ಕ್ರಮಟೋಸ್ಕ್ ಮೇಲೆ ರಷ್ಯಾ ದಾಳಿ, ತಿರುಗೇಟಿಗೆ ಉಕ್ರೇನ್ ಸಿದ್ಧತೆ : ಸಾವಿನ ಸಂಖ್ಯೆ 52ಕ್ಕೆ
Team Udayavani, Apr 10, 2022, 8:20 AM IST
ಮಾಸ್ಕೋ/ಕೀವ್: ಉಕ್ರೇನ್‌ನ ಕ್ರಮಟೋಸ್ಕ್ ಮೇಲಿನ ರಷ್ಯಾ ಕ್ಷಿಪಣಿ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಧ್ಯಕ್ಷ ವ್ಲೋಡಿಮಿರ್ ಝೆಲೆನ್‌ಸ್ಕಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬುಚಾದಲ್ಲಿನ ನರಮೇಧದ ರೀತಿಯಲ್ಲೇ ಇಲ್ಲಿಯೂ ನಾಗರಿಕರನ್ನು ಗುರಿಯಾಗಿರಿಸಿ ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ಶುಕ್ರವಾರ ನಡೆದ ದಾಳಿಯಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆೆ.
ಆದರೆ ಕ್ರಮಟೋಸ್ಕ್ನ ರೈಲ್ವೇ ನಿಲ್ದಾಣದ ಮೇಲೆ ತಾನು ದಾಳಿ ಮಾಡಿಲ್ಲ ಎಂದು ರಷ್ಯಾ ಹೇಳಿದೆ. ಅಲ್ಲದೆ, ಉಕ್ರೇನ್‌ನ ಕ್ಷಿಪಣಿಯೇ ಇಲ್ಲಿ ಬಿದ್ದಿರಬಹುದು ಎಂಬುದು ಅದರ ವಾದ. ಇದನ್ನು ತಳ್ಳಿಹಾಕಿರುವ ಉಕ್ರೇನ್, ರಷ್ಯಾದ ಈ ನರಮೇಧದ ಬಗ್ಗೆ ಇಡೀ ಜಗತ್ತು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದಿದೆ.
ಕ್ರಮಟೋಸ್ಕ್ನ ರೈಲ್ವೆ ನಿಲ್ದಾಣದಿಂದ ಸುಮಾರು 4000 ಮಂದಿ ದೇಶ ಬಿಡಲು ತಯಾರಾಗಿದ್ದರು. ರೈಲಿಗಾಗಿ ಕಾಯುತ್ತಿದ್ದವರ ಮೇಲೆ ದಿಢೀರ್ ಆಗಿ ಕ್ಷಿಪಣಿ ಬಿದ್ದಿತ್ತು. ಮಕ್ಕಳೂ ಸೇರಿದಂತೆ ಇದುವರೆಗೆ 52 ಮಂದಿ ಸಾವನ್ನಪ್ಪಿದ್ದಾರೆ. ಕ್ರಮಟೋಸ್ಕ್ನ ಈ ದಾಳಿ ಬಗ್ಗೆ ಜಾಗತಿಕ ಸಮುದಾಯ ಕಂಬನಿ ಮಿಡಿದಿದೆ.
ಉಕ್ರೇನ್‌ಗೆ ಜಾನ್ಸನ್ ಭೇಟಿ: ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಶನಿವಾರ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ಅಧ್ಯಕ್ಷ ಝೆಲೆನ್‌ಸ್ಕಿ ಜತೆಗೆ ಮಾತುಕತೆ ನಡೆಸಿರುವ ಜಾನ್ಸನ್, ಧೈರ್ಯ ತುಂಬಿದ್ದಾರೆ. ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ನಂತರ ಜಾಗತಿಕ ನಾಯಕರೊಬ್ಬರು ಉಕ್ರೇನ್‌ಗೆ ಖುದ್ದಾಗಿ ಭೇಟಿ ನೀಡಿರುವುದು ಇದೇ ಮೊದಲು. ವಿಶೇಷವೆಂದರೆ, ಯಾರಿಗೂ ಹೇಳದೇ, ದಿಢೀರ್ ಆಗಿ ಈ ಪ್ರವಾಸ ನಡೆದಿದೆ. ಪ್ರಯಾಣದ ಬಗ್ಗೆ ಬ್ರಿಟನ್ ಮಾಹಿತಿ ನೀಡಿದ್ದು, ಇವರಿಬ್ಬರ ಮಾತುಕತೆಯ ಫೋಟೋವನ್ನೂ ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ
ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು