ಸಪೋಟ ಕೃಷಿ ಹೇಗೆ ? ನಿರ್ವಹಣೆ ಬಲು ಸುಲಭ
ಸಪೋಟ ಮಧ್ಯಮಗಾತ್ರದ ಮರವಾಗಿದ್ದು, ತಿಳಿ ಹಸುರು ಬಣ್ಣದ ಎಲೆಗಳನ್ನು ಹೊಂದಿವೆ.
Team Udayavani, Nov 27, 2020, 4:27 PM IST
ಚಿಕ್ಕು ಅಥವಾ ಸಪೋಟ ಪ್ರಮುಖ ಹಣ್ಣುಗಳಲ್ಲೊಂದು. ಇದು ದೀರ್ಘಕಾಲಿಕ ಬೆಳೆ ಕೂಡ ಹೌದು. ಚೆನ್ನಾಗಿ ಬಿಸಿಲು ಬೀಳುವ ಪ್ರದೇಶಗಳಲ್ಲಿ ಸಪೋಟ ಕೃಷಿ ಮಾಡಬಹುದು. ಇದು ಹಲವು ವರ್ಷಗಳ ಕಾಲ ಇಳುವರಿ ನೀಡುತ್ತದೆ. ಇತರ ಕೃಷಿಗೆ ಹೋಲಿಸಿದರೆ ಇದರ ನಿರ್ವಹಣೆ ಸುಲಭ. ಕೊಯ್ಲು ಮಾಡುವ ವೇಳೆ ಕಾಯಿಗಳಿಗೆ ಪೆಟ್ಟಾಗದಂತೆ ಎಚ್ಚರ ವಹಿಸಬೇಕಾದ್ದು ಅಗತ್ಯ.
ಸಪೋಟ ಮಧ್ಯಮಗಾತ್ರದ ಮರವಾಗಿದ್ದು, ತಿಳಿ ಹಸುರು ಬಣ್ಣದ ಎಲೆಗಳನ್ನು ಹೊಂದಿವೆ. ಉರುಟು ಅಥವಾ ಅಂಡಾಕಾರದ ಕಾಯಿ ಗಳನ್ನು ಬಿಡುತ್ತವೆ. ಹಣ್ಣಿನಲ್ಲಿ 2ರಿಂದ 6ರ ವರೆಗೆ ಕಪ್ಪು ಬಣ್ಣದ ಬೀಜಗಳಿರುತ್ತವೆ.
ವೈಜ್ಞಾನಿಕವಾಗಿ ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು, ಸಸ್ಯಶಾಸ್ತ್ರದಲ್ಲಿ ಮಣಿಕರ ಸಪೋಟ ((Manikara zapota)ಎಂದು ಕರೆಯಲಾಗು¤ತದೆ. ಸಪೋಟದ ಮೂಲ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋ ಎನ್ನಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿದೆ.
ಇದನ್ನೂ ಓದಿ:ಏಕದಿನದ ಯಶಸ್ವಿ ಚೇಸಿಂಗ್ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್ ಚೇಸ್
ಕೃಷಿ ಹೇಗೆ ?
ಸಪೋಟ ಸ್ವಲ್ಪ ದೊಡ್ಡ ಗಿಡವಾಗಿರುವುದರಿಂದ ಮತ್ತು ಬೇರುಗಳು ಹೆಚ್ಚು ಆಳದವರೆಗೆ ಹೋಗುವುದರಿಂದ ದೊಡ್ಡ ಗಾತ್ರದ ಪಾಟ್ ಗಳಲ್ಲಿ ಇದನ್ನು ಬೆಳೆಸಬಹುದು. ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ವಾರ ಬಿಟ್ಟು ಬಳಿಕ ಬೀಜ ಬಿತ್ತಬೇಕು. ನರ್ಸರಿಗಳಿಂದ ಕಸಿ ಕಟ್ಟಿದ ಸಸಿಯನ್ನೂ ತಂದೂ ನೆಡಬಹುದು. ಗಿಡಕ್ಕೆ ನೀರು, ಗೊಬ್ಬರ, ಸೊಪ್ಪು ಹಾಕುವುದು ಉತ್ತಮ. ಆರಂಭದಲ್ಲಿ 15 ದಿನ ನಿರಂತರ ನೀರುಣಿಸುತ್ತಿರಬೇಕು. ಬಳಿಕ ಎರಡು-ಮೂರು ದಿನಗಳಿಗೊಮ್ಮೆ ನೀರು ಹಾಕಿದರೆ ಸಾಕು.
ಪ್ರತಿ ಎರಡರಿಂದ ಮೂರು ತಿಂಗಳುಗಳಿಗೊಮ್ಮೆ ಸಾವಯವಗೊಬ್ಬರ ಹಾಕಿದರೆ ಉತ್ತಮ ಇಳುವರಿ ಪಡೆಯಲು ಸಹಕಾರಿ. ಸಾಮಾನ್ಯವಾಗಿ ಚಿಕ್ಕು ನಾಟಿ
ಮಾಡಿದ 3 ವರ್ಷಗಳಲ್ಲಿ ಫಸಲು ಲಭಿಸುತ್ತದೆ. ಕಸಿ ತಳಿಗಳಾದರೆ ಇನ್ನೂ ಬೇಗನೆ ದೊರೆಯಬಹುದು. ಇದಕ್ಕೆ ಎಲೆಚುಕ್ಕಿ ರೋಗ, ಕಾಂಡ ಕೊರಕ, ಹಣ್ಣು ಕೊರಕ,
ಬಿಳಿಹೇನು, ಕರಿಹೇನು, ತಿಗಣೆ ಮೊದಲಾದ ರೋಗ, ವಿವಿಧ ತರಹದ ಕೀಟ ಬಾಧೆ ತಡೆಯಲು ಬೋಡೋ ಮಿಶ್ರಣ, ಜೀವಾಮೃತ ಸಿಂಪಡಣೆ ಮಾಡಬಹುದು.
ತಳಿಗಳು
ಸ್ಥಳೀಯ ತಳಿ, ಅಲಹಾಬಾದ್, ಕಾಳಿಪಟ್ಟಿ, ಕ್ರಿಕೆಟ್ ಬಾಲ್, ಡಿಎಚ್‌ಎಸ್- 1,2, ಸಿಒ- 1 ಇತ್ಯಾದಿಗಳು ಪ್ರಮುಖ ಸಪೋಟ ತಳಿಗಳಾಗಿವೆ.
ಮಣ್ಣು ಮತ್ತು ಹವಾಗುಣ
ಸಾಮಾನ್ಯವಾಗಿ ಇದನ್ನು ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯ ಬಹುದು. ಆದರೆ ಕೆಂಪು ಗೊಡ್ಡು ಮಣ್ಣು, ಫಲವತ್ತಾದ ಕಪ್ಪು ಮಣ್ಣು ಇದರ ಕೃಷಿಗೆ ಸೂಕ್ತ. ನೀರು ಇಂಗಿ ಹೋಗುವಂತಿರಬೇಕು. ಸಮಶೀತೋಷ್ಣದ ಹವಾಗುಣ, ಚೆನ್ನಾಗಿ ಬಿಸಿಲು ಬೀಳುವ ಪ್ರದೇಶ ಸಪೋಟ ಬೆಳೆಗೆ ಉತ್ತಮ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ
ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್