ಅರೆಬರೆ ಕಾಮಗಾರಿ : ಪೊಲ್ಲುಂಡಿ ಸೇತುವೆಯ ಎರಡೂ ಬದಿ ಕೆಸರು ಗುಂಡಿ!

Team Udayavani, May 24, 2021, 10:15 PM IST

ಅರೆಬರೆ ಕಾಮಗಾರಿ : ಪೊಲ್ಲುಂಡಿ ಸೇತುವೆಯ ಎರಡೂ ಬದಿ ಕೆಸರು ಗುಂಡಿ!

ಕಾರ್ಕಳ: ರೆಂಜಾಳ ಗ್ರಾಮದ ಪೊಲ್ಲುಂಡಿ ಎಂಬಲ್ಲಿ 1 ಕೋ.ರೂ. ವೆಚ್ಚದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸೇತುವೆಯ ಎರಡೂ ಬದಿಯಲ್ಲಿ ಸಂಪ ರ್ಕ ರಸ್ತೆಯ ಅರೆಬರೆ ಕಾಮಗಾರಿಯಿಂದಾಗಿ ಸಾರ್ವ ಜನಿಕರಿಗೆ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 5 ಕೋ.ರೂ. ವೆಚ್ಚದಲ್ಲಿ ರೆಂಜಾಳ ರಸ್ತೆಯಲ್ಲಿ ಕಾಮಗಾರಿ ನಡೆದಿದೆ. ಇದೇ ರಸ್ತೆಯಲ್ಲಿ ಪ್ರತ್ಯೇಕ 1 ಕೋ.ರೂ. ಅನುದಾನದಲ್ಲಿ ಪೊಲ್ಲುಂಡಿ ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾಗಿದ್ದರೂ ಸೇತುವೆಗೆ ಹೊಂದಿಕೊಂಡ ಎರಡೂ ಕಡೆಯಲ್ಲಿ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಿಲ್ಲ. ಮಣ್ಣು ತುಂಬಿ ಹಾಗೇ ಅರ್ಧಕ್ಕೆ ಬಿಟ್ಟಿದ್ದರಿಂದ ಕೆಸರು ತುಂಬಿ ಹೊಂಡಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಸೇತುವೆ ಪಕ್ಕದ ರಸ್ತೆ ಅವ್ಯವಸ್ಥೆ ಕುರಿತು ಸ್ಥಳೀಯರು ಎಂಜಿನಿಯರ್‌, ಗುತ್ತಿಗೆದಾರರ ಗಮನಕ್ಕೆ ಈ ಹಿಂದೆ ಹಲವು ಬಾರಿ ತಂದಿದ್ದಾರೆ. ಬಳಿಕವೂ ಸುಧಾರಿಸಿಲ್ಲ. ಈಗ ಕರೆ ಮಾಡಿದರೆ ಕರೆ ಸ್ವೀಕರಿಸದೆ, ಪ್ರತಿಕ್ರಿಯೆ ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಸ್ಥಳಿಯ ಗ್ರಾ.ಪಂ. ಸದಸ್ಯ ರಮೇಶ್‌ ರೆಂಜಾಳ ತಿಳಿಸಿದ್ದು, ಮಳೆಗಾಲ ಪ್ರಾರಂಭವಾಗುತ್ತಿದೆ. ಅದಕ್ಕೂ ಮೊದಲು ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ದೂರು ಕೊಟ್ಟರೂ ಪ್ರತಿಕ್ರಿಯೆ ಇಲ್ಲ
ಮುಖ್ಯ ರಸ್ತೆಯಲ್ಲಿ ಇನ್ನೊಂದು ಕಡೆಯೂ 1 ಕೋ.ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ ಆಗಿದೆ. ಕಾಮಗಾರಿ ಆದ ಬೆನ್ನಲ್ಲೇ ಡಾಮರು ಎದ್ದು ಹೋಗಿದೆ.

ರಸ್ತೆ ಬದಿ ಚರಂಡಿಯೂ ನಿರ್ಮಿಸದೆ, ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ. ಈ ಬಗ್ಗೆ ಎಂಜಿನಿಯರ್‌, ಗುತ್ತಿಗೆ ದಾರರಿಗೆ ಸ್ಥಳೀಯರು ದೂರು ನೀಡಿದ್ದರು. ಎಲ್ಲವನ್ನೂ ಸರಿಪಡಿಸುವ ಭರವಸೆ ದೊರಕಿತ್ತು. ಬಳಿಕ ಅವರದ್ಯಾರದ್ದೂ ಪ್ರತಿಕ್ರಿಯೆ ಇಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರೊಬ್ಬರು. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿ 1 ಕೋ.ರೂ. ವೆಚ್ಚದ ಕಾಮಗಾರಿ ವ್ಯರ್ಥವಾಗಲಿದೆ ಎಂದರು.

ಶೀಘ್ರ ಪೂರ್ಣ
ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಬಾಕಿಯಿದೆ. ಈ ಕೂಡಲೇ ಪೂರ್ಣ ಗೊಳಿಸುವ ಕೆಲಸ ಮಾಡಲಾಗು ವುದು. ಈ ಬಗ್ಗೆ ಎಂಜಿನಿಯರ್‌ ಅವರ ಗಮನಕ್ಕೆ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆ ನಿವಾರಿಸುತ್ತೇವೆ.

-ಆಲ್ವಿನ್‌, ಎಇಇ, ಪಿಎಂಜಿಎಸ್‌ವೈ, ಉಡುಪಿ ಜಿಲ್ಲೆ

ಟಾಪ್ ನ್ಯೂಸ್

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

goa

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

netaji subhash chandra bose

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿ: 4 ಹಂತಗಳ ಕಾರ್ಯಕ್ರಮ

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿ: 4 ಹಂತಗಳ ಕಾರ್ಯಕ್ರಮ

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಒಂದು ವರ್ಷದಿಂದ ಪೂರ್ಣಕಾಲಿಕ ಪಿಡಿಒ ಇಲ್ಲ

ಒಂದು ವರ್ಷದಿಂದ ಪೂರ್ಣಕಾಲಿಕ ಪಿಡಿಒ ಇಲ್ಲ

ನಗರ ಪೊಲೀಸ್‌ ಬೀಟ್‌ ಮತ್ತಷ್ಟು ಚುರುಕು; ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ವಿಕೃತರ ಕಾಟ

ನಗರ ಪೊಲೀಸ್‌ ಬೀಟ್‌ ಮತ್ತಷ್ಟು ಚುರುಕು; ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ವಿಕೃತರ ಕಾಟ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

22power

ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್‌ ಪೂರೈಕೆಗೆ ಮನವಿ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

21plastic

ಪ್ಲಾಸ್ಟಿಕ್‌ ಧ್ವಜ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ

20life

ನಿತ್ಯ ಜೀವನಕ್ಕೆ ಸಾಹಿತ್ಯ ಪೂರಕವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.