ಒಲಿಂಪಿಕ್ಸ್‌ ತಾರೆಯರ ಜತೆ ಮೋದಿ ಕುಶಲ : ಆ್ಯತ್ಲೀಟ್‌ಗಳಿಗೆ ಧೈರ್ಯ ತುಂಬಿದ ಪ್ರಧಾನಿ


Team Udayavani, Jul 14, 2021, 7:25 AM IST

ಒಲಿಂಪಿಕ್ಸ್‌ ತಾರೆಯರ ಜತೆ ಮೋದಿ ಕುಶಲ : ಆ್ಯತ್ಲೀಟ್‌ಗಳಿಗೆ ಧೈರ್ಯ ತುಂಬಿದ ಪ್ರಧಾನಿ

ಹೊಸದಿಲ್ಲಿ : ಟೋಕಿಯೊಗೆ ಹೊರಟಿರುವ ದೇಶದ ಪ್ರಮುಖ ಆ್ಯತ್ಲೀಟ್‌ಗಳೊಂದಿಗೆ ಪ್ರಧಾನಿ ಮೋದಿ ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದ್ದಾರೆ. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನಹರಿಸಿ ಎಂದು ಧೈರ್ಯ ತುಂಬಿದ್ದಾರೆ.

ಮೋದಿ ಹೇಳಿದ್ದು
ನಿಮ್ಮನ್ನೆಲ್ಲ ಮುಖತಃ ಭೇಟಿಯಾಗುವ ಇಚ್ಛೆಯಿದೆ. ಟೋಕಿಯೊ ದಿಂದ ವಾಪಸ್‌ ಬಂದ ಮೇಲೆ ಖಂಡಿತ ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ. ದೇಶ ನಿಮ್ಮ ಯಶಸ್ಸಿಗಾಗಿ ತುಡಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ದೇಶದ ಭಾವನೆಗಳು ನಿಮ್ಮೊಂದಿಗಿವೆ.

ಕ್ರೀಡಾಪಟುಗಳು ಹೇಳಿದ್ದು
ದೀಪಿಕಾ ಕುಮಾರಿ, ವಿಶ್ವ ನಂ.1 ಬಿಲ್ಗಾರ್ತಿ
ನನ್ನ ಕ್ರೀಡಾಜೀವನ ಆರಂಭ ದಿಂದಲೂ ಉತ್ತಮವಾಗಿತ್ತು. ಮೊದಲು ಬಿದಿರಿನ ಬಿಲ್ಲು ಬಳಸುತ್ತಿದ್ದೆ. ನಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅಭ್ಯಾಸದ ಮೇಲೆ ಬಹಳ ಗಮನ ಹರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ.
**
ಪಿ.ವಿ. ಸಿಂಧು, ಪ್ರಖ್ಯಾತ ಬ್ಯಾಡ್ಮಿಂಟನ್‌ ಪಟು
ಅಭ್ಯಾಸ ಚೆನ್ನಾಗಿ ಸಾಗಿದೆ. ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಅಂಕಣ ಗಳಿವೆ. ಅದಕ್ಕಾಗಿ ದೊಡ್ಡ ಅಂಕಣಗಳಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಆ್ಯತ್ಲೀಟ್‌ಗಳು ಕಠಿನ ಆಹಾರ ಪದ್ಧತಿ ಪಾಲಿಸ ಬೇಕಾಗುತ್ತದೆ. ಐಸ್‌ಕ್ರೀಮ್‌ ತಿನ್ನುವು ದನ್ನು ನಿಗ್ರಹಿಸಿದ್ದೇನೆ.
**
ಸಾಜನ್‌ ಪ್ರಕಾಶ್‌, ಖ್ಯಾತ ಈಜುಪಟು
ನನ್ನ ತಾಯಿ ಶಾಂತಿಮೋಳ್‌ ನನಗೆ ಎಲ್ಲ ಒತ್ತಡಗಳನ್ನು ಮೀರಿ ಬದುಕಲು ಕಲಿಸಿದರು. ಕೊರೊನಾದಿಂದ 18 ತಿಂಗಳು ಈಜುಕೊಳ ತೆರೆದಿರಲಿಲ್ಲ. ಇದು ಬಹಳ ಹತಾಶೆಗೊಳಪಡಿಸಿತ್ತು. ಆದರೆ ಎಲ್ಲರ ಬೆಂಬಲದಿಂದ ಸಂಕಟ ಗಳನ್ನು ಮೀರಿ ನಿಲ್ಲಲು ಸಾಧ್ಯವಾಗಿದೆ.
**
ಮೇರಿ ಕೋಮ್‌, ವಿಶ್ವಶ್ರೇಷ್ಠ ಮಹಿಳಾ ಬಾಕ್ಸರ್‌
ನನಗೆ ಬಾಕ್ಸರ್‌ಗಳಲ್ಲಿ ಅಮೆರಿಕದ ದಂತಕಥೆ ಮೊಹಮ್ಮದ್‌ ಅಲಿ ಬಹಳ ಇಷ್ಟ. ಅವರಿಂದ ನಾನು ಬಹಳ ಪ್ರೇರಣೆ ಪಡೆದಿದ್ದೇನೆ. ನಾನು ಸ್ಪರ್ಧಿಸುವಾಗ ಹುಕ್‌ ಶಾಟ್‌ಗಳನ್ನು ಉತ್ತಮವಾಗಿ ಪ್ರಯೋಗಿಸುತ್ತೇನೆ. ಅದು ನನಗೆ ಇಷ್ಟದ ಹೊಡೆತ.
**
ಸಾನಿಯಾ ಮಿರ್ಜಾ, ದೇಶದ ಶ್ರೇಷ್ಠ ಟೆನಿಸ್‌ ಆಟಗಾರ್ತಿ
ನಾನು 25 ವರ್ಷಗಳ ಹಿಂದೆ ಟೆನಿಸ್‌ ಆಟ ಆರಂಭಿಸಿದಾಗ ದೇಶದಲ್ಲಿ ಅನೇಕರು ಟೆನಿಸನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಒಲಿಂಪಿಕ್ಸ್‌ ನಲ್ಲಿ ಅಂಕಿತಾ ರೈನಾ ನನ್ನ ಜತೆಗಾರ್ತಿ. ಉತ್ತಮ ಫ‌ಲಿತಾಂಶ ತರುವ ಭರವಸೆಯಿದೆ.

ಟಾಪ್ ನ್ಯೂಸ್

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ ಕಬಡ್ಡಿ: ಪುನೇರಿ ಹ್ಯಾಟ್ರಿಕ್‌ ಜಯಭೇರಿ

ಪ್ರೊ ಕಬಡ್ಡಿ: ಪುನೇರಿ ಹ್ಯಾಟ್ರಿಕ್‌ ಜಯಭೇರಿ

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

Charanjit Singh

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

brett lee

ಟೆಸ್ಟ್ ನಾಯಕರಾಗಬಲ್ಲ ನಾಲ್ಕೈದು ಆಟಗಾರರು ಭಾರತ ತಂಡದಲ್ಲಿದ್ದಾರೆ: ಬ್ರೆಟ್ ಲೀ

west indies odi team

ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.