆದು ಅದೇ ಜಾಗದಲ್ಲಿ ಹೊಸ ಮಸೂರ ಅಳವಡಿಸಿದರು. ಇದಕ್ಕೆ ಇಂಟ್ರಾ ಓಕ್ಯುಲರ್ ಲೆನ್ಸ್ ಎನ್ನುತ್ತಾರೆ. ಈಗ ಹೊಸ ತರಹದ ಮಡಚಬಲ್ಲ ಮಸೂರಗಳು ಬಂದಿವೆ. ಎಸ್ಪೆರಿಕ್ ಲೆನ್ಸ್ ಬಳಸುತ್ತೇವೆ. ದೃಷ್ಟಿ ಮಂಜಾಗಿದ್ದಲ್ಲಿ ಟೋರಿಕ್ ಲೆನ್ಸನ್ನು ಬಳಸಬಹುದು. ದೂರ ಮತ್ತು ಹತ್ತಿರದ ದೃಶ್ಯಗಳನ್ನು ನೋಡಲು ಮಲ್ಟಿಫೋಕಲ್ ಲೆನ್ಸನ್ನು ಆಳವಡಿಸಬಹುದು.
ಶಸ್ತ್ರಚಿಕಿತ್ಸೆಯ ಬಳಿಕ
• •ಡಾ| ಪ್ರಶಾಂತ್‌ಕುಮಾರ್ ಶೆಟ್ಟಿ ಕಣ್ಣಿನ ವೈದ್ಯರು, ಪ್ರಶಾಂತ್ ನೇತ್ರಾಲಯ, ಬಂಟ್ಸ್ ಹಾಸ್ಟೆಲ್ ರಸ್ತೆ, ಮಂಗಳೂರು
ಯಾರಿಗೆಲ್ಲ ಬರಬಹುದು?
·ಕಬ್ಬಿಣದ ಕುಲುಮೆ, ಗಾಜಿನ ಕಾರ್ಖಾನೆಯ ಕೆಲಸ ಮಾಡುವವರು.
·ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿ ಶಾಕ್‌ನಿಂದ ಕೂಡ ಪೊರೆ ಬರಬಹುದು.
·ಕಣ್ಣಿಗೆ ಏಟು ಬಿದ್ದಾಗ ಪೊರೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಲೆ ಹೊಟ್ಟಿನ ಸಮಸ್ಯೆ ಕಾಡುತ್ತಿದೆಯಾ? ಈ ಸಮಸ್ಯೆ ನಿವಾರಣೆಗೆ ಸುಲಭ ಮನೆಮದ್ದು
ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಮೂತ್ರಪಿಂಡ ವೈಫಲ್ಯ ಸಮಸ್ಯೆ ಹೇಗೆ ಉಂಟಾಗಲಿದೆ?
international women’s day 2023; ನಾರೀ ನಾಟಿ ವೈದ್ಯಾಯ ನಮಃ
ರುದ್ರಾಕ್ಷಿಯಲ್ಲಿದೆ ಮಹತ್ವದ ಶಕ್ತಿ;ಎಚ್ಚರ…ರುದ್ರಾಕ್ಷಿಯನ್ನು “ಈ ಸ್ಥಳಗಳಲ್ಲಿ ಧರಿಸಲೇಬಾರದು”
ಮೂತ್ರಪಿಂಡ (ಕಿಡ್ನಿ); ಆರೋಗ್ಯ ಅಭಿಯಾನ