
ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ: ಆರೋಪಿಯಾದ ಪೊಲೀಸ್ ಡಾಗ್ ಫೋಟೋ ವೈರಲ್
Team Udayavani, Jan 30, 2023, 10:44 AM IST

ವಾಷಿಂಗ್ಟನ್: ಏನಾದರೂ ಕಳ್ಳತನವಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಪೊಲೀಸರು ತನಿಖೆ ನಡೆಸಿ, ಆರೋಪಿ ಸೆರೆಸಿಕ್ಕ ಬಳಿಕ ವಿಚಾರಣೆ ನಡೆಸುವುದು ಕ್ರಮ. ಆದರೆ ಇಲ್ಲೊಂದು ನಾಯಿ ಆಹಾರ ಕದ್ದು ತಿಂದ ಕಾರಣಕ್ಕಾಗಿ ಆರೋಪಿ ಸ್ಥಾನದಲ್ಲಿ ನಿಂತಿದೆ.
ಅಮೆರಿಕಾದ ಮಿಚಿಗನ್ ರಾಜ್ಯದ ವಾಯೈನ್ಟೊಂಟ್ಟೆ ಪೊಲೀಸ್ ಇಲಾಖೆ ( Wyandotte Police Department) ಪೊಲೀಸ್ ಡಾಗ್ “ಐಸ್” ಆಹಾರವನ್ನು ಕದ್ದು ತಿಂದ ಆರೋಪಿ.!
ಜ.12 ರಂದು ವಾಯೈನ್ಟೊಂಟ್ಟೆ ಪೊಲೀಸ್ ಠಾಣೆಗೆ ಪ್ರಕರಣವೊಂದರ ಸಂಬಂಧ ಸಹಾಯ ಮಾಡಲು ಬಾರ್ವಿಗ್ ಎಂಬ ಅಧಿಕಾರಿ ಬಂದಿದ್ದರು. ವಿಶ್ರಾಂತಿ ಕೋಣೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಮತ್ತೊಬ್ಬ ಅಧಿಕಾರಿ ಬಾರ್ವಿಗ್ ಅವರನ್ನು ಕರೆದಿದ್ದಾರೆ. ಈ ವೇಳೆ ಟೇಬಲ್ ಮೇಲೆ ಊಟ ಇಟ್ಟು ಹೋಗಿದ್ದಾರೆ. ಕೆಲ ಸಮಯದ ಬಳಿಕ ಬಂದು ನೋಡಿದಾಗ ಅರ್ಧ ತಿಂದು ಹೋದ ಊಟ ಪೂರ್ತಿ ಖಾಲಿಯಾಗಿದೆ.
ಪಕ್ಕದಲ್ಲೇ ಇದ್ದ ಪೊಲೀಸ್ ಡಾಗ್ ಏನೋ ತಿಂದು ಕೈ ನೆಕ್ಕುವಂತೆ ತನ್ನ ಕಾಲುಗಳನ್ನು ನೆಕ್ಕುತ್ತಿತ್ತು. ಠಾಣೆಯ ಪೊಲೀಸರು ಪೊಲೀಸ್ ಡಾಗ್ ಐಸ್ ನನ್ನು ಆರೋಪಿ ಸ್ಥಾನದಲ್ಲಿ ಕೂರಿಸಿದ್ದಾರೆ.
ಇಡೀ ಘಟನೆಯ ಬಗ್ಗೆ ಬರೆದುಕೊಂಡು ಐಸ್ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಹಾಕಿದ್ದು, ಈ ಪೋಸ್ಟ್ 25 ಸಾವಿರಕ್ಕೂ ಹೆಚ್ಚಿನ ಲೈಕ್ಸ್, 14 ಸಾವಿರಕ್ಕೂ ಹೆಚ್ಚಿನ ಮಂದಿ ಹಂಚಿಕೊಂಡಿದ್ದಾರೆ.
ಐಸ್ ಆಹಾರ ಕದ್ದ ಆರೋಪ ಸಾಬೀತು ಆಗುವವರೆಗೂ ಆತ ಮುಗ್ಧ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ವೀಲಿಂಗ್: ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲು

ಸ್ಪಾರ್ಕ್ ಗನ್ ಹಿಡಿದು ಪೋಸ್ ಕೊಡುವಾಗ ವಧುವಿನ ಮುಖಕ್ಕೆ ತಾಗಿದ ಬೆಂಕಿ ಕಿಡಿ: ವಿಡಿಯೋ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು