ಪುತ್ತೂರು ಕಂಬಳ ಗದ್ದೆಯಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ ಯುವಕ ವಶಕ್ಕೆ
Team Udayavani, Feb 1, 2023, 5:45 AM IST
ಪುತ್ತೂರು: ಪುತ್ತೂರಿನ ಕೋಟಿ ಚೆನ್ನಯ ಕಂಬಳ ಗದ್ದೆ ಪರಿಸರದಲ್ಲಿ ಯುವಕನೋರ್ವ ಯುವತಿಯ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೊಪ್ಪಿಸಿದ ಮತ್ತು ವಿಚಾರಣೆ ವೇಳೆ ಆತನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಪೊಟೋ ಇರುವುದು ಬೆಳಕಿಗೆ ಬಂದಿದೆ.
ಕುರಿಯ ಮೂಲದ ಯುವಕ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು ಈತ ಕಂಬಳದ ಪರಿಸರದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ. ಈ ಸಂದರ್ಭ ಓರ್ವ ಯುವತಿ ಇದನ್ನು ಗಮನಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಳು. ಕಾರ್ಯಕರ್ತರು ಯುವಕನನ್ನು ಠಾಣೆಗೆ ಕರೆದೊಯ್ದಿದ್ದು, ಯುವಕನ ಮೊಬೈಲ್ ಪರಿಶೀಲನೆ ನಡೆಸಿದಾಗ ಇನ್ನು ಹಲವು ಯುವತಿಯರ ಫೋಟೋಗಳು ಇರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ
ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ