20 ಸಾವಿರದೊಳಗಿನ 5ಜಿ ಮೊಬೈಲ್ ಸ್ಯಾಮ್ ಸಂಗ್ ಗೆಲಾಕ್ಸಿ ಎಂ33


Team Udayavani, Jun 23, 2022, 4:48 PM IST

20 ಸಾವಿರದೊಳಗಿನ 5ಜಿ ಮೊಬೈಲ್ ಸ್ಯಾಮ್ ಸಂಗ್ ಗೆಲಾಕ್ಸಿ ಎಂ33

ಸ್ಯಾಮ್ ಸಂಗ್ ಮೊಬೈಲ್ ಕಂಪನಿಯು ಎಂ ಸರಣಿಗೆ ಇನ್ನೊಂದು ಸೇರ್ಪಡೆ ಎಂ 33 5ಜಿ. ಇದೊಂದು ಮಧ್ಯಮ ದರ್ಜೆಯ ಮೊಬೈಲಾಗಿದ್ದು, ಇದರ ಗುಣ ವಿಶೇಷಣಗಳ ವಿವರ ಇಲ್ಲಿದೆ.

ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 17,999 ರೂ. ಹಾಗೂ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 19,499 ರೂ. ಇದೆ.

ವಿನ್ಯಾಸ : ಇದರ ತೂಕ 215 ಗ್ರಾಂ ಇದೆ. ಹಾಗಾಗಿ ತುಸು ಭಾರ ಇದೆ. ಎಂ 53 5ಜಿ ಮೊಬೈಲ್ ಬಹಳ ಸ್ಲಿಮ್ ಆಗಿತ್ತು. ಅದನ್ನೇ ನೆನೆಸಿಕೊಂಡು ಇದನ್ನು ನೋಡಿದರೆ ವಿನ್ಯಾಸದಲ್ಲಿ ಅದಕ್ಕೂ ಇದಕ್ಕೂ ಬಹಳ ಭಿನ್ನತೆ ಇದೆ. ಅದು ಬಹಳ ಸ್ಲಿಮ್ ಆದರೆ ಇದು ಸ್ವಲ್ಪ ದಪ್ಪ ಇದೆ. ಹಿಂಬದಿ ಪಾಲಿಕಾರ್ಬೊನೆಟ್ ನಿಂದ ಮಾಡಿದ್ದಾಗಿದ್ದು, ಫ್ರೇಮ್ ಕೂಡ ಪ್ಲಾಸ್ಟಿಕ್ ಆಗಿದೆ. ಹಿಂಬದಿಯ ಎಡ ಮೂಲೆಯಲ್ಲಿ ನಾಲ್ಕು ಲೆನ್ಸಿನ ಕ್ಯಾಮರಾ ಸೆಟಪ್ ಇದೆ. ಬಲಬದಿಯಲ್ಲಿ ಆನ್ ಅಂಡ್ ಆಫ್ ಬಟನ್‌ನಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದರ ಮೇಲೆ ಧ್ವನಿ ಹೆಚ್ಚಿಸುವ ಕಡಿಮೆ ಮಾಡುವ ಬಟನ್ ಇದೆ. ತಳ ಬದಿಯಲ್ಲಿ, ಟೈಪ್ ಸಿ ಪೋರ್ಟ್, 3.5 ಎಂ.ಎ. ಪೋರ್ಟ್, ಸ್ಪೀಕರ್ ಇದೆ.

ಪರದೆ : 6.6 ಇಂದಿನ ಎಫ್‌ಎಚ್‌ಡಿ ಪ್ಲಸ್ ಪರದೆ ಇದೆ. ಪರದೆಯ ಮಧ್ಯದಲ್ಲಿ ವಾಟರ್ ಡ್ರಾಪ್ ಡಿಸ್‌ಪ್ಲೇ ಇದೆ. ಪರದೆಯ ರಿಫ್ರೆಶ್‌ರೇಟ್ 120 ಹರ್ಟ್ಜ್ ಇದೆ. ಆದರೆ ಇಷ್ಟು ಹಣ ಕೊಟ್ಟರು ಸಹ ಅಮೋಲೆಡ್ ಪರದೆ ಇಲ್ಲ! ಎಲ್ ಸಿ ಡಿ ಪರದೆ ಅಳವಡಿಸಲಾಗಿದೆ. ಪರದೆಗೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ. ಸ್ಯಾಮ್ ಸಂಗ್ ಸಾಮಾನ್ಯವಾಗಿ ಈ ದರದ ಫೋನ್ ಗಳಿಗೆ ಅಮೋಲೆಡ್ ಪರದೆ ಹಾಕುತ್ತಿತ್ತು. ಇದರಲ್ಲಿ 5ಜಿ ಸೌಲಭ್ಯ ನೀಡಿರುವುದರಿಂದ ವೆಚ್ಚ ತೂಗಿಸಲು ಪರದೆ, ವಿನ್ಯಾಸದಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಂಡಿದೆ ಅನಿಸುತ್ತದೆ. ಇದ್ದುದರಲ್ಲಿ ಎಲ್ ಸಿ ಡಿ ಪರದೆಯ ಗುಣಮಟ್ಟ ಪರವಾಗಿಲ್ಲ. ರಿಫ್ರೆಶ್‌ರೇಟ್ ಚೆನ್ನಾಗಿರುವುದರಿಂದ ಪರದೆಯನ್ನು ಸರಿಸಿದಾಗ ಅಡೆತಡೆ ಕಂಡು ಬರುವುದಿಲ್ಲ.

ಪ್ರೊಸೆಸರ್ : ಇದರಲ್ಲಿ ಸ್ಯಾಮ್ಸಂಗ್ ತಯಾರಿಕೆಯ ಎಕ್ಸಿನಾಸ್ 1280 ಪ್ರೊಸೆಸರ್ ಅಳವಡಿಸಲಾಗಿದೆ.ನ ಇದು 12 ಬ್ಯಾಂಡ್‌ಗಳ 5ಜಿ ನೆಟ್ ವರ್ಕ್ ಅನ್ನು ಬೆಂಬಲಿಸುತ್ತದೆ. 16 ಜಿಬಿವರೆಗೆ ರ್ಯಾಮ್ ವಿಸ್ತರಣೆ ಮಾಡಿಕೊಳ್ಳಬಹುದು. 5 ಎನ್‌ಎಂ ಪ್ರೊಸೆಸರ್ ಇದಾಗಿದ್ದು, ಮೊಬೈಲ್ ಹೆಚ್ಚು ಬಿಸಿಯಾಗದಂತೆ ತಡೆಯಲು ಪವರ್ ಕೂಲಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದ್ ಮಧ್ಯಮ ದರ್ಜೆಯ ಫೋನಿನಲ್ಲಿ ನಿರೀಕ್ಷಿಸಬಹುದಾದ ವೇಗದ ಕಾರ್ಯಾಚರಣೆ ತೋರುತ್ತದೆ. ಆಂಡ್ರಾಯ್ಡ್ 12 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಸ್ಯಾಮ್‌ಸಂಗ್ ನ ಒನ್ ಯೂಐ 4 ಸೇರಿಸಲಾಗಿದೆ.

ಇದನ್ನೂ ಓದಿ : ಇತಿಹಾಸ ಓದಿಕೊಳ್ಳಿ : ಸಚಿವ ಕೋಟ ಟ್ವೀಟ್ ಗೆ ದಿನೇಶ್ ಗುಂಡೂರಾವ್ ತಿರುಗೇಟು

ಕ್ಯಾಮರಾ : 50 ಮೆ.ಪಿ ಮುಖ್ಯ ಕ್ಯಾಮರಾ ಇದ್ದು, ಇದಕ್ಕೆ 5 ಮೆಪಿ, 2 ಮೆಪಿ, 2 ಮೆಪಿ ಹೆಚ್ಚುವರಿ ಲೆನ್ಸ್ ಗಳನ್ನು ನೀಡಲಾಗಿದೆ. ಮುಂಬದಿ ಕ್ಯಾಮರಾ 8 ಮೆ.ಪಿ. ಇದೆ. ಹಿಂಬದಿ ಕ್ಯಾಮರಾ ಚಿತ್ರ ಹಾಗೂ ವಿಡಿಯೋ ಗುಣಮಟ್ಟ ಈ ದರಕ್ಕೆ ಹೋಲಿಸಿದರೆ ಪರವಾಗಿಲ್ಲ. ಹೊರಾಂಗಣದಲ್ಲಿ ಉತ್ತಮವಾಗಿ ಚಿತ್ರಗಳು ಮೂಡಿಬಂದವು. ಮಂದ ಬೆಳಕಿನ ಚಿತ್ರಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ. ಮುಂಬದಿ ಕೇವಲ 8 ಮೆ.ಪಿ. ಲೆನ್ಸ್ ಇದ್ದು, ಅದರಲ್ಲಿ ಹೆಚ್ಚಿನ ಗುಣಮಟ್ಟ ನಿರೀಕ್ಷಿಸಲಾಗದು. ಕನಿಷ್ಟ 16 ಮೆಪಿ ಕ್ಯಾಮರಾ ಅಗತ್ಯವಿತ್ತು.

ಬ್ಯಾಟರಿ : ಸ್ಯಾಮ್ ಸಂಗ್ ಮೊಬೈಲ್ ಗಳ ಪ್ಲಸ್ ಪಾಯಿಂಟ್ ಎಂದರೆ ದೊಡ್ಡ ಬ್ಯಾಟರಿ. ಇದರಲ್ಲಿ 6000 ಎಂಎಎಚ್ ಬ್ಯಾಟರಿ ಇದೆ. ಎರಡು ದಿನಗಳ ಸಾಮಾನ್ಯ ಬಳಕೆಗೆ ಅಡ್ಡಿಯಿಲ್ಲ. ಆದರೆ ಇದರ ಜೊತೆ ಚಾರ್ಜರ್ ಕೊಟ್ಟಿಲ್ಲ. 25 ವ್ಯಾಟ್ಸ್ ಚಾರ್ಜರ್ ಅನ್ನು ಇದು ಬೆಂಬಲಿಸುತ್ತದೆ. 25 ವ್ಯಾಟ್ಸ್ ಚಾರ್ಜರ್ ನಲ್ಲಿ 6000 ಎಂಎಎಚ್ ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 1 ಗಂಟೆ 35 ನಿಮಿಷ ಸಮಯ ಹಿಡಿಯುತ್ತದೆ. 30 ನಿಮಿಷ ಚಾರ್ಜ್ ಮಾಡಿದರೆ 38% ಚಾರ್ಜ್ ಆಗುತ್ತದೆ. 60 ನಿಮಿಷಕ್ಕೆ 73% ಚಾರ್ಜ್ ಆಗುತ್ತದೆ.

ಒಟ್ಟಾರೆ, ಈ ಮೊಬೈಲ್ ಬಗ್ಗೆ ಹೇಳುವುದಾದರೆ 20 ಸಾವಿರ ರೂ.ಗಳೊಳಗೆ 5ಜಿ ಸೌಲಭ್ಯ ಇರುವ ಮೊಬೈಲ್ ಇದು. 5ಜಿ ಇರುವುದರಿಂದ ಪರದೆ, ಪ್ರೊಸೆಸರ್, ವಿನ್ಯಾಸದಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. 5ಜಿ ಇರಬೇಕು. 20 ಸಾವಿರದೊಳಗಿನ ಬಜೆಟ್ ಇದ್ದು, ಸ್ಯಾಮ್ ಸಂಗ್ ಮೊಬೈಲ್ ಬೇಕು ಎನ್ನುವವರು ಇದನ್ನು ಪರಿಗಣಿಸಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-samsung

ಬಜೆಟ್ ದರದಲ್ಲಿ 5G ಫೋನ್: Samsung Galaxy M14 5G

OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ ಇಲ್ಲಿದೆ!

OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ಸ್ ಇಲ್ಲಿದೆ!

ಮೊಬೈಲ್‌ ಬಳಕೆದಾರರ ನೆರವಿಗಾಗಿ ಸಂಚಾರ್‌ ಸಾಥಿ

ಮೊಬೈಲ್‌ ಬಳಕೆದಾರರ ನೆರವಿಗಾಗಿ ಸಂಚಾರ್‌ ಸಾಥಿ

whatsapp

WhatsAppನಲ್ಲಿನ್ನು “ಸಂದೇಶ ತಿದ್ದುವ” ಅವಕಾಶ

TATA CNG

TATA ಆಲ್ಟ್ರೋಜ್‌ ಸಿಎನ್‌ಜಿ – ಅವಳಿ ಸಿಲಿಂಡರ್‌ ಸಿಎನ್‌ಜಿ ತಂತ್ರಜ್ಞಾನವಿರುವ ಕಾರು

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ

ಹಣಕಾಸು ವಂಚನೆ: ಮುಂಬಯಿ ಉದ್ಯಮಿ ವಿಶ್ವನಾಥ್‌ ಶೆಟ್ಟಿ ಬಂಧನ

ಹಣಕಾಸು ವಂಚನೆ: ಮುಂಬಯಿ ಉದ್ಯಮಿ ವಿಶ್ವನಾಥ್‌ ಶೆಟ್ಟಿ ಬಂಧನ